আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

পৃষ্ঠা নং:close

external-link copy
55 : 9

فَلَا تُعْجِبْكَ اَمْوَالُهُمْ وَلَاۤ اَوْلَادُهُمْ ؕ— اِنَّمَا یُرِیْدُ اللّٰهُ لِیُعَذِّبَهُمْ بِهَا فِی الْحَیٰوةِ الدُّنْیَا وَتَزْهَقَ اَنْفُسُهُمْ وَهُمْ كٰفِرُوْنَ ۟

ಅವರ ಸಂಪತ್ತುಗಳು ಮತ್ತು ಸಂತಾನಗಳು ನಿಮ್ಮನು ಚಕಿತಗೊಳಿಸದಿರಲಿ. ಅದರ ಮೂಲಕ ಅಲ್ಲಾಹನು ಇಹಲೋಕ ಜೀವನದಲ್ಲೇ ಅವರನ್ನು ಶಿಕ್ಷಿಸಲೆಂದು ಮತ್ತು ಅವರ ಸತ್ಯನಿಷೇಧದ ಸ್ಥಿತಿಯಲ್ಲಿ ಅವರು ಪ್ರಾಣ ಹರಣ ಮಾಡಬೇಕೆಂದು ಇಚ್ಛಿಸುತ್ತಾನೆ. info
التفاسير:

external-link copy
56 : 9

وَیَحْلِفُوْنَ بِاللّٰهِ اِنَّهُمْ لَمِنْكُمْ ؕ— وَمَا هُمْ مِّنْكُمْ وَلٰكِنَّهُمْ قَوْمٌ یَّفْرَقُوْنَ ۟

ನಾವು ನಿಮ್ಮವರೇ ಆಗಿದ್ದೇವೆಂದು ಅವರು ಅಲ್ಲಾಹನ ಮೇಲೆ ಆಣೆಯಿಟ್ಟು ಹೇಳುತ್ತಾರೆ. ವಸ್ತುತಃ ಅವರು ನಿಮ್ಮವರಲ್ಲ. ಆದರೆ ಅವರು ರಣಹೇಡಿ ಜನರಾಗಿದ್ದಾರೆ. info
التفاسير:

external-link copy
57 : 9

لَوْ یَجِدُوْنَ مَلْجَاً اَوْ مَغٰرٰتٍ اَوْ مُدَّخَلًا لَّوَلَّوْا اِلَیْهِ وَهُمْ یَجْمَحُوْنَ ۟

ಇನ್ನು ಅವರು ಯಾವುದಾದರೂ ಅಭಯಸ್ಥಾನವನ್ನು ಅಥವಾ ಗುಹೆಯನ್ನು ಅಥವಾ ದ್ವಾರವನ್ನು ಕಂಡರೆ ಅದರೆಡೆಗೆ ಧಾವಂತದಿAದ ಹಗ್ಗ ಕಳಚಿ ಓಡುತ್ತಾರೆ. info
التفاسير:

external-link copy
58 : 9

وَمِنْهُمْ مَّنْ یَّلْمِزُكَ فِی الصَّدَقٰتِ ۚ— فَاِنْ اُعْطُوْا مِنْهَا رَضُوْا وَاِنْ لَّمْ یُعْطَوْا مِنْهَاۤ اِذَا هُمْ یَسْخَطُوْنَ ۟

ಕಪಟಿಗಳಲ್ಲಿ ದಾನ ಧರ್ಮಗಳ ವಿತರಣೆಯ ವಿಷಯದಲ್ಲಿ ನಿಮ್ಮನ್ನು (ತಾರತಮ್ಯ ಮಾಡುತ್ತಾರೆಂದು) ದೋಷಿಸುವವರು ಕೆಲವರಿದ್ದಾರೆ. ಆದ್ದರಿಂದ ಅವರಿಷ್ಟದಂತೆ ಅವರಿಗೇನಾದರೂ ಲಭಿಸಿದರೆ ಅವರು ಸಂತೃಪ್ತರಾಗಿರುವರು ಮತ್ತು ಅದರಿಂದ ಅವರಿಗೆ ಸಿಗದಿದ್ದರೆ ಕೂಡಲೇ ಅವರು ಕುಪಿತರಾಗುತ್ತಾರೆ. info
التفاسير:

external-link copy
59 : 9

وَلَوْ اَنَّهُمْ رَضُوْا مَاۤ اٰتٰىهُمُ اللّٰهُ وَرَسُوْلُهٗ ۙ— وَقَالُوْا حَسْبُنَا اللّٰهُ سَیُؤْتِیْنَا اللّٰهُ مِنْ فَضْلِهٖ وَرَسُوْلُهٗۤ ۙ— اِنَّاۤ اِلَی اللّٰهِ رٰغِبُوْنَ ۟۠

