የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር

የገፅ ቁጥር:close

external-link copy
155 : 4

فَبِمَا نَقْضِهِمْ مِّیْثَاقَهُمْ وَكُفْرِهِمْ بِاٰیٰتِ اللّٰهِ وَقَتْلِهِمُ الْاَنْۢبِیَآءَ بِغَیْرِ حَقٍّ وَّقَوْلِهِمْ قُلُوْبُنَا غُلْفٌ ؕ— بَلْ طَبَعَ اللّٰهُ عَلَیْهَا بِكُفْرِهِمْ فَلَا یُؤْمِنُوْنَ اِلَّا قَلِیْلًا ۪۟

ಅವರು ಕರಾರನ್ನು ಉಲ್ಲಂಘಿಸಿದ, ಅಲ್ಲಾಹನ ವಚನಗಳನ್ನು ನಿಷೇಧಿಸಿದ, ಅನ್ಯಾಯವಾಗಿ ಪ್ರವಾದಿಗಳನ್ನು ಕೊಲೆ ಮಾಡಿದ ಮತ್ತು ತಮ್ಮ ಹೃದಯಗಳು ಮುಚ್ಚಿವೆಯೆಂದು ಹೇಳಿದ ಕಾರಣದಿಂದ (ಶಾಪಕ್ಕೆ ಗುರಿಯಾದರು). ಅಲ್ಲ, ವಾಸ್ತವವಾಗಿ ಅವರ ಸತ್ಯನಿಷೇಧದಿಂದಾಗಿ ಅಲ್ಲಾಹು ಅವರ ಹೃದಯಗಳಿಗೆ ಮೊಹರು ಹಾಕಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ. info
التفاسير:

external-link copy
156 : 4

وَّبِكُفْرِهِمْ وَقَوْلِهِمْ عَلٰی مَرْیَمَ بُهْتَانًا عَظِیْمًا ۟ۙ

ಅವರ ಸತ್ಯನಿಷೇಧದ ನಿಮಿತ್ತ ಮತ್ತು ಮರ್ಯಮರ ಮೇಲೆ ಗುರುತರ ಆರೋಪವನ್ನು ಹೊರಿಸಿದ ನಿಮಿತ್ತ (ಅವರು ಶಾಪಕ್ಕೆ ಗುರಿಯಾದರು). info
التفاسير:

external-link copy
157 : 4

وَّقَوْلِهِمْ اِنَّا قَتَلْنَا الْمَسِیْحَ عِیْسَی ابْنَ مَرْیَمَ رَسُوْلَ اللّٰهِ ۚ— وَمَا قَتَلُوْهُ وَمَا صَلَبُوْهُ وَلٰكِنْ شُبِّهَ لَهُمْ ؕ— وَاِنَّ الَّذِیْنَ اخْتَلَفُوْا فِیْهِ لَفِیْ شَكٍّ مِّنْهُ ؕ— مَا لَهُمْ بِهٖ مِنْ عِلْمٍ اِلَّا اتِّبَاعَ الظَّنِّ ۚ— وَمَا قَتَلُوْهُ یَقِیْنًا ۟ۙ

“ಅಲ್ಲಾಹನ ಸಂದೇಶವಾಹಕರಾದ ಮರ್ಯಮರ ಪುತ್ರ ಮಸೀಹ ಈಸಾರನ್ನು ನಾವು ಕೊಂದಿದ್ದೇವೆ” ಎಂದು ಹೇಳಿದ ನಿಮಿತ್ತ (ಅವರು ಶಾಪಕ್ಕೆ ಗುರಿಯಾದರು). ಅವರು ಅವರನ್ನು ಕೊಲ್ಲಲಿಲ್ಲ ಮತ್ತು ಶಿಲುಬೆಗೇರಿಸಲೂ ಇಲ್ಲ. ವಾಸ್ತವವಾಗಿ, ಅವರಿಗೆ ಅದನ್ನು ಸಾದೃಶ್ಯಗೊಳಿಸಲಾಯಿತು. ನಿಶ್ಚಯವಾಗಿಯೂ ಅವರ (ಈಸಾರ) ವಿಷಯದಲ್ಲಿ ಭಿನ್ನಮತ ತಳೆದವರು ಅದರ ಬಗ್ಗೆ ಸಂಶಯದಲ್ಲಿದ್ದಾರೆ. ವದಂತಿಗಳನ್ನು ಹಿಂಬಾಲಿಸುವುದನ್ನು ಬಿಟ್ಟರೆ ಅವರಿಗೆ ಅದರ ಬಗ್ಗೆ ಸರಿಯಾದ ಜ್ಞಾನವೇ ಇಲ್ಲ. ನಿಶ್ಚಯವಾಗಿಯೂ ಅವರು ಈಸಾರನ್ನು ಕೊಲ್ಲಲಿಲ್ಲ.[1] info

[1] ಯಹೂದಿಗಳು ಈಸಾ (ಯೇಸು) (ಅವರ ಮೇಲೆ ಶಾಂತಿಯಿರಲಿ) ರನ್ನು ಕೊಂದಿಲ್ಲ. ಶಿಲುಬೆಗೇರಿಸಿಯೂ ಇಲ್ಲ. ಬದಲಿಗೆ ಈಸಾ (ಅವರ ಮೇಲೆ ಶಾಂತಿಯಿರಲಿ) ರಂತೆಯೇ ಇದ್ದ ಒಬ್ಬ ವ್ಯಕ್ತಿಯನ್ನು ಅವರು ಈಸಾ ಎಂದು ಭಾವಿಸಿ ಶಿಲುಬೆಗೇರಿಸಿದರು.

التفاسير:

external-link copy
158 : 4

بَلْ رَّفَعَهُ اللّٰهُ اِلَیْهِ ؕ— وَكَانَ اللّٰهُ عَزِیْزًا حَكِیْمًا ۟

ಬದಲಿಗೆ, ಅಲ್ಲಾಹು ಅವರನ್ನು ತನ್ನ ಬಳಿಗೆ ಎತ್ತಿಕೊಂಡನು. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
159 : 4

وَاِنْ مِّنْ اَهْلِ الْكِتٰبِ اِلَّا لَیُؤْمِنَنَّ بِهٖ قَبْلَ مَوْتِهٖ ۚ— وَیَوْمَ الْقِیٰمَةِ یَكُوْنُ عَلَیْهِمْ شَهِیْدًا ۟ۚ

ಅವರ (ಈಸಾರ) ಮರಣಕ್ಕೆ ಮೊದಲು ಅವರಲ್ಲಿ ವಿಶ್ವಾಸವಿಡದವರು ಯಾರೂ ಗ್ರಂಥದವರಲ್ಲಿ ಇರಲಾರರು. ಪುನರುತ್ಥಾನ ದಿನದಂದು ಅವರು ಇವರಿಗೆ ವಿರುದ್ಧವಾಗಿ ಸಾಕ್ಷಿ ನುಡಿಯುವರು. info
التفاسير:

external-link copy
160 : 4

فَبِظُلْمٍ مِّنَ الَّذِیْنَ هَادُوْا حَرَّمْنَا عَلَیْهِمْ طَیِّبٰتٍ اُحِلَّتْ لَهُمْ وَبِصَدِّهِمْ عَنْ سَبِیْلِ اللّٰهِ كَثِیْرًا ۟ۙ

ಯಹೂದಿಗಳು ಮಾಡಿದ ಅನ್ಯಾಯದ ನಿಮಿತ್ತ ಮತ್ತು ಅಲ್ಲಾಹನ ಮಾರ್ಗದಿಂದ ಅವರು ಹೇರಳವಾಗಿ ಜನರನ್ನು ತಡೆಗಟ್ಟಿದ ನಿಮಿತ್ತ ಅವರಿಗೆ ಅನುಮತಿಸಲಾಗಿದ್ದ ಹಲವಾರು ಉತ್ತಮ ವಸ್ತುಗಳನ್ನು ನಾವು ಅವರಿಗೆ ನಿಷೇಧಿಸಿದೆವು. info
التفاسير:

external-link copy
161 : 4

وَّاَخْذِهِمُ الرِّبٰوا وَقَدْ نُهُوْا عَنْهُ وَاَكْلِهِمْ اَمْوَالَ النَّاسِ بِالْبَاطِلِ ؕ— وَاَعْتَدْنَا لِلْكٰفِرِیْنَ مِنْهُمْ عَذَابًا اَلِیْمًا ۟

ಅವರಿಗೆ ಬಡ್ಡಿಯನ್ನು ವಿರೋಧಿಸಲಾಗಿದ್ದೂ ಸಹ ಅವರು ಅದನ್ನು ಪಡೆದ ನಿಮಿತ್ತ ಮತ್ತು ಜನರ ಧನವನ್ನು ಅನ್ಯಾಯವಾಗಿ ತಿಂದ ನಿಮಿತ್ತ. ಅವರಲ್ಲಿರುವ ಸತ್ಯನಿಷೇಧಿಗಳಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. info
التفاسير:

external-link copy
162 : 4

لٰكِنِ الرّٰسِخُوْنَ فِی الْعِلْمِ مِنْهُمْ وَالْمُؤْمِنُوْنَ یُؤْمِنُوْنَ بِمَاۤ اُنْزِلَ اِلَیْكَ وَمَاۤ اُنْزِلَ مِنْ قَبْلِكَ وَالْمُقِیْمِیْنَ الصَّلٰوةَ وَالْمُؤْتُوْنَ الزَّكٰوةَ وَالْمُؤْمِنُوْنَ بِاللّٰهِ وَالْیَوْمِ الْاٰخِرِ ؕ— اُولٰٓىِٕكَ سَنُؤْتِیْهِمْ اَجْرًا عَظِیْمًا ۟۠

ಆದರೆ ಅವರಲ್ಲಿರುವ ಮಹಾಜ್ಞಾನಿಗಳು ಮತ್ತು ಸತ್ಯವಿಶ್ವಾಸಿಗಳು ನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ವಿಶ್ವಾಸವಿಡುತ್ತಾರೆ. ಅವರು ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹನಲ್ಲಿ ಹಾಗೂ ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೆ. ನಾವು ಅವರಿಗೆ ಮಹಾ ಪ್ರತಿಫಲವನ್ನು ದಯಪಾಲಿಸುವೆವು. info
التفاسير: