ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳ ವಿರುದ್ಧ ಸತ್ಯನಿಷೇಧಿಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳಬಾರದು ಮತ್ತು ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನೊಡನೆ ಯಾವ ಸಂಬAಧವಿಲ್ಲ. ಆದರೆ ಅವರ ಕೆಡುಕಿನಿಂದ ಹೇಗಾದರೂ ರಕ್ಷಣೆ ಪಡೆಯುವ ಉದ್ದೇಶವಿದ್ದರೆ ಬೇರೆ ವಿಚಾರ ಮತ್ತು ಅಲ್ಲಾಹನು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾನೆ ಮತ್ತು ಅಲ್ಲಾಹನೆಡೆಗೇ ಮರಳುವಿಕೆಯಿರುವುದು.