ಆಗ ಅವರ (ಇಬ್ರಾಹೀಮರ) ಜನರ ಉತ್ತರವು ಇದು ಮಾತ್ರವಾಗಿತ್ತು: “ನೀವು ಅವನನ್ನು ಕೊಲ್ಲಿರಿ ಅಥವಾ ಸುಟ್ಟು ಬಿಡಿ.” ಆಗ ಅಲ್ಲಾಹು ಅವರನ್ನು ಬೆಂಕಿಯಿಂದ ರಕ್ಷಿಸಿದನು. ವಿಶ್ವಾಸವಿಡುವ ಜನರಿಗೆ ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ.
ಇಬ್ರಾಹೀಮ್ ಹೇಳಿದರು: “ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು (ದೇವರುಗಳಾಗಿ) ಸ್ವೀಕರಿಸಿರುವುದು ಇಹಲೋಕ ಜೀವನದಲ್ಲಿ ನೀವು ಪರಸ್ಪರ ಹೊಂದಿರುವ ಗೆಳೆತನದ ಆಧಾರದಲ್ಲಿ ಮಾತ್ರವಾಗಿದೆ. ಆದರೆ ಪುನರುತ್ಥಾನದ ದಿನದಂದು ನೀವು ಒಬ್ಬರನ್ನೊಬ್ಬರು ನಿಷೇಧಿಸುವಿರಿ ಮತ್ತು ಒಬ್ಬರನ್ನೊಬ್ಬರು ಶಪಿಸುವಿರಿ. ನಿಮ್ಮ ವಾಸಸ್ಥಳವು ನರಕವಾಗಿದೆ. ನಿಮಗೆ ಯಾವುದೇ ಸಹಾಯಕರು ಇರುವುದಿಲ್ಲ.”
ಆಗ ಲೂತ್ ಅವರಲ್ಲಿ ವಿಶ್ವಾಸವಿಟ್ಟರು. ಇಬ್ರಾಹೀಮ್ ಹೇಳಿದರು: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ವಲಸೆ (ಹಿಜ್ರ) ಮಾಡುತ್ತೇನೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.”[1]
[1] ಲೂತ್ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿ ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ರವರ ಸಹೋದರನ ಮಗ. ಇವರು ಇರಾಕಿನಲ್ಲಿ ವಾಸವಾಗಿದ್ದರು. ನಂತರ ಅವರು ಪ್ಯಾಲಸ್ತೀನ್‌ಗೆ ವಲಸೆ ಮಾಡಿದರು. ಲೂತ್ ಸದೂಮ್ ನಲ್ಲಿ ನೆಲೆಸಿದರು.
ನಾವು ಅವರಿಗೆ ಇಸ್‍ಹಾಕ್ ಮತ್ತು ಯಾಕೂಬರನ್ನು ದಯಪಾಲಿಸಿದೆವು. ಅವರ ಸಂತಾನದಲ್ಲೇ ಪ್ರವಾದಿತ್ವ ಮತ್ತು ಗ್ರಂಥವನ್ನು ನಿಶ್ಚಯಿಸಿದೆವು. ಇಹಲೋಕದಲ್ಲೂ ನಾವು ಅವರಿಗೆ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ನಿಶ್ಚಯವಾಗಿಯೂ ಅವರು ನೀತಿವಂತರಲ್ಲಿ ಸೇರುವರು.
ನೀವು (ಲೈಂಗಿಕ ತೃಷೆಯನ್ನು ತೀರಿಸಲು) ಪುರುಷರ ಬಳಿಗೆ ಹೋಗುತ್ತೀರಿ, ರಸ್ತೆಗಳಲ್ಲಿ ತಡೆಯೊಡ್ಡುತ್ತೀರಿ ಮತ್ತು ನಿಮ್ಮ ಸಭೆಗಳಲ್ಲೂ ಅಶ್ಲೀಲ ಕೃತ್ಯಗಳನ್ನು ಮಾಡುತ್ತೀರಿ.” ಆಗ ಅವರ ಜನರ ಉತ್ತರವು ಇದು ಮಾತ್ರವಾಗಿತ್ತು: “ನೀನು ಸತ್ಯವಂತನಾಗಿದ್ದರೆ ಅಲ್ಲಾಹನ ಶಿಕ್ಷೆಯನ್ನು ತಂದು ತೋರಿಸು.”