የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር

external-link copy
57 : 2

وَظَلَّلْنَا عَلَیْكُمُ الْغَمَامَ وَاَنْزَلْنَا عَلَیْكُمُ الْمَنَّ وَالسَّلْوٰی ؕ— كُلُوْا مِنْ طَیِّبٰتِ مَا رَزَقْنٰكُمْ ؕ— وَمَا ظَلَمُوْنَا وَلٰكِنْ كَانُوْۤا اَنْفُسَهُمْ یَظْلِمُوْنَ ۟

ನಾವು ನಿಮಗೆ ಮೋಡದ ನೆರಳನ್ನು ನೀಡಿದೆವು ಮತ್ತು ಮನ್ನ ಹಾಗೂ ಸಲ್ವಾವನ್ನು ಇಳಿಸಿಕೊಟ್ಟೆವು.[1] (ನಾವು ಹೇಳಿದೆವು): “ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳಿಂದ ತಿನ್ನಿರಿ.” ಅವರು ನಮಗೆ ಅನ್ಯಾಯ ಮಾಡಲಿಲ್ಲ; ಬದಲಿಗೆ, ಅವರು ಅವರಿಗೇ ಅನ್ಯಾಯ ಮಾಡುತ್ತಿದ್ದರು. info

[1] ಮನ್ನ ಎಂದರೆ ಕೆಲವರ ಅಭಿಪ್ರಾಯ ಪ್ರಕಾರ ತರಂಜಬೀನ್ ಎಂಬ ಹೆಸರಿನ ಅಂಟು ತಿನಿಸು. ಇದು ಒಂಟೆಮುಳ್ಳು ಎಂಬ ಸಸ್ಯದ ಎಲೆ ಮತ್ತು ಕಾಂಡಗಳಲ್ಲಿ ಉತ್ಪಾದನೆಯಾಗುವ ರಾಳದಂತಹ ಸಿಹಿವಸ್ತುವಾಗಿದೆ. ಮನ್ನ ಎಂದರೆ ಮರ ಹಾಗೂ ಬಂಡೆಗಳ ಮೇಲೆ ಬೀಳುವ ಇಬ್ಬನಿಯೆಂದು ಕೆಲವರು ಹೇಳಿದ್ದಾರೆ. ಇದು ಜೇನಿನಂತೆ ಸಿಹಿಯಾಗಿರುತ್ತದೆ ಮತ್ತು ಒಣಗಿದಾಗ ಮೇಣದಂತಾಗುತ್ತದೆ. ಕೆಲವರು ಮನ್ನ ಎಂದರೆ ಜೇನು ಅಥವಾ ಸಿಹಿನೀರು ಎಂದಿದ್ದಾರೆ. ಸಲ್ವಾ ಎಂದರೆ ಲಾವಕ್ಕಿ ಅಥವಾ ಗುಬ್ಬಚ್ಚಿಯಂತಹ ಸಣ್ಣ ಹಕ್ಕಿಯಾಗಿದ್ದು ಇದನ್ನು ಕೊಯ್ದು ತಿನ್ನುತ್ತಾರೆ.

التفاسير: