ಓ ಪೈಗಂಬರÀರೇ ಅವರು ನಿಮ್ಮೊಂದಿಗೆ ಸಮರಾರ್ಜಿತ ಸೊತ್ತಿನ ಬಗ್ಗೆ ಕೇಳುತ್ತಾರೆ. ನೀವು ಹೇಳಿರಿ: ಸಮರಾರ್ಜಿತ ಸೊತ್ತು ಅಲ್ಲಾಹ್ ಮತ್ತು ಸಂದೇಶವಾಹಕರದ್ದಾಗಿದೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ನಿಮ್ಮ ಸಂಬAಧಗಳನ್ನು ಸುಧಾರಣೆ ಮಾಡಿಕೊಳ್ಳಿರಿ ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನೂ ಮತ್ತು ಸಂದೇಶವಾಹಕÀರನ್ನೂ ಅನುಸರಿಸಿರಿ.
ವಾಸ್ತವದಲ್ಲಿ ಸತ್ಯವಿಶ್ವಾಸಿಗಳು ಯಾರೆಂದರೆ ಅಲ್ಲಾಹನ ಪ್ರಸ್ತಾಪ ಅವರ ಮುಂದೆ ಬಂದಾಗ ಅವರ ಹೃದಯಗಳು ಕಂಪಿಸುತ್ತವೆ ಮತ್ತು ಅಲ್ಲಾಹನ ಸೂಕ್ತಿಗಳು ಅವರಿಗೆ ಪಠಿಸಲಾದರೆ ಅವು ಅವರ ವಿಶ್ವಾಸವನ್ನು ಅಧಿಕಗೊಳಿಸುತ್ತವೆ ಮತ್ತು ಅವರೇ ತಮ್ಮ ಪ್ರಭುವಿನ ಮೇಲೆ ಭರವಸೆಯಿಡುವವರು.
ಎರಡು ತಂಡಗಳ ಪೈಕಿ ಒಂದು ನಿಮ್ಮ ಪಾಲಾಗುವುದೆಂದು ಅಲ್ಲಾಹನು ನಿಮ್ಮೊಂದಿಗೆ ಮಾಡಿದ್ದ ವಾಗ್ದಾನವನ್ನು ಸ್ಮರಿಸಿರಿ ಮತ್ತು ನೀವು ನಿರಾಯುಧವಾದ ತಂಡವು ನಿಮ್ಮ ವಶಕ್ಕೆ ಬರಲೆಂದು ಆಶಿಸಿದ್ದಿರಿ ಮತ್ತು ಅಲ್ಲಾಹನು ತನ್ನ ಆಜ್ಞೆಗಳ ಮೂಲಕ ಸತ್ಯವನ್ನು ಸತ್ಯವನ್ನಾಗಿ ಮಾಡಲೆಂದೂ, ಸತ್ಯನಿಷೇಧಿಗಳನ್ನು ಬುಡಸಮೇತ ಕಿತ್ತೆಸೆಯಲೆಂದೂ ಇಚ್ಛಿಸಿದನು.