ಓ ಪೈಗಂಬರರೇ ಹೇಳಿರಿ: 'ಓ ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ಅಲ್ಲಾಹನನ್ನು ಹೊರತುಪಡಿಸಿ ನಾವು ಪರಸ್ಪರರಲ್ಲಿ ಇತರ ಯಾರನ್ನೂ ನಮ್ಮ ಪ್ರಭುವಾಗಿರಿಸದಿರೋಣ. ಇನ್ನು ಅವರು ವಿಮುಖರಾದರೆ ಅವರೊಡನೆ ಹೇಳಿರಿ: 'ನಾವು (ಅಲ್ಲಾಹನಿಗೆ) ವಿಧೇಯರಾಗಿದ್ದೇವೆಂಬುದಕ್ಕೆ ನೀವು ಸಾಕ್ಷö್ಯವಹಿಸಿರಿ'