ಆಗ ಅವರ ಪ್ರಭು ಅವರ ಪ್ರಾರ್ಥನೆಗೆ ಓಗೊಟ್ಟನು ಅಂದರೆ ನಾನು ನಿಮ್ಮ ಪೈಕಿ ಕರ್ಮವೆಸಗುವ ಯಾವೊಬ್ಬನ ಕರ್ಮವನ್ನು ಅದು ಪುರುಷನದ್ದಾಗಲೀ, ಸ್ತಿçÃಯದ್ದಾಗಲೀ ಎಂದಿಗೂ ನಿಷ್ಫಲಗೊಳಿಸಲಾರೆನು. ನೀವು ಪರಸ್ಪರ ಸಮಾನ ವರ್ಗವಾಗಿದ್ದೀರಿ. ಆದ್ದರಿಂದ ಯಾರು (ನನಗಾಗಿ) ವಲಸೆ ಹೋದರೋ, ಸ್ವಂತ ಮನೆಗಳಿಂದ ಹೊರ ದಬ್ಬಲ್ಪಟ್ಟರೋ ನನ್ನ ಮಾರ್ಗದಲ್ಲಿ ಹಿಂಸೆಗೊಳಗಾದರೂ, ಯುದ್ಧ ಮಾಡಿದರೂ ಮತ್ತು ಹುತಾತ್ಮರಾದರೂ ಅವರಿಗೆ ನಿಶ್ಚಯವಾಗಿಯು ನಾನು ಅವರ ಕೆಡಕುಗಳನ್ನು ದೂರ ಮಾಡುವೆನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವಗೋದ್ಯಾನಗಳಲ್ಲಿ ಅವರನ್ನು ಪ್ರವೇಶಿಸುವೆನು. ಅದು ಅಲ್ಲಾಹನ ಬಳಿ ಅತ್ಯುತ್ತಮವಾದ ಪ್ರತಿಫಲವಾಗಿದೆ.