ಓ ಸತ್ಯವಿಶ್ವಸಿಗಳೇ, ತಮ್ಮ ಸಹೋದರರು ಯಾತ್ರೆಗಾಗಿ ಆಥವಾ ಯುದ್ಧಕ್ಕಾಗಿ ಹೊರಟು (ಸಾವನ್ನಪ್ಪಿದರೆ) ಅವರು ನಮ್ಮ ಬಳಿಯಿರುತ್ತಿದ್ದರೆ ಸಾವನ್ನಪ್ಪುತ್ತಿರಲಿಲ್ಲ ಅಥವಾ ಕೊಲ್ಲಲ್ಪಡುತ್ತಿರಲಿಲ್ಲ ಎಂದು ಹೇಳುವ ಅವಿಶ್ವಾಸಿಗಳಂತೆ ನೀವಾಗಬಾರದು. ಅಲ್ಲಾಹನು ಅವರ ಈ ಭಾವನೆಯನ್ನು ಅವರ ಹೃದಯದಲ್ಲಿ ಖೇದಕರ ವಿಷಯವನ್ನಾಗಿಸಲೆಂದಾಗಿದೆ. ಜೀವ ಕೊಡುವವನು, ಮರಣ ನೀಡುವವನು ಅಲ್ಲಾಹನಾಗಿದ್ದಾನೆ. ಮತ್ತು ಅಲ್ಲಾಹನು ನಿಮ್ಮ ಕರ್ಮಗಳನ್ನು ವೀಕ್ಷಿಸುತ್ತಿದ್ದಾನೆ.