ನಿಸ್ಸಂಶಯವಾಗಿ ಗ್ರಂಥದವರಲ್ಲಿ ಒಂದು ಗುಂಪು ಗ್ರಂಥವನ್ನು ಓದುವಾಗ ನಾಲಿಗೆಯನ್ನು ತಿರುಚುತ್ತಾರೆ. ಅವರು ಗ್ರಂಥದ ವಿಷಯವನ್ನು ಓದುತ್ತಾರೆಂದು ನೀವು ಭಾವಿಸಲಿಕ್ಕಾಗಿ ವಸ್ತುತಃ ಅದು ಗ್ರಂಥದ ವಿಷಯವಾಗಿರುವುದಿಲ್ಲ. ನಾವು ಓದುತ್ತಿರುವುದೆಲ್ಲ ಅಲ್ಲಾಹನ ಕಡೆಯಿಂದ ಎಂದು ಅವರು ಹೇಳುತ್ತಾರೆ ಆದರೆ ಅದು ಅಲ್ಲಾಹನ ಕಡೆಯಿಂದಾಗಿರುವುದಿಲ್ಲ. ಅವರು ಬೇಕು ಬೇಕೆಂದು ಸುಳ್ಳಾರೋಪವನ್ನು ಅಲ್ಲಾಹನ ಮೇಲೆ ಹೊರಿಸುತ್ತಾರೆ.