የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር

የገፅ ቁጥር:close

external-link copy
7 : 29

وَالَّذِیْنَ اٰمَنُوْا وَعَمِلُوا الصّٰلِحٰتِ لَنُكَفِّرَنَّ عَنْهُمْ سَیِّاٰتِهِمْ وَلَنَجْزِیَنَّهُمْ اَحْسَنَ الَّذِیْ كَانُوْا یَعْمَلُوْنَ ۟

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರ ಕೆಡುಕುಗಳನ್ನು ನಾವು ಅಳಿಸಿ ಬಿಡುವೆವು ಮತ್ತು ಅವರು ಮಾಡುತ್ತಿದ್ದ ಅತ್ಯುತ್ತಮ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡುವೆವು. info
التفاسير:

external-link copy
8 : 29

وَوَصَّیْنَا الْاِنْسَانَ بِوَالِدَیْهِ حُسْنًا ؕ— وَاِنْ جٰهَدٰكَ لِتُشْرِكَ بِیْ مَا لَیْسَ لَكَ بِهٖ عِلْمٌ فَلَا تُطِعْهُمَا ؕ— اِلَیَّ مَرْجِعُكُمْ فَاُنَبِّئُكُمْ بِمَا كُنْتُمْ تَعْمَلُوْنَ ۟

ತಂದೆ-ತಾಯಿಗಳಿಗೆ ಒಳಿತು ಮಾಡಬೇಕೆಂದು ನಾವು ಮನುಷ್ಯನಿಗೆ ಉಪದೇಶ ಮಾಡಿದ್ದೇವೆ. ಆದರೆ, ನಿನಗೆ ಯಾವುದೇ ತಿಳುವಳಿಕೆಯಿಲ್ಲದ ವಸ್ತುವನ್ನು ನನ್ನೊಂದಿಗೆ ಸಹಭಾಗಿಯನ್ನಾಗಿ (ಶಿರ್ಕ್) ಮಾಡಲು ಅವರು (ತಂದೆ-ತಾಯಿ) ಪರಿಶ್ರಮಿಸಿದರೆ ಅವರ ಆಜ್ಞಾಪಾಲನೆ ಮಾಡಬೇಡ. ನೀವು ಮರಳಿ ಬರುವುದು ನನ್ನ ಬಳಿಗೇ ಆಗಿದೆ. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ನಾನು ನಿಮಗೆ ತಿಳಿಸಿಕೊಡುವೆನು. info
التفاسير:

external-link copy
9 : 29

وَالَّذِیْنَ اٰمَنُوْا وَعَمِلُوا الصّٰلِحٰتِ لَنُدْخِلَنَّهُمْ فِی الصّٰلِحِیْنَ ۟

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ನಿಶ್ಚಯವಾಗಿಯೂ ನಾವು ಅವರನ್ನು ನೀತಿವಂತರಲ್ಲಿ ಸೇರಿಸುವೆವು. info
التفاسير:

external-link copy
10 : 29

وَمِنَ النَّاسِ مَنْ یَّقُوْلُ اٰمَنَّا بِاللّٰهِ فَاِذَاۤ اُوْذِیَ فِی اللّٰهِ جَعَلَ فِتْنَةَ النَّاسِ كَعَذَابِ اللّٰهِ ؕ— وَلَىِٕنْ جَآءَ نَصْرٌ مِّنْ رَّبِّكَ لَیَقُوْلُنَّ اِنَّا كُنَّا مَعَكُمْ ؕ— اَوَلَیْسَ اللّٰهُ بِاَعْلَمَ بِمَا فِیْ صُدُوْرِ الْعٰلَمِیْنَ ۟

ಜನರಲ್ಲಿ ಕೆಲವರಿದ್ದಾರೆ. ಅವರು ಹೇಳುತ್ತಾರೆ: “ನಾವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇವೆ.” ಆದರೆ ಅಲ್ಲಾಹನ ಮಾರ್ಗದಲ್ಲಿ ಅವರಿಗೆ ತೊಂದರೆಗಳು ಎದುರಾದರೆ, ಜನರು ನೀಡುವ ತೊಂದರೆಯನ್ನು ಅವರು ಅಲ್ಲಾಹನ ಶಿಕ್ಷೆಯಂತೆಯೇ ಪರಿಗಣಿಸುತ್ತಾರೆ. ಒಂದು ವೇಳೆ, ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಏನಾದರೂ ಸಹಾಯವು ಬಂದರೆ ಅವರು ಹೇಳುತ್ತಾರೆ: “ನಿಜವಾಗಿಯೂ ನಾವು ನಿಮ್ಮ ಜೊತೆಗಿದ್ದೆವು.” ಸರ್ವಲೋಕದವರ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿಲ್ಲವೇ? info
التفاسير:

external-link copy
11 : 29

وَلَیَعْلَمَنَّ اللّٰهُ الَّذِیْنَ اٰمَنُوْا وَلَیَعْلَمَنَّ الْمُنٰفِقِیْنَ ۟

ಸತ್ಯವಿಶ್ವಾಸಿಗಳು ಯಾರೆಂದು ನಿಶ್ಚಯವಾಗಿಯೂ ಅಲ್ಲಾಹು ತಿಳಿಯುತ್ತಾನೆ. ಕಪಟವಿಶ್ವಾಸಿಗಳು ಯಾರೆಂದೂ ಅವನು ತಿಳಿಯುತ್ತಾನೆ. info
التفاسير:

external-link copy
12 : 29

وَقَالَ الَّذِیْنَ كَفَرُوْا لِلَّذِیْنَ اٰمَنُوا اتَّبِعُوْا سَبِیْلَنَا وَلْنَحْمِلْ خَطٰیٰكُمْ ؕ— وَمَا هُمْ بِحٰمِلِیْنَ مِنْ خَطٰیٰهُمْ مِّنْ شَیْءٍ ؕ— اِنَّهُمْ لَكٰذِبُوْنَ ۟

ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳಿದರು: “ನಮ್ಮ ಮಾರ್ಗವನ್ನು ಅನುಸರಿಸಿರಿ. ನಿಮ್ಮ ಪಾಪಗಳನ್ನು ನಾವು ಹೊರುತ್ತೇವೆ.” ಆದರೆ ಅವರು ಇವರ ಪಾಪಗಳಲ್ಲಿ ಏನನ್ನೂ ಹೊರುವುದಿಲ್ಲ. ಅವರು ಸುಳ್ಳು ಹೇಳುವವರೇ ಆಗಿದ್ದಾರೆ. info
التفاسير:

external-link copy
13 : 29

وَلَیَحْمِلُنَّ اَثْقَالَهُمْ وَاَثْقَالًا مَّعَ اَثْقَالِهِمْ ؗ— وَلَیُسْـَٔلُنَّ یَوْمَ الْقِیٰمَةِ عَمَّا كَانُوْا یَفْتَرُوْنَ ۟۠

ಅವರು ಅವರದ್ದೇ ಪಾಪಭಾರಗಳನ್ನು ಹೊರುತ್ತಾರೆ. ಅವರ ಪಾಪಭಾರಗಳೊಂದಿಗೆ ಇತರರು ಮಾಡಿದ ಪಾಪಭಾರಗಳನ್ನೂ ಹೊರುತ್ತಾರೆ. ಅವರು ಆರೋಪಿಸುವ ಸುಳ್ಳುಗಳ ಬಗ್ಗೆ ಪುನರುತ್ಥಾನ ದಿನದಂದು ಅವರಲ್ಲಿ ಖಂಡಿತ ವಿಚಾರಿಸಲಾಗುವುದು. info
التفاسير:

external-link copy
14 : 29

وَلَقَدْ اَرْسَلْنَا نُوْحًا اِلٰی قَوْمِهٖ فَلَبِثَ فِیْهِمْ اَلْفَ سَنَةٍ اِلَّا خَمْسِیْنَ عَامًا ؕ— فَاَخَذَهُمُ الطُّوْفَانُ وَهُمْ ظٰلِمُوْنَ ۟

ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರು ಒಂಬೈನೂರ ಐವತ್ತು ವರ್ಷಗಳ ಕಾಲ ಅವರ ನಡುವೆ ಬದುಕಿದರು. ನಂತರ ಅವರು ಅಕ್ರಮವೆಸಗಿದಾಗ ಚಂಡಮಾರುತವು ಅವರನ್ನು ಹಿಡಿದು ನಾಶ ಮಾಡಿತು. info
التفاسير: