የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ

external-link copy
152 : 3

وَلَقَدْ صَدَقَكُمُ اللّٰهُ وَعْدَهٗۤ اِذْ تَحُسُّوْنَهُمْ بِاِذْنِهٖ ۚ— حَتّٰۤی اِذَا فَشِلْتُمْ وَتَنَازَعْتُمْ فِی الْاَمْرِ وَعَصَیْتُمْ مِّنْ بَعْدِ مَاۤ اَرٰىكُمْ مَّا تُحِبُّوْنَ ؕ— مِنْكُمْ مَّنْ یُّرِیْدُ الدُّنْیَا وَمِنْكُمْ مَّنْ یُّرِیْدُ الْاٰخِرَةَ ۚ— ثُمَّ صَرَفَكُمْ عَنْهُمْ لِیَبْتَلِیَكُمْ ۚ— وَلَقَدْ عَفَا عَنْكُمْ ؕ— وَاللّٰهُ ذُوْ فَضْلٍ عَلَی الْمُؤْمِنِیْنَ ۟

ಅಲ್ಲಾಹನು ನಿಮ್ಮೊಡನೆ ಮಾಡಿದ್ದ ತನ್ನ ವಾಗ್ದಾನವನ್ನು ಈಡೇರಿಸಿ ಕೊಟ್ಟಿರುವನು. ಆರಂಭದಲ್ಲಿ ಅಲ್ಲಾಹನ ಅಪ್ಪಣೆಯಿಂದ ನೀವು ಖುರೈಷರನ್ನು ವದಿಸುತ್ತಿದ್ದೀರಿ. ಅಲ್ಲಾಹನು ನೀವು ಆಶಿಸುತ್ತಿದ್ದ ವಿಜಯವನ್ನು ತೋರಿಸಿಕೊಟ್ಟನು ಬಳಿಕ ನೀವು ಪೈಗಂಬರರ ಆದೇಶವನ್ನು ಉಲ್ಲಂಘಿಸಿ ಯುದ್ಧದ ಆಯಕಟ್ಟಿನಲ್ಲಿ ಸ್ಥಿರವಾಗಿರುವ ವಿಷಯದಲ್ಲಿ ಅವಿಧೇಯತೆ ತೋರಿ ಜಗಳವಾಡತೊಡಗದಿರಿ. ಏಕೆಂದರೆ, ನಿಮ್ಮಲ್ಲಿ ಕೆಲವರು ಇಹಲೋಕವನ್ನು ಬಯಸುತ್ತಿದ್ದರು ಮತ್ತು ಕೆಲವರ ಉದ್ದೇಶವು ಪರಲೋಕವಾಗಿತ್ತು. ಅಲ್ಲಾಹನು ನಿಮ್ಮನ್ನು ಪರೀಕ್ಷಿಸಲೆಂದು ಅವರಿಂದ (ಖುರೈಷರಿಂದ) ಅಲಕ್ಷö್ಯಗೊಳಿಸಿದನು. ಆದರೂ ನಿಮ್ಮ ಪ್ರಮಾದವನ್ನು (ಯುದ್ಧದಿಂದ ಬೆನ್ನು ತೋರಿಸಿದ ಪಾಪವನ್ನು) ಖಂಡಿತವಾಗಿಯೂ ಕ್ಷಮಿಸಿರುತ್ತಾನೆ. ಅಲ್ಲಾಹನು ಸತ್ಯವಿಶ್ವಾಸಿಗಳ ಮೇಲೆ ಮಹಾ ಔದರ್ಯವಂತನಾಗಿದ್ದಾನೆ. info
التفاسير: