ಅಂದರೆ ಮಹಾಪಾಪಗಳಿಂದ, ಅಶ್ಲೀಲ ಕೃತ್ಯಗಳಿಂದ ದೂರವಿರುವವರು, ಆದರೆ ಸಣ್ಣ ಪಾಪಗಳ ಹೊರತು, ನಿಸ್ಸಂಶಯವಾಗಿಯೂ ನಿಮ್ಮ ಪ್ರಭುವು ವಿಶಾಲವಾದ ಕ್ಷಮೆವುಳ್ಳವನಾಗಿದ್ದಾನೆ, ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಗರ್ಭಗಳಲ್ಲಿ ಭ್ರೂಣದಲ್ಲಿದ್ದಾಗಲೂ ನಿಮ್ಮನ್ನುಚೆನ್ನಾಗಿ ಬಲ್ಲನು. ಆದ್ದರಿಂದ ನೀವು ಆತ್ಮಪ್ರಶಂಸೆಯನ್ನು ಮಾಡದಿರಿ. ಖಂಡಿತವಾಗಿಯೂ ಅವನು ಭಯ ಭಕ್ತಿಯಿರಿಸಿದವರನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.