ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಇದು ಅವನು ದುಷ್ಕರ್ಮವೆಸಗುವವರಿಗೆ ಅವರ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲೆಂದು ಮತ್ತು ಒಳಿತನ್ನು ಮಾಡುವವರಿಗೆ ಅತ್ಯುತ್ತಮ ಪ್ರತಿಫಲ ನೀಡಲೆಂದಾಗಿದೆ.
ಅಂದರೆ ಮಹಾಪಾಪಗಳಿಂದ, ಅಶ್ಲೀಲ ಕೃತ್ಯಗಳಿಂದ ದೂರವಿರುವವರು, ಆದರೆ ಸಣ್ಣ ಪಾಪಗಳ ಹೊರತು, ನಿಸ್ಸಂಶಯವಾಗಿಯೂ ನಿಮ್ಮ ಪ್ರಭುವು ವಿಶಾಲವಾದ ಕ್ಷಮೆವುಳ್ಳವನಾಗಿದ್ದಾನೆ, ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಗರ್ಭಗಳಲ್ಲಿ ಭ್ರೂಣದಲ್ಲಿದ್ದಾಗಲೂ ನಿಮ್ಮನ್ನುಚೆನ್ನಾಗಿ ಬಲ್ಲನು. ಆದ್ದರಿಂದ ನೀವು ಆತ್ಮಪ್ರಶಂಸೆಯನ್ನು ಮಾಡದಿರಿ. ಖಂಡಿತವಾಗಿಯೂ ಅವನು ಭಯ ಭಕ್ತಿಯಿರಿಸಿದವರನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
التفاسير:
33:53
اَفَرَءَیْتَ الَّذِیْ تَوَلّٰی ۟ۙ
(ಓ ಪೈಗಂಬರರೇ) ನೀವು ವಿಮುಖನಾದವನನ್ನು ನೋಡಿದಿರಾ?
التفاسير:
34:53
وَاَعْطٰی قَلِیْلًا وَّاَكْدٰی ۟
ಅವನು ಸ್ವಲ್ಪ ಮಾತ್ರ ಕೊಟ್ಟನು ಮತ್ತು ತಡೆ ಹಿಡಿದನು.
التفاسير:
35:53
اَعِنْدَهٗ عِلْمُ الْغَیْبِ فَهُوَ یَرٰی ۟
ಅವನ ಬಳಿ ಅಗೋಚರ ಜ್ಞಾನವಿದೆಯೇ ? ಹೀಗೆ ಅವನು (ಎಲ್ಲವನ್ನು) ಕಾಣುತ್ತಿದ್ದಾನೆಯೇ?
التفاسير:
36:53
اَمْ لَمْ یُنَبَّاْ بِمَا فِیْ صُحُفِ مُوْسٰی ۟ۙ
ಮೂಸಾರ ಗ್ರಂಥದಲ್ಲಿರುವುದನ್ನು ಅವನಿಗೆ ತಿಳಿಸಲಾಗಿಲ್ಲವೇ ?
التفاسير:
37:53
وَاِبْرٰهِیْمَ الَّذِیْ وَ ۟ۙ
ಮತ್ತು ಪ್ರಾಮಾಣಿಕರಾದ ಇಬ್ರಾಹೀಮ್‌ರವರ ಗ್ರಂಥಗಳಲ್ಲಿರುವುದನ್ನು ಸಹ. (ಅವರು ದೌತ್ಯದ ಬಾದ್ಯತೆಯನ್ನು ಪೂರ್ಣಗೊಳಿಸಿದರು)
التفاسير:
38:53
اَلَّا تَزِرُ وَازِرَةٌ وِّزْرَ اُخْرٰی ۟ۙ
ಆ ವಿಷಯ ಪಾಪ ಭಾರಹೊರುವ ಯಾವೊಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಭಾರವನ್ನು ಹೊರಲಾರನು.
التفاسير:
39:53
وَاَنْ لَّیْسَ لِلْاِنْسَانِ اِلَّا مَا سَعٰی ۟ۙ
ಮನುಷ್ಯನಿಗೆ ತಾನು ಪರಿಶ್ರಮಿಸಿದುದರ ಹೊರತು ಬೇರೇನೂ ಇಲ್ಲವೆಂದು.
التفاسير:
40:53
وَاَنَّ سَعْیَهٗ سَوْفَ یُرٰی ۟
ಅವನ ಪರಿಶ್ರಮವನ್ನು ಸದ್ಯದಲ್ಲೇ ನೋಡಲಾಗುವುದು.
التفاسير:
41:53
ثُمَّ یُجْزٰىهُ الْجَزَآءَ الْاَوْفٰی ۟ۙ
ತರುವಾಯ ಅವನಿಗೆ ಸಂಪೂರ್ಣ ಪ್ರತಿಫಲವನ್ನು ನೀಡಲಾಗುವುದು.
التفاسير:
42:53
وَاَنَّ اِلٰی رَبِّكَ الْمُنْتَهٰی ۟ۙ
ನಿಸ್ಸಂಶಯವಾಗಿಯೂ (ಕೊನೆಗೆ) ಸಕಲರಿಗೂ ತಮ್ಮ ಪ್ರಭುವಿನೆಡೆಗೇ ತಲುಪಲಿಕ್ಕಿರುವುದು.
التفاسير:
43:53
وَاَنَّهٗ هُوَ اَضْحَكَ وَاَبْكٰی ۟ۙ
ನಿಶ್ಚಯವಾಗಿ ಅವನೇ (ಅಲ್ಲಾಹನು) ನಗಿಸುತ್ತಾನೆ ಹಾಗು ಅವನೇ ಅಳುವಂತೆ ಮಾಡುತ್ತಾನೆ.
التفاسير:
44:53
وَاَنَّهٗ هُوَ اَمَاتَ وَاَحْیَا ۟ۙ
ನಿಶ್ಚಯವಾಗಿ ಅವನೇ ಮರಣ ಕೊಡುತ್ತಾನೆ ಮತ್ತು ಜೀವ ನೀಡುತ್ತಾನೆ.