ಅವರಿಬ್ಬರ ಪೈಕಿ ಒಬ್ಬಳು ನಾಚುತ್ತಾ ಅವರೆಡೆಗೆ ನಡೆದು ಬಂದು ಹೇಳಿದಳು: ನೀವು ನಮಗಾಗಿ ನೀರು ಕುಡಿಸಿರುವುದರ ಪ್ರತಿಫಲವನ್ನು ನಿಮಗೆ ನೀಡಲೆಂದು ನನ್ನ ತಂದೆಯು ನಿಮ್ಮನ್ನು ಕರೆಯುತ್ತಿದ್ದಾರೆ. ಮೂಸಾ ಅವರಲ್ಲಿಗೆ ಹೋದರು ಮತ್ತು ತನ್ನ ವೃತ್ತಾಂತವನ್ನೆಲ್ಲಾ ಅವರ ಮುಂದೆ ವಿವರಿಸಿದರು. ಆಗ ಅವರು ಹೇಳಿದರು: ನೀವು ಹೆದರಬೇಡಿ, ಅಕ್ರಮಿ ಜನಾಂಗದಿAದ ನೀವು ರಕ್ಷಣೆ ಹೊಂದಿರುವಿರಿ.