ترجمة معاني القرآن الكريم - الترجمة الكنادية - بشير ميسوري

سورة القصص - ಅಲ್ -ಕ್ವಸಸ್

external-link copy
1 : 28

طٰسٓمّٓ ۟

ತ್ವಾಸೀನ್ ಮೀಮ್ info
التفاسير:

external-link copy
2 : 28

تِلْكَ اٰیٰتُ الْكِتٰبِ الْمُبِیْنِ ۟

ಇವು ಸುವ್ಯಕ್ತ ಗ್ರಂಥದ ಸೂಕ್ತಿಗಳಾಗಿವೆ. info
التفاسير:

external-link copy
3 : 28

نَتْلُوْا عَلَیْكَ مِنْ نَّبَاِ مُوْسٰی وَفِرْعَوْنَ بِالْحَقِّ لِقَوْمٍ یُّؤْمِنُوْنَ ۟

ನಾವು ನಿಮಗೆ ಮೂಸಾ ಮತ್ತು ಫಿರ್‌ಔನನ ಕೆಲವು ವೃತ್ತಾಂತವನ್ನು ವಿಶ್ವಾಸವಿರಿಸುವ ಜನರಿಗೆ ಯಥಾರ್ಥವಾಗಿ ಓದಿ ಕೇಳಿಸುತ್ತಿದ್ದೇವೆ. info
التفاسير:

external-link copy
4 : 28

اِنَّ فِرْعَوْنَ عَلَا فِی الْاَرْضِ وَجَعَلَ اَهْلَهَا شِیَعًا یَّسْتَضْعِفُ طَآىِٕفَةً مِّنْهُمْ یُذَبِّحُ اَبْنَآءَهُمْ وَیَسْتَحْیٖ نِسَآءَهُمْ ؕ— اِنَّهٗ كَانَ مِنَ الْمُفْسِدِیْنَ ۟

ನಿಜವಾಗಿಯು ಫಿರ್‌ಔನನು ಭೂಮಿಯಲ್ಲಿ (ಈಜಿಪ್ಟ್) ದರ್ಪ ತೋರಿದನು ಮತ್ತು ಅಲ್ಲಿನ ನಿವಾಸಿಗಳನ್ನು ಗುಂಪುಗಳಾಗಿ ವಿಂಗಡಿಸಿದ್ದನು ಅವರ ಪೈಕಿ ಒಂದು ಕೂಟವನ್ನು (ಬನೀ ಇಸ್ರಾಯೀಲರನ್ನು) ದಮನಿಸಿಟ್ಟಿದ್ದನು ಮತ್ತು ಅವರ ಗಂಡು ಸಂತತಿಗಳನ್ನು ಕೊಂದು ಅವರ ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದನು. ನಿಸ್ಸಂಶಯವಾಗಿಯು ಅವನು ಕ್ಷೆÆÃಭೆ ಹರಡುವವರಲ್ಲಾಗಿದ್ದನು. info
التفاسير:

external-link copy
5 : 28

وَنُرِیْدُ اَنْ نَّمُنَّ عَلَی الَّذِیْنَ اسْتُضْعِفُوْا فِی الْاَرْضِ وَنَجْعَلَهُمْ اَىِٕمَّةً وَّنَجْعَلَهُمُ الْوٰرِثِیْنَ ۟ۙ

ಭೂಮಿಯಲ್ಲಿ ತುಳಿಯಲ್ಪಟ್ಟವರ ಮೇಲೆ ಕೃಪೆ ತೋರಲೆಂದು, ಅವರನ್ನು ನಾಯಕರು ಮತ್ತು ಉತ್ತರಾಧಿಕಾರಿಗಳನ್ನಾಗಿ ಮಾಡಲೆಂದು ನಾವು ಇಚ್ಛಿಸಿದೆವು. info
التفاسير: