የቅዱስ ቁርዓን ይዘት ትርጉም - የካናድኛ ትርጉም - በሐምዛ ቡቱር

ಅಲ್ -ಕೌಸರ್

external-link copy
1 : 108

اِنَّاۤ اَعْطَیْنٰكَ الْكَوْثَرَ ۟ؕ

ನಿಶ್ಚಯವಾಗಿಯೂ ನಾವು ನಿಮಗೆ ಕೌಸರ್ ದಯಪಾಲಿಸಿದ್ದೇವೆ.[1] info

[1] ಕೌಸರ್‌ಗೆ ಹೇರಳ ಒಳಿತು ಎಂಬ ಅರ್ಥವಿದೆ. ಅಂದರೆ ಪರಲೋಕದಲ್ಲಿ ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇರಳ ಒಳಿತುಗಳನ್ನು ನೀಡುವನು. ಇದರ ಇನ್ನೊಂದು ಅರ್ಥವೇನೆಂದರೆ ಪರಲೋಕದಲ್ಲಿರುವ ಕೌಸರ್ ಎಂಬ ಹೆಸರಿನ ಕೊಳ ಅಥವಾ ಸರೋವರ. ಇದರ ನೀರು ಕುಡಿದವನಿಗೆ ಮತ್ತೆ ಎಂದಿಗೂ ಬಾಯಾರಿಕೆಯಾಗುವುದಿಲ್ಲ. ಈ ಸರೋವರವನ್ನು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡುವನು ಮತ್ತು ಅವರು ತಮ್ಮ ಸಮುದಾಯದಲ್ಲಿ ಸೇರಿದ ಸತ್ಯವಿಶ್ವಾಸಿಗಳಿಗೆ ಇದರ ನೀರನ್ನು ಕುಡಿಸುವರು.

التفاسير:

external-link copy
2 : 108

فَصَلِّ لِرَبِّكَ وَانْحَرْ ۟ؕ

ಆದ್ದರಿಂದ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ನಮಾಝ್ ಮಾಡಿರಿ ಮತ್ತು ಬಲಿ ಅರ್ಪಿಸಿರಿ. info
التفاسير:

external-link copy
3 : 108

اِنَّ شَانِئَكَ هُوَ الْاَبْتَرُ ۟۠

ನಿಶ್ಚಯವಾಗಿಯೂ ನಿಮ್ಮ ವೈರಿಯೇ ವಾರಸುದಾರನಿಲ್ಲದವನು.[1] info

[1] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಂಡು ಮಕ್ಕಳೆಲ್ಲರೂ ಚಿಕ್ಕಂದಿನಲ್ಲೇ ಅಸುನೀಗಿದ್ದರು. ಆದ್ದರಿಂದ ಅವರನ್ನು ತಮಾಷೆ ಮಾಡುತ್ತಾ ವೈರಿಗಳು ಅಬ್ತರ್ (ವಾರಸುದಾರನಿಲ್ಲದವನು, ವಂಶವಿಲ್ಲದವನು) ಎಂದು ಕರೆಯುತ್ತಿದ್ದರು. ಅಲ್ಲಾಹು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಾನಪಡಿಸುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು.

التفاسير: