[1] ಅವನು ಆದಿ—ಅಂದರೆ ಅವನಿಗಿಂತ ಮೊದಲು ಏನೂ ಇಲ್ಲ. ಅವನು ಅಂತ್ಯ—ಅಂದರೆ ಅವನ ನಂತರ ಏನೂ ಇಲ್ಲ. ಅವನು ಪ್ರತ್ಯಕ್ಷ—ಅಂದರೆ ಅವನಿಗಿಂತ ಮೇಲೆ ಏನೂ ಇಲ್ಲ. ಅವನು ಎಲ್ಲಕ್ಕಿಂತ ಮೇಲಿರುವವನು, ಎಲ್ಲದ ಮೇಲೆ ಪ್ರಾಬಲ್ಯವಿರುವವನು. ಅವನು ಪರೋಕ್ಷ—ಅಂದರೆ ಅವನು ಪರೋಕ್ಷವಾಗಿರುವ, ರಹಸ್ಯವಾಗಿರುವ ಎಲ್ಲವನ್ನೂ ತಿಳಿಯುತ್ತಾನೆ. ಅವನು ದೃಷ್ಟಿಗಳಿಂದ ಮತ್ತು ಬುದ್ಧಿಯಿಂದ ಮರೆಯಾಗಿದ್ದಾನೆ.
[1] ಅಂದರೆ ನಿಮ್ಮ ಎಲ್ಲಾ ಚಲನವಲನಗಳನ್ನು ಅವನು ಗಮನಿಸುತ್ತಿದ್ದಾನೆ.
[1] ಈ ಎರಡು ಪಾಲು ಸಿಗುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಗಮನಕ್ಕೆ ಮೊದಲು ಬೇರೊಬ್ಬ ಪ್ರವಾದಿಯಲ್ಲಿ ಮತ್ತು ನಂತರ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಟ್ಟ ಸತ್ಯವಿಶ್ವಾಸಿಗಳಿಗಾಗಿದೆ.