የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር

የገፅ ቁጥር:close

external-link copy
14 : 28

وَلَمَّا بَلَغَ اَشُدَّهٗ وَاسْتَوٰۤی اٰتَیْنٰهُ حُكْمًا وَّعِلْمًا ؕ— وَكَذٰلِكَ نَجْزِی الْمُحْسِنِیْنَ ۟

ನಂತರ ಮೂಸಾ ಪ್ರೌಢಾವಸ್ಥೆಗೆ ತಲುಪಿ ಪೂರ್ಣ ಬಲವನ್ನು ಪಡೆದಾಗ, ನಾವು ಅವರಿಗೆ ವಿವೇಕ ಮತ್ತು ಜ್ಞಾನವನ್ನು ನೀಡಿದೆವು. ಒಳಿತು ಮಾಡುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುತ್ತೇವೆ. info
التفاسير:

external-link copy
15 : 28

وَدَخَلَ الْمَدِیْنَةَ عَلٰی حِیْنِ غَفْلَةٍ مِّنْ اَهْلِهَا فَوَجَدَ فِیْهَا رَجُلَیْنِ یَقْتَتِلٰنِ ؗ— هٰذَا مِنْ شِیْعَتِهٖ وَهٰذَا مِنْ عَدُوِّهٖ ۚ— فَاسْتَغَاثَهُ الَّذِیْ مِنْ شِیْعَتِهٖ عَلَی الَّذِیْ مِنْ عَدُوِّهٖ ۙ— فَوَكَزَهٗ مُوْسٰی فَقَضٰی عَلَیْهِ ؗ— قَالَ هٰذَا مِنْ عَمَلِ الشَّیْطٰنِ ؕ— اِنَّهٗ عَدُوٌّ مُّضِلٌّ مُّبِیْنٌ ۟

ನಗರವಾಸಿಗಳು ನಿರ್ಲಕ್ಷ್ಯರಾಗಿದ್ದ (ವಿಶ್ರಾಂತಿ ಪಡೆಯುತ್ತಿದ್ದ) ಸಮಯದಲ್ಲಿ ಮೂಸಾ ನಗರಕ್ಕೆ ಬಂದರು. ಅಲ್ಲಿ ಇಬ್ಬರು ಹೊಡೆದಾಡುವುದನ್ನು ಅವರು ಕಂಡರು. ಒಬ್ಬ ಅವರ ಜನರಲ್ಲಿ ಸೇರಿದವನಾಗಿದ್ದರೆ, ಇನ್ನೊಬ್ಬ ಅವರ ವೈರಿಗಳಲ್ಲಿ ಸೇರಿದವನಾಗಿದ್ದನು. ಆಗ ಅವರ ಜನರಲ್ಲಿ ಸೇರಿದವನು ಅವರ ವೈರಿಗಳಲ್ಲಿ ಸೇರಿದವನ ವಿರುದ್ಧ ಮೂಸಾರೊಡನೆ ಸಹಾಯ ಬೇಡಿದನು. ಮೂಸಾ ಮುಷ್ಠಿ ಬಿಗಿಹಿಡಿದು ಅವನಿಗೆ ಥಳಿಸಿದರು. ಅದು ಅವನ ಕಥೆಯನ್ನು ಮುಗಿಸಿತು. ಮೂಸಾ ಹೇಳಿದರು: “ಇದು ಶೈತಾನನ ಕೃತ್ಯಗಳಲ್ಲಿ ಸೇರಿದ್ದು. ಅವನು ದಾರಿತಪ್ಪಿಸುವ ಸ್ಪಷ್ಟ ಶತ್ರುವಾಗಿದ್ದಾನೆ.” info
التفاسير:

external-link copy
16 : 28

قَالَ رَبِّ اِنِّیْ ظَلَمْتُ نَفْسِیْ فَاغْفِرْ لِیْ فَغَفَرَ لَهٗ ؕ— اِنَّهٗ هُوَ الْغَفُوْرُ الرَّحِیْمُ ۟

ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ ನಾನು ನನ್ನ ಮೇಲೆಯೇ ಅನ್ಯಾಯವೆಸಗಿದ್ದೇನೆ. ಆದ್ದರಿಂದ ನನ್ನನ್ನು ಕ್ಷಮಿಸು.” ಆಗ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
17 : 28

قَالَ رَبِّ بِمَاۤ اَنْعَمْتَ عَلَیَّ فَلَنْ اَكُوْنَ ظَهِیْرًا لِّلْمُجْرِمِیْنَ ۟

ಅವರು ಹೇಳಿದರು: “ಓ ನನ್ನ ಪರಿಪಾಲಕನೇ! ನೀನು ನನಗೆ ಅನುಗ್ರಹಗಳನ್ನು ದಯಪಾಲಿಸಿರುವ ಕಾರಣ ಇನ್ನು ಮುಂದೆ ನಾನು ಯಾವುದೇ ಅಪರಾಧಿಗಳಿಗೂ ಸಹಾಯ ಮಾಡುವುದಿಲ್ಲ.” info
التفاسير:

external-link copy
18 : 28

فَاَصْبَحَ فِی الْمَدِیْنَةِ خَآىِٕفًا یَّتَرَقَّبُ فَاِذَا الَّذِی اسْتَنْصَرَهٗ بِالْاَمْسِ یَسْتَصْرِخُهٗ ؕ— قَالَ لَهٗ مُوْسٰۤی اِنَّكَ لَغَوِیٌّ مُّبِیْنٌ ۟

ಬೆಳಗಾಗುತ್ತಿದ್ದಂತೆ, ಮೂಸಾ ಭಯದೊಂದಿಗೆ (ಜನರು ತನ್ನ ಬಗ್ಗೆ ಏನು ಹೇಳುತ್ತಾರೆಂಬ) ಸುದ್ದಿಗಳನ್ನು ನಿರೀಕ್ಷಿಸುತ್ತಾ ನಗರಕ್ಕೆ ಬಂದರು. ಆಗ ಅಗೋ! ನಿನ್ನೆ ಅವರೊಡನೆ ಸಹಾಯ ಕೇಳಿದ ಅದೇ ವ್ಯಕ್ತಿ ಪುನಃ ಅವರನ್ನು ಸಹಾಯಕ್ಕಾಗಿ ಕೂಗುತ್ತಿದ್ದಾನೆ! ಮೂಸಾ ಅವನೊಡನೆ ಹೇಳಿದರು: “ನೀನೊಬ್ಬ ಸ್ಪಷ್ಟ ದುರ್ಮಾರ್ಗಿಯಾಗಿರುವೆ.” info
التفاسير:

external-link copy
19 : 28

فَلَمَّاۤ اَنْ اَرَادَ اَنْ یَّبْطِشَ بِالَّذِیْ هُوَ عَدُوٌّ لَّهُمَا ۙ— قَالَ یٰمُوْسٰۤی اَتُرِیْدُ اَنْ تَقْتُلَنِیْ كَمَا قَتَلْتَ نَفْسًا بِالْاَمْسِ ۗ— اِنْ تُرِیْدُ اِلَّاۤ اَنْ تَكُوْنَ جَبَّارًا فِی الْاَرْضِ وَمَا تُرِیْدُ اَنْ تَكُوْنَ مِنَ الْمُصْلِحِیْنَ ۟

ನಂತರ ಮೂಸಾ ತಮ್ಮಿಬ್ಬರ ವೈರಿಯನ್ನು ಹಿಡಿಯಲು ಉದ್ದೇಶಿಸಿದಾಗ ಅವನು ಹೇಳಿದನು: “ಮೂಸಾ! ನೀನು ನಿನ್ನೆ ಒಬ್ಬನನ್ನು ಕೊಂದಂತೆ ಇಂದು ನನ್ನನ್ನು ಕೊಲ್ಲಲು ಬಯಸುತ್ತೀಯಾ? ನೀನು ನಾಡಿನಲ್ಲಿ ಕ್ರೂರಿಯಾಗಲು ಬಯಸುತ್ತಿರುವೆಯೇ ಹೊರತು ಸುಧಾರಣೆ ಮಾಡುವವರಲ್ಲಿ ಸೇರಲು ಬಯಸುತ್ತಿಲ್ಲ.” info
التفاسير:

external-link copy
20 : 28

وَجَآءَ رَجُلٌ مِّنْ اَقْصَا الْمَدِیْنَةِ یَسْعٰی ؗ— قَالَ یٰمُوْسٰۤی اِنَّ الْمَلَاَ یَاْتَمِرُوْنَ بِكَ لِیَقْتُلُوْكَ فَاخْرُجْ اِنِّیْ لَكَ مِنَ النّٰصِحِیْنَ ۟

ಆಗ ನಗರ ತುತ್ತತುದಿಯಿಂದ ಒಬ್ಬ ವ್ಯಕ್ತಿ ಓಡಿ ಬಂದು ಹೇಳಿದನು: “ಮೂಸಾ! ನಿಮ್ಮನ್ನು ಕೊಲ್ಲಲು ಮುಖಂಡರು ತಂತ್ರಗಾರಿಕೆ ಮಾಡುತ್ತಿದ್ದಾರೆ. ನೀವು ಇಲ್ಲಿಂದ ಹೊರಡಿ. ನಿಜಕ್ಕೂ ನಾನು ನಿಮ್ಮ ಹಿತಚಿಂತಕರಲ್ಲಿ ಒಬ್ಬನಾಗಿದ್ದೇನೆ.” info
التفاسير:

external-link copy
21 : 28

فَخَرَجَ مِنْهَا خَآىِٕفًا یَّتَرَقَّبُ ؗ— قَالَ رَبِّ نَجِّنِیْ مِنَ الْقَوْمِ الظّٰلِمِیْنَ ۟۠

ಆಗ ಮೂಸಾ ಭಯದಿಂದ ಮತ್ತು ಎಚ್ಚರಿಕೆಯಿಂದ ಅಲ್ಲಿಂದ ಹೊರಟರು. ಅವರು ಹೇಳಿದರು: “ನನ್ನ ಪರಿಪಾಲಕನೇ! ಅಕ್ರಮಿಗಳಾದ ಈ ಜನರಿಂದ ನನ್ನನ್ನು ಕಾಪಾಡು.” info
التفاسير: