የቅዱስ ቁርዓን ይዘት ትርጉም - የካናድኛ ትርጉም - በሺር ሜሶሪ

external-link copy
58 : 24

یٰۤاَیُّهَا الَّذِیْنَ اٰمَنُوْا لِیَسْتَاْذِنْكُمُ الَّذِیْنَ مَلَكَتْ اَیْمَانُكُمْ وَالَّذِیْنَ لَمْ یَبْلُغُوا الْحُلُمَ مِنْكُمْ ثَلٰثَ مَرّٰتٍ ؕ— مِنْ قَبْلِ صَلٰوةِ الْفَجْرِ وَحِیْنَ تَضَعُوْنَ ثِیَابَكُمْ مِّنَ الظَّهِیْرَةِ وَمِنْ بَعْدِ صَلٰوةِ الْعِشَآءِ ۫ؕ— ثَلٰثُ عَوْرٰتٍ لَّكُمْ ؕ— لَیْسَ عَلَیْكُمْ وَلَا عَلَیْهِمْ جُنَاحٌ بَعْدَهُنَّ ؕ— طَوّٰفُوْنَ عَلَیْكُمْ بَعْضُكُمْ عَلٰی بَعْضٍ ؕ— كَذٰلِكَ یُبَیِّنُ اللّٰهُ لَكُمُ الْاٰیٰتِ ؕ— وَاللّٰهُ عَلِیْمٌ حَكِیْمٌ ۟

ಓ ಸತ್ಯವಿಶ್ವಾಸಿಗಳೇ, ನಿಮ್ಮ ಅಧೀನದಲ್ಲಿರುವ ಗುಲಾಮರು ಮತ್ತು ಯೌವ್ವನಕ್ಕೆ ತಲುಪದ ನಿಮ್ಮ ಮಕ್ಕಳು ಮೂರು ಸಮಯಗಳಲ್ಲಿ (ನಿಮ್ಮ ಬಳಿ ಬರಲು) ನಿಮ್ಮೊಂದಿಗೆ ಅನುಮತಿಯನ್ನು ಪಡೆಯುವುದು ಅನಿವಾರ್ಯವಾಗಿದೆ. ಫಜ್ರ್ ನಮಾಝಿನ ಮೊದಲು ಮತ್ತು ಝೊಹರ್ ಸಮಯದಲ್ಲಿ ನೀವು ನಿಮ್ಮ ಉಡುಪನ್ನು ಕಳಚಿಡುವ ಸಂದರ್ಭದಲ್ಲಿ ಹಾಗೂ ಇಶಾ ನಮಾಝ್‌ನ ಬಳಿಕ. ಈ ಮೂರೂ ನಿಮ್ಮ ಖಾಸಗಿ ವೇಳೆಗಳಾಗಿವೆ. ಇವುಗಳ ನಂತರದ ವೇಳೆಗಳಲ್ಲಿ ನಿಮ್ಮ ಮೇಲಾಗಲೀ, ಅವರ ಮೇಲಾಗಲೀ ಯಾವ ದೋಷವು ಇರುವುದಿಲ್ಲ. ನೀವೆಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ಬಳಿ ಹೆಚ್ಚಾಗಿ ತಿರುಗಾಡುವವರಾಗಿರುತ್ತೀರಿ. ಇದೇ ಪ್ರಕಾರ ಅಲ್ಲಾಹನು ತನ್ನ ನಿಯಮಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿಪೂರ್ಣನೂ ಆಗಿರುತ್ತಾನೆ. info
التفاسير: