《古兰经》译解 - 卡纳达语翻译 - 巴希尔·梅苏里。

页码:close

external-link copy
68 : 7

اُبَلِّغُكُمْ رِسٰلٰتِ رَبِّیْ وَاَنَا لَكُمْ نَاصِحٌ اَمِیْنٌ ۟

ನಿಮಗೆ ನನ್ನ ಪ್ರಭುವಿನ ಸಂದೇಶಗಳನ್ನು ತಲುಪಿಸುತ್ತಿದ್ದೇನೆ ಮತ್ತು ನಾನು ನಿಮ್ಮ ನಂಬಿಗಸ್ಥನಾದ ಹಿತಕಾಂಕ್ಷಿಯಾಗಿದ್ದೇನೆ. info
التفاسير:

external-link copy
69 : 7

اَوَعَجِبْتُمْ اَنْ جَآءَكُمْ ذِكْرٌ مِّنْ رَّبِّكُمْ عَلٰی رَجُلٍ مِّنْكُمْ لِیُنْذِرَكُمْ ؕ— وَاذْكُرُوْۤا اِذْ جَعَلَكُمْ خُلَفَآءَ مِنْ بَعْدِ قَوْمِ نُوْحٍ وَّزَادَكُمْ فِی الْخَلْقِ بَصْۜطَةً ۚ— فَاذْكُرُوْۤا اٰلَآءَ اللّٰهِ لَعَلَّكُمْ تُفْلِحُوْنَ ۟

ನಿಮಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ನಿಮ್ಮಲ್ಲೊಬ್ಬ ವ್ಯಕ್ತಿಯ ಮೇಲೆ ನಿಮ್ಮ ಪ್ರಭುವಿನ ವತಿಯಿಂದ ನಿಮ್ಮೆಡೆಗೆ ಒಂದು ಉಪದೇಶವು ಬಂದಿರುವುದರ ಕುರಿತು ನೀವು ಆಶ್ಚರ್ಯಪಡುತ್ತಿದ್ದೀರಾ? ಮತ್ತು ಅವನು ನಿಮ್ಮನ್ನು ನೂಹ್‌ರವರ ಜನತೆಯ ಬಳಿಕ ಉತ್ತರಾಧಿಕಾರಿಗಳನ್ನಾಗಿ ಮಾಡಿರುವುದನ್ನೂ, ದೇಹದಾರ್ಢ್ಯತೆಯಲ್ಲಿ ಹೆಚ್ಚಿನ ವರ್ಧನೆಯನ್ನು ನೀಡಿರುವುದನ್ನು ಸ್ಮರಿಸಿರಿ. ಇನ್ನು ನೀವು ಯಶಸ್ಸು ಪಡೆಯಲೆಂದು ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. info
التفاسير:

external-link copy
70 : 7

قَالُوْۤا اَجِئْتَنَا لِنَعْبُدَ اللّٰهَ وَحْدَهٗ وَنَذَرَ مَا كَانَ یَعْبُدُ اٰبَآؤُنَا ۚ— فَاْتِنَا بِمَا تَعِدُنَاۤ اِنْ كُنْتَ مِنَ الصّٰدِقِیْنَ ۟

ಅವರು ಹೇಳಿದರು: ನಾವು ಕೇವಲ ಅಲ್ಲಾಹನ ಆರಾಧನೆ ಮಾಡಬೇಕು ಮತ್ತು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದುದ್ದನ್ನು ನಾವು ತೊರೆಯಬೇಕು ಎಂದು ಹೇಳುವುದಕ್ಕಾಗಿ ನೀನು ನಮ್ಮ ಬಳಿಗೆ ಬಂದಿರುವೆಯಾ? ನೀನು ಸತ್ಯಸಂಧನಾಗಿದ್ದರೆ, ನಮಗೆ ಬೆದರಿಸುತ್ತಿರುವ ಆ ಶಿಕ್ಷೆಯನ್ನು ತಂದು ಬಿಡು. info
التفاسير:

external-link copy
71 : 7

قَالَ قَدْ وَقَعَ عَلَیْكُمْ مِّنْ رَّبِّكُمْ رِجْسٌ وَّغَضَبٌ ؕ— اَتُجَادِلُوْنَنِیْ فِیْۤ اَسْمَآءٍ سَمَّیْتُمُوْهَاۤ اَنْتُمْ وَاٰبَآؤُكُمْ مَّا نَزَّلَ اللّٰهُ بِهَا مِنْ سُلْطٰنٍ ؕ— فَانْتَظِرُوْۤا اِنِّیْ مَعَكُمْ مِّنَ الْمُنْتَظِرِیْنَ ۟

