[1] ಎರಡು ಸಮುದ್ರಗಳು ಎಂದರೆ ನೀರಿನ ಎರಡು ಬೇರೆ ಬೇರೆ ಅಸ್ತಿತ್ವಗಳು. ಒಂದು ಸಿಹಿ ನೀರನ್ನು ಹೊಂದಿರುವ ನದಿ ಮತ್ತು ಇನ್ನೊಂದು ಉಪ್ಪು ನೀರನ್ನು ಹೊಂದಿರುವ ಕಡಲು. ಈ ಎರಡು ನೀರುಗಳು ಪರಸ್ಪರ ಸೇರುವಾಗ ಬೆರೆಯದೆ ಬಹುದೂರದ ತನಕ ಹರಿಯುತ್ತವೆ.
[1] ಅಂದರೆ ಮನುಷ್ಯನು ಮಾಡಿದ ಪಾಪಗಳ ಬಗ್ಗೆ ಅವನೊಡನೆ ಕೇಳಲಾಗುವುದಿಲ್ಲ. ಏಕೆಂದರೆ ಎಲ್ಲವನ್ನೂ ದೇವದೂತರು ದಾಖಲಿಸಿಟ್ಟಿದ್ದಾರೆ ಮತ್ತು ಎಲ್ಲವೂ ಅವನ ಕರ್ಮಪುಸ್ತಕದಲ್ಲಿದೆ. ಬದಲಿಗೆ, ಅವನೊಡನೆ ಆ ಪಾಪಗಳನ್ನು ಏಕೆ ಮಾಡಿದೆ ಎಂದು ಕೇಳಲಾಗುವುದು. ಇನ್ನೊಂದು ಅರ್ಥದ ಪ್ರಕಾರ, ಅವರ ಪಾಪಗಳ ಬಗ್ಗೆ ಅವರೊಡನೆ ಕೇಳಲಾಗುವುದಿಲ್ಲ. ಅವರ ಬಾಯಿಗೆ ಮೊಹರು ಹಾಕಲಾಗುವುದು ಮತ್ತು ಅವರ ಅಂಗಾಂಗಗಳು ಎಲ್ಲವನ್ನೂ ಹೇಳಿಬಿಡುವುವು.