ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಪಾಶವನ್ನು ಸದೃಢವಾಗಿ ಹಿಡಿದುಕೊಳ್ಳಿರಿ. ನೀವು ಭಿನ್ನರಾಗದಿರಿ ಮತ್ತು ಅಲ್ಲಾಹನು ನಿಮಗೆ ನೀಡಿದ ಅನುಗ್ರಹವನ್ನು ಸ್ಮರಿಸಿರಿ. ನೀವು ಪರಸ್ಪರ ಶತ್ರುಗಳಾಗಿದ್ದಾಗ ಅವನು ನಿಮ್ಮ ಹೃದಯಗಳನ್ನು ಬೆಸೆದನು. ಹಾಗೆಯೇ ಅವನ ಔದಾರ್ಯದಿಂದ ನೀವು ಸಹೋದರರಾಗಿ ಬಿಟ್ಟಿರಿ. ನೀವು ನರಕಾಗ್ನಿಯ ಅಂಚಿಗೆ ತಲುಪಿಬಿಟ್ಟಿದ್ದೀರಿ. ಅವನು ನಿಮ್ಮನ್ನು ರಕ್ಷಿಸಿದನು. ಇದೇ ಪ್ರಕಾರ ಅಲ್ಲಾಹನು ತನ್ನ ದೃಷ್ಟಾಂತಗಳನ್ನು ನೀವು ಸನ್ಮಾರ್ಗಪಡೆಯಲೆಂದು ನಿಮಗೆ ವಿವರಿಸಿಕೊಡುತ್ತಾನೆ.