ಇನ್ನು ಅವರು ಅಲ್ಲಾಹನ ಮತ್ತು ಅವನ ಸಂದೇಶವಾಹಕರು ನೀಡಿರುವುದರಲ್ಲಿ ತೃಪ್ತಿಪಟ್ಟು ಮತ್ತು ನಮಗೆ ಅಲ್ಲಾಹನು ಸಾಕು, ಅಲ್ಲಾಹನು ತನ್ನ ಅನುಗ್ರಹದಿಂದ ನೀಡುವನು ಮತ್ತು ಅವನ ಸಂದೇಶವಾಹಕರು ಸಹ. ನಾವು ಅಲ್ಲಾಹನೆಡೆಗೆ ನಿರೀಕ್ಷೆಯನ್ನಿರಿಸಿಕೊಂಡಿದ್ದೇವೆAದು ಹೇಳಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. info
التفاسير:

external-link copy
60 : 9

اِنَّمَا الصَّدَقٰتُ لِلْفُقَرَآءِ وَالْمَسٰكِیْنِ وَالْعٰمِلِیْنَ عَلَیْهَا وَالْمُؤَلَّفَةِ قُلُوْبُهُمْ وَفِی الرِّقَابِ وَالْغٰرِمِیْنَ وَفِیْ سَبِیْلِ اللّٰهِ وَابْنِ السَّبِیْلِ ؕ— فَرِیْضَةً مِّنَ اللّٰهِ ؕ— وَاللّٰهُ عَلِیْمٌ حَكِیْمٌ ۟

ವಾಸ್ತವದಲ್ಲಿ ಕಡ್ಡಾಯ ದಾನಧರ್ಮಗಳು ಬಡವರಿಗೆ, ನಿರ್ಗತಿಕರಿಗೆ ಅದಕ್ಕಾಗಿ ಕಾರ್ಯನಿರ್ವಹಿಸುವವರಿಗೆ, ಮನವೊಲಿಸಲು ಬೇಕಾದವರಿಗೆ, ದಾಸ್ಯ ವಿಮೋಚನೆಗೆ, ಸಾಲದಲ್ಲಿ ಮುಳುಗಿರುವವರಿಗೆ, ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಿಗೆ ಮತ್ತು ಪ್ರಯಾಣಿರಿಗೆ ಮಾತ್ರವಾಗಿದೆ. ಇದು ಅಲ್ಲಾಹನ ವತಿಯಿಂದ ಕಡ್ಡಾಯಗೊಳಿಸಲಾದ ನಿರ್ಣಯವಾಗಿದೆ ಮತ್ತು ಅಲ್ಲಾಹನು ಸರ್ವಜ್ಞಾನಿಯು, ಯುಕ್ತಿವಂತನೂ ಆಗಿದ್ದಾನೆ. info
التفاسير:

external-link copy
61 : 9

وَمِنْهُمُ الَّذِیْنَ یُؤْذُوْنَ النَّبِیَّ وَیَقُوْلُوْنَ هُوَ اُذُنٌ ؕ— قُلْ اُذُنُ خَیْرٍ لَّكُمْ یُؤْمِنُ بِاللّٰهِ وَیُؤْمِنُ لِلْمُؤْمِنِیْنَ وَرَحْمَةٌ لِّلَّذِیْنَ اٰمَنُوْا مِنْكُمْ ؕ— وَالَّذِیْنَ یُؤْذُوْنَ رَسُوْلَ اللّٰهِ لَهُمْ عَذَابٌ اَلِیْمٌ ۟

ಕಪಟಿಗಳಲ್ಲಿ ಕೆಲವರು ಪೈಗಂಬರರಿಗೆ ಕಿರುಕುಳ ಕೊಡುವವರೂ ಇದ್ದಾರೆ. ಪೈಗಂಬರರು ಸತ್ಯವಿರಲಿ ಸುಳ್ಳಾಗಿರಲಿ ಎಲ್ಲವನ್ನು ಆಲಿಸುತ್ತಾರೆ ಎಂದು ಅವರು (ಕಪಟಿಗಳು) ಹೇಳುತ್ತಾರೆ. ಹೇಳಿರಿ: ಅವರು ನಿಮ್ಮ ಒಳಿತಿಗೋಸ್ಕರವೇ ಆಲಿಸುತ್ತಾರೆ. ಅವರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾರೆ. ಮತ್ತು ವಿಶ್ವಾಸಿಗಳ ಮಾತನ್ನು ದೃಢವಾಗಿ ನಂಬುತ್ತಾರೆ. ನಿಮ್ಮ ಪೈಕಿ ಸತ್ಯವಿಶ್ವಾಸ ಹೊಂದಿದವರಿಗೆ ಅವರು ಕಾರುಣ್ಯವಾಗಿದ್ದಾರೆ. ಅಲ್ಲಾಹನ ಸಂದೇಶವಾಹಕರಿಗೆ ಯಾರು ಕಿರುಕುಳ ಕೊಡುತ್ತಾರೋ ಅವರಿಗೆ ವೇದನಾಜನಕ ಶಿಕ್ಷೆಯಿದೆ. info
التفاسير: