ಅಲ್ಲಾಹನು ಗ್ರಂಥ ಮತ್ತು ಸುಜ್ಞಾನ ಹಾಗೂ ಪ್ರವಾದಿತ್ವವನ್ನು ನೀಡಿದಂತಹ ವ್ಯಕ್ತಿಯು ಜನರೊಂದಿಗೆ ನೀವು ಅಲ್ಲಾಹನ ಹೊರತು ನನ್ನ ದಾಸರಾಗಿರೆಂದು ಹೇಳುವುದು ಅಸಾಧ್ಯವಾಗಿದೆ. ಆದರೆ ನೀವು ಗ್ರಂಥವನ್ನು ಕಲಿಸುತ್ತಿರುವುದರ ನಿಮಿತ್ತ ಮತ್ತು ನಿಮ್ಮ ಈ ಗ್ರಂಥದ ಪಾರಾಯಣ ಮಾಡುವುದರ ನಿಮಿತ್ತ ನೀವು ಪ್ರಭುವಿನ ದಾಸರಾಗಿರಿ (ಎಂದು ಹೇಳುವನು)