ترجمة معاني القرآن الكريم - الترجمة الكنادية - حمزة بتور

رقم الصفحة:close

external-link copy
60 : 23

وَالَّذِیْنَ یُؤْتُوْنَ مَاۤ اٰتَوْا وَّقُلُوْبُهُمْ وَجِلَةٌ اَنَّهُمْ اِلٰی رَبِّهِمْ رٰجِعُوْنَ ۟ۙ

ಕೊಡುವುದೆಲ್ಲವನ್ನೂ ಕೊಡುವವರು ಮತ್ತು ನಮಗೆ ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಬೇಕಾಗಿದೆಯೆಂದು ಹೃದಯಗಳಲ್ಲಿ ಭಯವನ್ನು ಹೊಂದಿರುವವರು ಯಾರೋ, info
التفاسير:

external-link copy
61 : 23

اُولٰٓىِٕكَ یُسٰرِعُوْنَ فِی الْخَیْرٰتِ وَهُمْ لَهَا سٰبِقُوْنَ ۟

ಅವರೇ ಒಳಿತಿನ ವಿಷಯಗಳಲ್ಲಿ ತ್ವರೆ ಮಾಡುವವರು. ಅವರೇ ಅದರಲ್ಲಿ ಮುಂಚೂಣಿಯಲ್ಲಿರುವವರು. info
التفاسير:

external-link copy
62 : 23

وَلَا نُكَلِّفُ نَفْسًا اِلَّا وُسْعَهَا وَلَدَیْنَا كِتٰبٌ یَّنْطِقُ بِالْحَقِّ وَهُمْ لَا یُظْلَمُوْنَ ۟

ಯಾವುದೇ ಮನುಷ್ಯನ ಮೇಲೂ ಅವನ ಸಾಮರ್ಥ್ಯಕ್ಕಿಂತ ಹೆಚ್ಚಿನದ್ದನ್ನು ನಾವು ಹೊರಿಸುವುದಿಲ್ಲ. ಸತ್ಯ ಸಮೇತ ಮಾತನಾಡುವ ಒಂದು ಗ್ರಂಥವು ನಮ್ಮ ಬಳಿಯಿದೆ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. info
التفاسير:

external-link copy
63 : 23

بَلْ قُلُوْبُهُمْ فِیْ غَمْرَةٍ مِّنْ هٰذَا وَلَهُمْ اَعْمَالٌ مِّنْ دُوْنِ ذٰلِكَ هُمْ لَهَا عٰمِلُوْنَ ۟

ಆದರೆ, ಅವರ ಹೃದಯಗಳು ಈ ವಿಷಯದಲ್ಲಿ ನಿರ್ಲಕ್ಷ್ಯವಾಗಿವೆ. ಅವರಿಗೆ ಇದರ ಹೊರತಾಗಿರುವ ಬೇರೆ ದುಷ್ಕರ್ಮಗಳೂ ಇವೆ. ಅವರು ಅದನ್ನು ಮಾಡುತ್ತಿದ್ದಾರೆ. info
التفاسير:

external-link copy
64 : 23

حَتّٰۤی اِذَاۤ اَخَذْنَا مُتْرَفِیْهِمْ بِالْعَذَابِ اِذَا هُمْ یَجْـَٔرُوْنَ ۟ؕ

ಎಲ್ಲಿಯವರೆಗೆಂದರೆ, ನಾವು ಅವರಲ್ಲಿನ ಸಂಪನ್ನರನ್ನು ಶಿಕ್ಷೆಯ ಮೂಲಕ ಹಿಡಿದುಕೊಂಡಾಗ ಅಗೋ! ಅವರು ಗೋಗರೆಯುತ್ತಿದ್ದಾರೆ. info
التفاسير:

external-link copy
65 : 23

لَا تَجْـَٔرُوا الْیَوْمَ ۫— اِنَّكُمْ مِّنَّا لَا تُنْصَرُوْنَ ۟

ಇಂದು ನೀವು ಗೋಗರೆಯಬೇಕಾಗಿಲ್ಲ. ನಿಶ್ಚಯವಾಗಿಯೂ ನಿಮಗೆ ನಮ್ಮ ಕಡೆಯಿಂದ ಸಹಾಯವು ದೊರೆಯುವುದಿಲ್ಲ. info
التفاسير:

external-link copy
66 : 23

قَدْ كَانَتْ اٰیٰتِیْ تُتْلٰی عَلَیْكُمْ فَكُنْتُمْ عَلٰۤی اَعْقَابِكُمْ تَنْكِصُوْنَ ۟ۙ

ನನ್ನ ವಚನಗಳನ್ನು ನಿಮಗೆ ಓದಿಕೊಡಲಾಗುತ್ತಿತ್ತು. ಆಗ ನೀವು ನಿಮ್ಮ ಹಿಮ್ಮಡಿಗಳಲ್ಲಿ ಹಿಂದಕ್ಕೆ ತಿರುಗಿ ನಡೆಯುತ್ತಿದ್ದಿರಿ. info
التفاسير:

external-link copy
67 : 23

مُسْتَكْبِرِیْنَ ۖۚۗ— بِهٖ سٰمِرًا تَهْجُرُوْنَ ۟

ಅಹಂಕಾರದಿಂದ ವರ್ತಿಸುತ್ತಾ (ನಡೆಯುತ್ತಿದ್ದಿರಿ). ಅದೊಂದು ರಾತ್ರಿ ಕಥೆಯೋ ಎಂಬಂತೆ ನೀವು ಅದರ (ಕುರ್‌ಆನ್‍ನ) ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಿರಿ. info
التفاسير:

external-link copy
68 : 23

اَفَلَمْ یَدَّبَّرُوا الْقَوْلَ اَمْ جَآءَهُمْ مَّا لَمْ یَاْتِ اٰبَآءَهُمُ الْاَوَّلِیْنَ ۟ؗ

ಅವರು ಈ ಮಾತಿನ (ಕುರ್‌ಆನಿನ) ಬಗ್ಗೆ ಆಳವಾಗಿ ಯೋಚಿಸುವುದಿಲ್ಲವೇ? ಅಥವಾ, ಅವರ ಪೂರ್ವಜರ ಬಳಿಗೆ ಬರದೇ ಇರುವಂತದ್ದು ಇವರ ಬಳಿಗೆ ಬಂದಿದೆಯೇ? info
التفاسير:

external-link copy
69 : 23

اَمْ لَمْ یَعْرِفُوْا رَسُوْلَهُمْ فَهُمْ لَهٗ مُنْكِرُوْنَ ۟ؗ

ಅವರಿಗೆ ಅವರ ಸಂದೇಶವಾಹಕರ ಪರಿಚಯವಿಲ್ಲದಿರುವುದರಿಂದ ಅವರು ಅವರನ್ನು ನಿಷೇಧಿಸುತ್ತಿದ್ದಾರೆಯೇ? info
التفاسير:

external-link copy
70 : 23

اَمْ یَقُوْلُوْنَ بِهٖ جِنَّةٌ ؕ— بَلْ جَآءَهُمْ بِالْحَقِّ وَاَكْثَرُهُمْ لِلْحَقِّ كٰرِهُوْنَ ۟

ಅವರಿಗೆ (ಪ್ರವಾದಿಗೆ) ಬುದ್ಧಿಭ್ರಮಣೆಯಾಗಿದೆಯೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಅವರ ಬಳಿಗೆ ಬಂದಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಸತ್ಯವನ್ನು ದ್ವೇಷಿಸುತ್ತಾರೆ. info
التفاسير:

external-link copy
71 : 23

وَلَوِ اتَّبَعَ الْحَقُّ اَهْوَآءَهُمْ لَفَسَدَتِ السَّمٰوٰتُ وَالْاَرْضُ وَمَنْ فِیْهِنَّ ؕ— بَلْ اَتَیْنٰهُمْ بِذِكْرِهِمْ فَهُمْ عَنْ ذِكْرِهِمْ مُّعْرِضُوْنَ ۟ؕ

ಒಂದು ವೇಳೆ ಸತ್ಯವು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದ್ದರೆ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಎಲ್ಲರೂ ನಾಶವಾಗುತ್ತಿದ್ದರು. ಅಲ್ಲ, ವಾಸ್ತವವಾಗಿ ನಾವು ಅವರಿಗೆ ನಮ್ಮ ಉಪದೇಶವನ್ನು ತಲುಪಿಸಿದ್ದೇವೆ. ಆದರೆ ಅವರು ಅವರಿಗೆ ನೀಡಲಾದ ಉಪದೇಶದಿಂದ ವಿಮುಖರಾಗಿದ್ದಾರೆ. info
التفاسير:

external-link copy
72 : 23

اَمْ تَسْـَٔلُهُمْ خَرْجًا فَخَرَاجُ رَبِّكَ خَیْرٌ ۖۗ— وَّهُوَ خَیْرُ الرّٰزِقِیْنَ ۟

ನೀವು ಅವರೊಡನೆ ಏನಾದರೂ ಪ್ರತಿಫಲವನ್ನು ಕೇಳುತ್ತಿದ್ದೀರಾ? ನಿಮಗಂತೂ ನಿಮ್ಮ ಪರಿಪಾಲಕನು (ಅಲ್ಲಾಹು) ಕೊಡುವ ಪ್ರತಿಫಲವೇ ಅತ್ಯುತ್ತಮವಾಗಿದೆ. ಅವನು ಉಪಜೀವನ ಒದಗಿಸುವವರಲ್ಲಿ ಅತಿಶ್ರೇಷ್ಠನಾಗಿದ್ದಾನೆ. info
التفاسير:

external-link copy
73 : 23

وَاِنَّكَ لَتَدْعُوْهُمْ اِلٰی صِرَاطٍ مُّسْتَقِیْمٍ ۟

ನಿಶ್ಚಯವಾಗಿಯೂ ನೀವು ಅವರನ್ನು ನೇರಮಾರ್ಗಕ್ಕೆ ಕರೆಯುತ್ತಿದ್ದೀರಿ. info
التفاسير:

external-link copy
74 : 23

وَاِنَّ الَّذِیْنَ لَا یُؤْمِنُوْنَ بِالْاٰخِرَةِ عَنِ الصِّرَاطِ لَنٰكِبُوْنَ ۟

ನಿಶ್ಚಯವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ಯಾರೋ ಅವರು ಆ ಮಾರ್ಗದಿಂದ ತಪ್ಪಿಹೋಗುತ್ತಿದ್ದಾರೆ. info
التفاسير: