വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ

പേജ് നമ്പർ:close

external-link copy
24 : 29

فَمَا كَانَ جَوَابَ قَوْمِهٖۤ اِلَّاۤ اَنْ قَالُوا اقْتُلُوْهُ اَوْ حَرِّقُوْهُ فَاَنْجٰىهُ اللّٰهُ مِنَ النَّارِ ؕ— اِنَّ فِیْ ذٰلِكَ لَاٰیٰتٍ لِّقَوْمٍ یُّؤْمِنُوْنَ ۟

ಆಗ ಅವರ (ಇಬ್ರಾಹೀಮರ) ಜನರ ಉತ್ತರವು ಇದು ಮಾತ್ರವಾಗಿತ್ತು: “ನೀವು ಅವನನ್ನು ಕೊಲ್ಲಿರಿ ಅಥವಾ ಸುಟ್ಟು ಬಿಡಿ.” ಆಗ ಅಲ್ಲಾಹು ಅವರನ್ನು ಬೆಂಕಿಯಿಂದ ರಕ್ಷಿಸಿದನು. ವಿಶ್ವಾಸವಿಡುವ ಜನರಿಗೆ ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ. info
التفاسير:

external-link copy
25 : 29

وَقَالَ اِنَّمَا اتَّخَذْتُمْ مِّنْ دُوْنِ اللّٰهِ اَوْثَانًا ۙ— مَّوَدَّةَ بَیْنِكُمْ فِی الْحَیٰوةِ الدُّنْیَا ۚ— ثُمَّ یَوْمَ الْقِیٰمَةِ یَكْفُرُ بَعْضُكُمْ بِبَعْضٍ وَّیَلْعَنُ بَعْضُكُمْ بَعْضًا ؗ— وَّمَاْوٰىكُمُ النَّارُ وَمَا لَكُمْ مِّنْ نّٰصِرِیْنَ ۟ۗۖ

ಇಬ್ರಾಹೀಮ್ ಹೇಳಿದರು: “ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು (ದೇವರುಗಳಾಗಿ) ಸ್ವೀಕರಿಸಿರುವುದು ಇಹಲೋಕ ಜೀವನದಲ್ಲಿ ನೀವು ಪರಸ್ಪರ ಹೊಂದಿರುವ ಗೆಳೆತನದ ಆಧಾರದಲ್ಲಿ ಮಾತ್ರವಾಗಿದೆ. ಆದರೆ ಪುನರುತ್ಥಾನದ ದಿನದಂದು ನೀವು ಒಬ್ಬರನ್ನೊಬ್ಬರು ನಿಷೇಧಿಸುವಿರಿ ಮತ್ತು ಒಬ್ಬರನ್ನೊಬ್ಬರು ಶಪಿಸುವಿರಿ. ನಿಮ್ಮ ವಾಸಸ್ಥಳವು ನರಕವಾಗಿದೆ. ನಿಮಗೆ ಯಾವುದೇ ಸಹಾಯಕರು ಇರುವುದಿಲ್ಲ.” info
التفاسير:

external-link copy
26 : 29

فَاٰمَنَ لَهٗ لُوْطٌ ۘ— وَقَالَ اِنِّیْ مُهَاجِرٌ اِلٰی رَبِّیْ ؕ— اِنَّهٗ هُوَ الْعَزِیْزُ الْحَكِیْمُ ۟

ಆಗ ಲೂತ್ ಅವರಲ್ಲಿ ವಿಶ್ವಾಸವಿಟ್ಟರು. ಇಬ್ರಾಹೀಮ್ ಹೇಳಿದರು: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ವಲಸೆ (ಹಿಜ್ರ) ಮಾಡುತ್ತೇನೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.”[1] info

[1] ಲೂತ್ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿ ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ರವರ ಸಹೋದರನ ಮಗ. ಇವರು ಇರಾಕಿನಲ್ಲಿ ವಾಸವಾಗಿದ್ದರು. ನಂತರ ಅವರು ಪ್ಯಾಲಸ್ತೀನ್‌ಗೆ ವಲಸೆ ಮಾಡಿದರು. ಲೂತ್ ಸದೂಮ್ ನಲ್ಲಿ ನೆಲೆಸಿದರು.

التفاسير:

external-link copy
27 : 29

وَوَهَبْنَا لَهٗۤ اِسْحٰقَ وَیَعْقُوْبَ وَجَعَلْنَا فِیْ ذُرِّیَّتِهِ النُّبُوَّةَ وَالْكِتٰبَ وَاٰتَیْنٰهُ اَجْرَهٗ فِی الدُّنْیَا ۚ— وَاِنَّهٗ فِی الْاٰخِرَةِ لَمِنَ الصّٰلِحِیْنَ ۟

ನಾವು ಅವರಿಗೆ ಇಸ್‍ಹಾಕ್‍ ಮತ್ತು ಯಾ‌ಕೂಬರನ್ನು ದಯಪಾಲಿಸಿದೆವು. ಅವರ ಸಂತಾನದಲ್ಲೇ ಪ್ರವಾದಿತ್ವ ಮತ್ತು ಗ್ರಂಥವನ್ನು ನಿಶ್ಚಯಿಸಿದೆವು. ಇಹಲೋಕದಲ್ಲೂ ನಾವು ಅವರಿಗೆ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ನಿಶ್ಚಯವಾಗಿಯೂ ಅವರು ನೀತಿವಂತರಲ್ಲಿ ಸೇರುವರು. info
التفاسير:

external-link copy
28 : 29

وَلُوْطًا اِذْ قَالَ لِقَوْمِهٖۤ اِنَّكُمْ لَتَاْتُوْنَ الْفَاحِشَةَ ؗ— مَا سَبَقَكُمْ بِهَا مِنْ اَحَدٍ مِّنَ الْعٰلَمِیْنَ ۟

ಲೂತ್‍ರನ್ನೂ ನೆನಪಿಸಿಕೊಳ್ಳಿ. ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಸರ್ವಲೋಕಗಳ ಜನರಲ್ಲಿ ಈ ತನಕ ಯಾರೂ ಮಾಡದ ನೀಚಕೃತ್ಯವನ್ನು ನೀವು ಮಾಡುತ್ತಿದ್ದೀರಿ. info
التفاسير:

external-link copy
29 : 29

اَىِٕنَّكُمْ لَتَاْتُوْنَ الرِّجَالَ وَتَقْطَعُوْنَ السَّبِیْلَ ۙ۬— وَتَاْتُوْنَ فِیْ نَادِیْكُمُ الْمُنْكَرَ ؕ— فَمَا كَانَ جَوَابَ قَوْمِهٖۤ اِلَّاۤ اَنْ قَالُوا ائْتِنَا بِعَذَابِ اللّٰهِ اِنْ كُنْتَ مِنَ الصّٰدِقِیْنَ ۟

ನೀವು (ಲೈಂಗಿಕ ತೃಷೆಯನ್ನು ತೀರಿಸಲು) ಪುರುಷರ ಬಳಿಗೆ ಹೋಗುತ್ತೀರಿ, ರಸ್ತೆಗಳಲ್ಲಿ ತಡೆಯೊಡ್ಡುತ್ತೀರಿ ಮತ್ತು ನಿಮ್ಮ ಸಭೆಗಳಲ್ಲೂ ಅಶ್ಲೀಲ ಕೃತ್ಯಗಳನ್ನು ಮಾಡುತ್ತೀರಿ.” ಆಗ ಅವರ ಜನರ ಉತ್ತರವು ಇದು ಮಾತ್ರವಾಗಿತ್ತು: “ನೀನು ಸತ್ಯವಂತನಾಗಿದ್ದರೆ ಅಲ್ಲಾಹನ ಶಿಕ್ಷೆಯನ್ನು ತಂದು ತೋರಿಸು.” info
التفاسير:

external-link copy
30 : 29

قَالَ رَبِّ انْصُرْنِیْ عَلَی الْقَوْمِ الْمُفْسِدِیْنَ ۟۠

ಲೂತ್ ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ಕಿಡಿಗೇಡಿಗಳಾದ ಈ ಜನರ ವಿರುದ್ಧ ನನಗೆ ಸಹಾಯ ಮಾಡು.” info
التفاسير: