ಅಲ್ಲಾಹನ ಮಾರ್ಗದಲ್ಲಿ ಪರಿಶ್ರಮಿಸಬೇಕಾದ ರೀತಿಯಲ್ಲೇ ಪರಿಶ್ರಮಿಸಿರಿ. ಅವನು ನಿಮ್ಮನ್ನು ಆರಿಸಿದ್ದಾನೆ. ಅವನು ನಿಮಗೆ ಧರ್ಮದಲ್ಲಿ ಯಾವುದೇ ಕಷ್ಟವನ್ನು ಮಾಡಿಲ್ಲ. ನಿಮ್ಮ ಪಿತಾಮಹರಾದ ಇಬ್ರಾಹೀಮರ ಧರ್ಮ. ಅವನು ಹಿಂದಿನ ಗ್ರಂಥಗಳಲ್ಲಿ ಮತ್ತು ಇದರಲ್ಲಿ (ಕುರ್‌ಆನಿನಲ್ಲಿ) ನಿಮಗೆ ಮುಸಲ್ಮಾನರೆಂದು ಹೆಸರಿಟ್ಟಿದ್ದಾನೆ. ಸಂದೇಶವಾಹಕರು ನಿಮ್ಮ ಮೇಲೆ ಸಾಕ್ಷಿಯಾಗಲು ಮತ್ತು ನೀವು ಜನರ ಮೇಲೆ ಸಾಕ್ಷಿಗಳಾಗಲು. ಆದ್ದರಿಂದ ನೀವು ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ಅಲ್ಲಾಹನನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಅವನೇ ನಿಮ್ಮ ಸಂರಕ್ಷಕ. ಅವನು ಎಷ್ಟು ಉತ್ತಮ ರಕ್ಷಕ! ಎಷ್ಟು ಉತ್ತಮ ಸಹಾಯಕ!