ನೀವು ನಿಮ್ಮ ಪ್ರಭುವಿನೊಂದಿಗೆ ಬೇಡಿಕೊಳ್ಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಆಗ ಅವನು ನಿಮ್ಮ ಕರೆಗೆ ಓಗೊಟ್ಟು, ನಾನು ನಿಮಗೆ ನಿರಂತರವಾಗಿ ಒಂದು ಸಾವಿರ ಮಲಕ್‌ಗಳ ಮೂಲಕ ಸಹಾಯ ಮಾಡುವೆನು ಎಂದನು.
ಮತ್ತು ಅಲ್ಲಾಹನ ಈ ಸಹಾಯವನ್ನು ನಿಮಗೆ ಶುಭವಾರ್ತೆಯಾಗಲೆಂದು ಮತ್ತು ನಿಮ್ಮ ಮನಸ್ಸುಗಳಿಗೆ ಶಾಂತಿ ಸಿಗಲೆಂದಾಗಿದೆ ಮತ್ತು ಸಹಾಯವು ಕೇವಲ ಅಲ್ಲಾಹನ ಕಡೆಯಿಂದಿರುತ್ತದೆ. ನಿಸ್ಸಂಶಯವಾಗಿಯು ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
ಅಲ್ಲಾಹನು ತನ್ನ ವತಿಯಿಂದ ನಿಮಗೆ ಮನಃ ಶಾಂತಿಯನ್ನು ನೀಡಲು ನಿಮ್ಮ ಮೇಲೆ ತೂಕಡಿಕೆಯನ್ನು ಇಳಿಸಿದ್ದನು ಮತ್ತು ನಿಮ್ಮನ್ನು ಶುದ್ಧೀಕರಿಸಲು, ಶೈತಾನಿನ ದುಷ್ಪೆçÃರಣೆಯನ್ನು ತಡೆಯಲು, ನಿಮ್ಮ ಹೃದಯಗಳನ್ನು ಸದೃಢಗೊಳಿಸಲು ಮತ್ತು ತನ್ಮೂಲಕ ನಿಮ್ಮ ಪಾದಗಳನ್ನು ಸ್ಥಿರಗೊಳಿಸಲು ಅವನು ನಿಮ್ಮ ಮೇಲೆ ಆಕಾಶದಿಂದ ನೀರು ಸುರಿಸಿದ್ದ ಸಂದರ್ಭವನ್ನು ಸ್ಮರಿಸಿರಿ.
ನಿಮ್ಮ ಪ್ರಭು ದೇವಚರರಿಗೆ ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ, ಆದ್ದರಿಂದ ನೀವು ಸತ್ಯವಿಶ್ವಾಸಿಗಳಿಗೆ ಧೈರ್ಯ ತುಂಬಿರಿ. ಸದ್ಯವೇ ನಾನು ಸತ್ಯನಿಷೇಧಿಗಳ ಹೃದಯಗಳಲ್ಲಿ ಭಯವನ್ನು ಹಾಕಲಿರುವೆನು. ಇನ್ನು ನೀವು ಅವರ ಕೊರಳುಗಳ ಮೇಲೆ ಹೊಡೆಯಿರಿ ಮತ್ತು ಅವರ ಪ್ರತಿಯೊಂದು ಕೀಲುಗಳ ಮೇಲೆ ಹೊಡೆಯಿರಿ ಎಂದು ಅಲ್ಲಾಹನು ದೇವಚರರಿಗೆ ಆದೇಶ ನೀಡಿದ್ದ ಸಂದರ್ಭವನ್ನು ಸ್ಮರಿಸಿರಿ.
ಈ ಶಿಕ್ಷೆ ಅವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸಿದುವುದರ ಫಲವಾಗಿದೆ. ಯಾರು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ವಿರೋಧಿಸುತ್ತಾನೋ ನಿಸ್ಸಂಶಯವಾಗಿಯು ಅವರಿಗೆ ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
ಆದರೆ ಯುದ್ಧ ತಂತ್ರ ಬದಲಾವಣೆ ಮಾಡುವುದಕ್ಕಾಗಿ ಅಥವಾ (ತನ್ನ) ತಂಡವನ್ನು ಸೇರುವುದಕ್ಕಾಗಿ ವಿನಃ ಯಾರು ಆ ಸಂದರ್ಭದಲ್ಲಿ ಬೆನ್ನು ತಿರುಗಿಸಿ ಓಡುತ್ತಾನೋ ಅವನು ಅಲ್ಲಾಹನ ಕ್ರೋಧಕ್ಕೆ ಪಾತ್ರನಾಗುವನು ಮತ್ತು ಅವನ ವಾಸಸ್ಥಳವು ನರಕವಾಗಿರುವುದು. ಅದು ಅತ್ಯಂತ ನಿಕೃಷ್ಟ ತಾಣವಾಗಿದೆ!