የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ

external-link copy
155 : 7

وَاخْتَارَ مُوْسٰی قَوْمَهٗ سَبْعِیْنَ رَجُلًا لِّمِیْقَاتِنَا ۚ— فَلَمَّاۤ اَخَذَتْهُمُ الرَّجْفَةُ قَالَ رَبِّ لَوْ شِئْتَ اَهْلَكْتَهُمْ مِّنْ قَبْلُ وَاِیَّایَ ؕ— اَتُهْلِكُنَا بِمَا فَعَلَ السُّفَهَآءُ مِنَّا ۚ— اِنْ هِیَ اِلَّا فِتْنَتُكَ ؕ— تُضِلُّ بِهَا مَنْ تَشَآءُ وَتَهْدِیْ مَنْ تَشَآءُ ؕ— اَنْتَ وَلِیُّنَا فَاغْفِرْ لَنَا وَارْحَمْنَا وَاَنْتَ خَیْرُ الْغٰفِرِیْنَ ۟

ಮತ್ತು ಮೂಸಾ ತಮ್ಮ ಜನರ ಪೈಕಿ ಎಪ್ಪತ್ತು ಮಂದಿಯನ್ನು ನಮ್ಮ ನಿಶ್ಚಿತ ಸಮಯಕ್ಕಾಗಿ (ತೂರ್ ಪರ್ವತದೆಡೆಗೆ ಹೋಗಲು) ಆರಿಸಿಕೊಂಡರು. ನಂತರ (ಅಲ್ಲಿ ಅವರು ಅಲ್ಲಾಹನನ್ನು ಪ್ರತ್ಯಕ್ಷವಾಗಿ ಕಾಣಲೇಬೇಕೆಂದ ಕಾರಣದಿಂದ) ಭೀಕರವಾದ ಕಂಪನವು ಅವರನ್ನು ಹಿಡಿದು ಬಿಟ್ಟಾಗ ಮೂಸಾ ಹೇಳಿದರು: ನನ್ನ ಪ್ರಭೂ, ನೀನು ಇಚ್ಛಿಸಿದ್ದರೆ ಇದಕ್ಕಿಂತ ಮುಂಚೆಯೇ ಅವರನ್ನು ಮತ್ತು ನನ್ನನ್ನು ನಾಶಗೊಳಿಸಿಬಿಡುತ್ತಿದ್ದೆ. ನಮ್ಮಲ್ಲಿನ ಕೆಲವು ಅವಿವೇಕಿಗಳು ಮಾಡಿದ ಕೃತ್ಯದ ನಿಮಿತ್ತ ನೀನು ನಮ್ಮನ್ನು ನಾಶಗೊಳಿಸುವೆಯಾ? ಇದು ನಿನ್ನ ಒಂದು ಪರೀಕ್ಷೆಯೇ ಆಗಿದೆ. ಇದರ ಮೂಲಕ ನೀನು ಇಚ್ಛಿಸುವವರನ್ನು ಪಥಭ್ರಷ್ಟಗೊಳಿಸುವೆ ಮತ್ತು ನೀನು ಇಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುವೆ. ನೀನೇ ನಮ್ಮ ಕಾರ್ಯಸಾಧಕನಾಗಿರುವೆ. ಹಾಗೆಯೇ ನೀನು ನಮ್ಮನ್ನು ಕ್ಷಮಿಸು ಹಾಗೂ ನಮ್ಮ ಮೇಲೆ ಕಾರುಣ್ಯವನ್ನು ತೋರು. ಕ್ಷಮೆ ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ. info
التفاسير: