ಉಹುದ್ ಸಮಯದಲ್ಲಿ ನಿಮಗೊಂದು ವಿಪತ್ತು ಬಾಧಿಸಿದಾಗ ನೀವು ಇದೆಲ್ಲಿಂದ ಬಂತು ಎನ್ನತೊಡಗಿದಿರಾ ? ವಸ್ತುತಃ ನಿಮ್ಮ ಕೈಗಳಿಂದ ಅವರಿಗೆ (ಖುರೈಷರಿಗೆ) ಇಮ್ಮಡಿ ವಿಪತ್ತು ಬಾಧಿಸಿತ್ತು. ಓ ಪೈಗಂಬರರೇ ಹೇಳಿರಿ; ಅದು ಸ್ವತಃ ನಿಮ್ಮ ಕಡೆಯಿಂದ ಬಂದಿರುವುದಾಗಿದೆ, ಖಂಡಿತವಾಗಿಯೂ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.