ಅಲ್ಲಾಹನು ಪ್ರವಾದಿಗಳೊಂದಿಗೆ ಕರಾರನ್ನು ಪಡೆದ ಸಂದರ್ಭವನ್ನು ಸ್ಮರಿಸಿರಿ. ನಾನು ನಿಮಗೆ ಗ್ರಂಥ ಮತ್ತು ಸುಜ್ಞಾನವನ್ನು ನೀಡಿ ಅನಂತರ ನಿಮ್ಮ ಬಳಿಯಿರುವುದನ್ನು ಸತ್ಯವೆಂದು ದೃಢಪಡಿಸುವ ಓರ್ವ ಸಂದೇಶವಾಹಕನನ್ನು ನಿಮ್ಮ ಬಳಿಗೆ ಬಂದರೆ ನೀವು ಅವನಲ್ಲಿ ವಿಶ್ವಾಸವನ್ನಿಡುವುದು ಹಾಗೂ ಅವನಿಗೆ ಸಹಾಯವನ್ನು ನೀಡುವುದು ನಿಮ್ಮ ಮೇಲೆ ಕಡ್ಡಾಯವಾಗಿದೆ. ತರುವಾಯ ಅಲ್ಲಾಹನು ಹೇಳಿದನು: ನೀವದನ್ನು ಒಪ್ಪಿಕೊಂಡು ಆ ವಿಷಯದಲ್ಲಿ ನನ್ನ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಿರಾ? ಅವರೆಲ್ಲರೂ ಹೇಳಿದರು: ನಾವು ಒಪ್ಪಿಕೊಂಡೆವು, ಅವನು ಹೇಳಿದನು: ಹಾಗಾದರೆ ನೀವು ಸಾಕ್ಷಿಗಳಾಗಿರಿ ಮತ್ತು ಸ್ವತಃ ನಾನೂ ನಿಮ್ಮೊಂದಿಗೆ ಸಾಕ್ಷಿಗಳಲ್ಲಿ ಸೇರುವೆನು.