ಇನ್ನು ಪತಿ ಪತ್ನಿಯರ ನಡುವೆ ನಿಮಗೆ ಒಡಕುವುಂಟಾಗುವುದೆAಬ ಭಯವಿದ್ದರೆ ಪತಿಯ ಕಡೆಯವರಿಂದ ಒಬ್ಬ ಮಧ್ಯಸ್ಥನನ್ನು, ಪತ್ನಿಯ ಕಡೆಯವರಿಂದ ಒಬ್ಬ ಮಧ್ಯಸ್ಥನನ್ನು ನಿಶ್ಚಯಿಸಿರಿ. ಅವರೀರ್ವರೂ ಸಂಧಾನ ಮಾಡಿಸುವುದನ್ನು ಬಯಸುವುದಾದರೆ ಅಲ್ಲಾಹನು ಅವರಿಬ್ಬರಲ್ಲಿ ಹೊಂದಾಣಿಕೆÉಯನ್ನು ಮೂಡಿಸುವನು. ಖಂಡಿತವಾಗಿಯು ಅಲ್ಲಾಹನು ಸರ್ವಜ್ಞನು, ಸಂಪೂರ್ಣಜ್ಞಾನಿಯೂ ಆಗಿರುವನು.