(ಚಿಂತಿಸಿರಿ) ನೀವು ಅವರನ್ನು ಪ್ರೀತಿಸುತ್ತೀರಿ. ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲಾ ಗ್ರಂಥಗಳಲ್ಲಿ ಸಂಪೂರ್ಣವಾಗಿ ವಿಶ್ವಾವಿಡುತ್ತೀರಿ (ಅವರು ವಿಶ್ವಾಸವಿಡುವುದಿಲ್ಲ) ಅವರಂತೂ ನಿಮ್ಮನ್ನು ಭೇಟಿಯಾದಾಗ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಏಕಾಂತದಲ್ಲಿ ಆಕ್ರೋಶದಿಂದ ತಮ್ಮ ಬೆರಳುಗಳನ್ನು ಕಚ್ಚುವರು. ಹೇಳಿರಿ: ದುರ್ದೈವಿಗಳೇ ನೀವು ನಿಮ್ಮ ಆಕ್ರೋಶದಲ್ಲೇ ಸಾಯಿರಿ. ಅಲ್ಲಾಹನು ಹೃದಯಗಳಲ್ಲಿರುವ ರಹಸ್ಯವನ್ನು ಚೆನ್ನಾಗಿ ಅರಿಯುತ್ತಾನೆ.