ಹೂದ್ ಹೇಳಿದರು: ಖಂಡಿತವಾಗಿಯು ನಿಮ್ಮ ಮೇಲೆ ಅಲ್ಲಾಹನ ಕಡೆಯ ಶಿಕ್ಷೆ ಮತ್ತು ಕ್ರೋಧವು ಎರಗಿದೆ. ನೀವು ಮತ್ತು ನಿಮ್ಮ ಪೂರ್ವಿಕರು ನಿಶ್ಚಿಯಿಸಿದಂತಹ ಹೆಸರುಗಳ (ವಿಗ್ರಹಗಳ) ಕುರಿತು ನೀವು ನನ್ನಲ್ಲಿ ತರ್ಕ ಮಾಡುತ್ತಿರುವಿರಾ? ಮತ್ತು ಅವು ಆರಾಧ್ಯರೆಂಬುದಕ್ಕೆ ಅಲ್ಲಾಹನು ಯಾವುದೇ ಪುರಾವೆಯನ್ನು ಇಳಿಸಿಲ್ಲ. ಹಾಗಾದರೆ ನೀವು ಕಾಯುತ್ತಿರಿ, ನಾನೂ ಸಹ ನಿಮ್ಮೊಂದಿಗೆ ಕಾಯುತ್ತಿರುವೆನು. info
التفاسير:

external-link copy
72 : 7

فَاَنْجَیْنٰهُ وَالَّذِیْنَ مَعَهٗ بِرَحْمَةٍ مِّنَّا وَقَطَعْنَا دَابِرَ الَّذِیْنَ كَذَّبُوْا بِاٰیٰتِنَا وَمَا كَانُوْا مُؤْمِنِیْنَ ۟۠

ತುರವಾಯ ನಾವು ಹೂದ್ ಮತ್ತು ಅವರ ಸಂಗಡಿಗರನ್ನು ನಮ್ಮ ಕಾರುಣ್ಯದಿಂದ ರಕ್ಷಿಸಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದವರನ್ನು ನಿರ್ಮೂಲ ಮಾಡಿದೆವು. ಅವರು ಸತ್ಯವಿಶ್ವಾಸ ಸ್ವೀಕರಿಸುವವರಾಗಿರಲಿಲ್ಲ. info
التفاسير:

external-link copy
73 : 7

وَاِلٰی ثَمُوْدَ اَخَاهُمْ صٰلِحًا ۘ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— قَدْ جَآءَتْكُمْ بَیِّنَةٌ مِّنْ رَّبِّكُمْ ؕ— هٰذِهٖ نَاقَةُ اللّٰهِ لَكُمْ اٰیَةً فَذَرُوْهَا تَاْكُلْ فِیْۤ اَرْضِ اللّٰهِ وَلَا تَمَسُّوْهَا بِسُوْٓءٍ فَیَاْخُذَكُمْ عَذَابٌ اَلِیْمٌ ۟

ಮತ್ತು ನಾವು ಸಮೂದ್ ಜನಾಂಗದೆಡೆಗೆ ಅವರ ಸಹೋದರ ಸ್ವಾಲಿಹ್‌ರವರನ್ನು ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನತೆಯೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯನಿಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಸ್ಪಷ್ಟವಾದ ಒಂದು ಪುರಾವೆಯು ಬಂದಿರುತ್ತದೆ. ಇದು ನಿಮಗೆ ದೃಷ್ಟಾಂತವಾಗಿರುವ ಅಲ್ಲಾಹನ ಒಂಟೆಯಾಗಿದೆ. ಅದ್ದರಿಂದ ನೀವಿದನ್ನು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲು ಬಿಟ್ಟು ಬಿಡಿರಿ. ನೀವು ಇದರ ಮೇಲೆ ಕೆಟ್ಟ ಉದ್ದೇಶದಿಂದ ಕೈಹಾಕಬೇಡಿರಿ. ಅನ್ಯಥಾ ವೇದನಾಜನಕವಾದ ಶಿಕ್ಷೆಯು ನಿಮ್ಮನ್ನು ಹಿಡಿದುಕೊಳ್ಳುವುದು. info
التفاسير: