የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር

የገፅ ቁጥር:close

external-link copy
25 : 2

وَبَشِّرِ الَّذِیْنَ اٰمَنُوْا وَعَمِلُوا الصّٰلِحٰتِ اَنَّ لَهُمْ جَنّٰتٍ تَجْرِیْ مِنْ تَحْتِهَا الْاَنْهٰرُ ؕ— كُلَّمَا رُزِقُوْا مِنْهَا مِنْ ثَمَرَةٍ رِّزْقًا ۙ— قَالُوْا هٰذَا الَّذِیْ رُزِقْنَا مِنْ قَبْلُ وَاُتُوْا بِهٖ مُتَشَابِهًا ؕ— وَلَهُمْ فِیْهَاۤ اَزْوَاجٌ مُّطَهَّرَةٌ وَّهُمْ فِیْهَا خٰلِدُوْنَ ۟

ಸತ್ಯವಿಶ್ವಾಸಿಗಳು ಹಾಗೂ ಸತ್ಕರ್ಮವೆಸಗಿದವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆಯೆಂಬ ಸುವಾರ್ತೆಯನ್ನು ತಿಳಿಸಿರಿ. ಅವರಿಗೆ ಅದರ ಒಂದೊಂದು ಹಣ್ಣನ್ನು ಆಹಾರವಾಗಿ ನೀಡಲಾಗುವಾಗಲೆಲ್ಲಾ ಅವರು ಹೇಳುವರು: “ಇದು ನಮಗೆ ಮುಂಚೆ ನೀಡಲಾದದ್ದೇ ಅಲ್ಲವೇ!” ವಾಸ್ತವವಾಗಿ, ಅವರಿಗೆ ಅದನ್ನು ಹೋಲಿಕೆಯಿರುವ ರೂಪದಲ್ಲಿ ನೀಡಲಾಗಿದೆ.[1] ಅವರಿಗೆ ಅಲ್ಲಿ ಪರಿಶುದ್ಧ ಸಂಗಾತಿಗಳಿದ್ದಾರೆ; ಅವರು ಅಲ್ಲಿ ಶಾಶ್ವತವಾಗಿ ವಾಸಿಸುವರು. info

[1] ಹೋಲಿಕೆಯಿರುವ ರೂಪದಲ್ಲಿ ಎಂದರೆ ಒಂದೋ ಸ್ವರ್ಗದಲ್ಲಿರುವ ಹಣ್ಣುಗಳು ಪರಸ್ಪರ ಒಂದನ್ನೊಂದು ಹೋಲುತ್ತವೆ; ಅಥವಾ ಅವು ಇಹಲೋಕದ ಹಣ್ಣುಗಳ ಹೋಲಿಕೆಯನ್ನು ಹೊಂದಿರುತ್ತವೆ. ಹೋಲಿಕೆಯಿರುವುದು ರೂಪ, ಆಕಾರ, ಹೆಸರು ಅಥವಾ ಬಣ್ಣಗಳಲ್ಲಿ ಮಾತ್ರವೇ ಹೊರತು ಅವುಗಳ ರುಚಿ ಮತ್ತು ಗುಣಮಟ್ಟದಲ್ಲಲ್ಲ.

التفاسير:

external-link copy
26 : 2

اِنَّ اللّٰهَ لَا یَسْتَحْیٖۤ اَنْ یَّضْرِبَ مَثَلًا مَّا بَعُوْضَةً فَمَا فَوْقَهَا ؕ— فَاَمَّا الَّذِیْنَ اٰمَنُوْا فَیَعْلَمُوْنَ اَنَّهُ الْحَقُّ مِنْ رَّبِّهِمْ ۚ— وَاَمَّا الَّذِیْنَ كَفَرُوْا فَیَقُوْلُوْنَ مَاذَاۤ اَرَادَ اللّٰهُ بِهٰذَا مَثَلًا ۘ— یُضِلُّ بِهٖ كَثِیْرًا وَّیَهْدِیْ بِهٖ كَثِیْرًا ؕ— وَمَا یُضِلُّ بِهٖۤ اِلَّا الْفٰسِقِیْنَ ۟ۙ

ನಿಶ್ಚಯವಾಗಿಯೂ ಅಲ್ಲಾಹು ಒಂದು ಸೊಳ್ಳೆಯನ್ನು ಅಥವಾ ಅದಕ್ಕಿಂತ ಕೀಳಾದುದನ್ನು ಉದಾಹರಣೆಯಾಗಿ ತೋರಿಸಲು ಸಂಕೋಚಪಡುವುದಿಲ್ಲ. ಸತ್ಯವಿಶ್ವಾಸಿಗಳು ಅದು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವೆಂದು ತಿಳಿಯುತ್ತಾರೆ. ಆದರೆ, ಸತ್ಯನಿಷೇಧಿಗಳು ಕೇಳುತ್ತಾರೆ: “ಈ ಹೋಲಿಕೆಯಿಂದ ಅಲ್ಲಾಹು ಉದ್ದೇಶಿಸುವುದೇನು?” ಇದರ ಮೂಲಕ ಅಲ್ಲಾಹು ಅನೇಕ ಜನರನ್ನು ದಾರಿತಪ್ಪಿಸುತ್ತಾನೆ ಮತ್ತು ಅನೇಕ ಜನರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ. ಅವನು ಇದರ ಮೂಲಕ ದುಷ್ಕರ್ಮಿಗಳನ್ನಲ್ಲದೆ ಇನ್ನಾರನ್ನೂ ದಾರಿತಪ್ಪಿಸುವುದಿಲ್ಲ. info
التفاسير:

external-link copy
27 : 2

الَّذِیْنَ یَنْقُضُوْنَ عَهْدَ اللّٰهِ مِنْ بَعْدِ مِیْثَاقِهٖ ۪— وَیَقْطَعُوْنَ مَاۤ اَمَرَ اللّٰهُ بِهٖۤ اَنْ یُّوْصَلَ وَیُفْسِدُوْنَ فِی الْاَرْضِ ؕ— اُولٰٓىِٕكَ هُمُ الْخٰسِرُوْنَ ۟

ಅವರು (ದುಷ್ಕರ್ಮಿಗಳು) ಯಾರೆಂದರೆ, ಅಲ್ಲಾಹನ ಕರಾರನ್ನು—ಅದು ಸದೃಢವಾದ ಬಳಿಕವೂ—ಮುರಿಯುವವರು, ಅಲ್ಲಾಹು ಜೋಡಿಸಲು ಆದೇಶಿಸಿದ್ದನ್ನು ಕಡಿಯುವವರು, ಮತ್ತು ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು. ಅವರೇ ನಷ್ಟ ಹೊಂದಿದವರು. info
التفاسير:

external-link copy
28 : 2

كَیْفَ تَكْفُرُوْنَ بِاللّٰهِ وَكُنْتُمْ اَمْوَاتًا فَاَحْیَاكُمْ ۚ— ثُمَّ یُمِیْتُكُمْ ثُمَّ یُحْیِیْكُمْ ثُمَّ اِلَیْهِ تُرْجَعُوْنَ ۟

ನೀವು ಅಲ್ಲಾಹನನ್ನು ಹೇಗೆ ನಿಷೇಧಿಸುತ್ತೀರಿ? ವಾಸ್ತವವಾಗಿ, ನೀವು ನಿರ್ಜೀವಿಗಳಾಗಿದ್ದಿರಿ ಮತ್ತು ಅವನು ನಿಮಗೆ ಜೀವವನ್ನು ನೀಡಿದನು; ನಂತರ ಅವನು ನಿಮಗೆ ಸಾವನ್ನು ನೀಡುತ್ತಾನೆ. ನಂತರ ಅವನು ನಿಮಗೆ (ಪುನಃ) ಜೀವವನ್ನು ನೀಡುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುತ್ತದೆ. info
التفاسير:

external-link copy
29 : 2

هُوَ الَّذِیْ خَلَقَ لَكُمْ مَّا فِی الْاَرْضِ جَمِیْعًا ۗ— ثُمَّ اسْتَوٰۤی اِلَی السَّمَآءِ فَسَوّٰىهُنَّ سَبْعَ سَمٰوٰتٍ ؕ— وَهُوَ بِكُلِّ شَیْءٍ عَلِیْمٌ ۟۠

ಭೂಮಿಯಲ್ಲಿರುವ ಎಲ್ಲಾ ವಸ್ತುಗಳನ್ನೂ ನಿಮಗಾಗಿ ಸೃಷ್ಟಿಸಿದವನು ಅವನೇ. ನಂತರ ಅವನು ಆಕಾಶಕ್ಕೇರಿ, ಅದನ್ನು ಏಳಾಕಾಶಗಳಾಗಿ ಸರಿಪಡಿಸಿದನು. ಅವನು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ. info
التفاسير: