ಅಲ್ಲಾಹನು ತನ್ನ ಅನುಗ್ರಹದಿಂದ ದಯಪಾಲಿಸಿರುವ ಧನದಲ್ಲಿ ಜಿಪುಣತೆ ತೋರುತ್ತಿರುವವರು ಜಿಪುಣತೆಯನ್ನು ತಮ್ಮ ಪಾಲಿಗೆ ಉತ್ತಮವೆಂದು ಭಾವಿಸದಿರಲಿ. ಆದರೆ ಅದು ಅವರಿಗೆ ಅತ್ಯಂತ ಕೆಟ್ಟದ್ದಾಗಿದೆ. ಸದ್ಯದಲ್ಲೇ ಪುನರುತ್ಥಾನದ ದಿನದಂದು ಅವರು ಜಿಪುಣತೆಯಿಂದ ಸಂಗ್ರಹಿಸಿರುವ ವಸ್ತುವನ್ನೇ ಅವರಿಗೆ ಕಂಠಕಡಗವನ್ನಾಗಿ ಹಾಕಲಾಗುವುದು. ಆಕಾಶಗಳ ಮತ್ತು ಭೂಮಿಯ ವಾರೀಸು ಹಕ್ಕು ಅಲ್ಲಾಹನದ್ದಾಗಿದೆ ಮತ್ತು ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಅರಿವುಳ್ಳನಾಗಿದ್ದಾನೆ.