《古兰经》译解 - 卡纳达语翻译 - 巴希尔·梅苏里。

页码:close

external-link copy
58 : 7

وَالْبَلَدُ الطَّیِّبُ یَخْرُجُ نَبَاتُهٗ بِاِذْنِ رَبِّهٖ ۚ— وَالَّذِیْ خَبُثَ لَا یَخْرُجُ اِلَّا نَكِدًا ؕ— كَذٰلِكَ نُصَرِّفُ الْاٰیٰتِ لِقَوْمٍ یَّشْكُرُوْنَ ۟۠

ಫಲವತ್ತಾದ ಪ್ರದೇಶದಲ್ಲಿ ಸಸ್ಯಗಳು ಅಲ್ಲಾಹನ ಅಪ್ಪಣೆಯಿಂದ ಅದರ ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ ಮತ್ತು ಕೆಟ್ಟ ಪ್ರದೇಶದಲ್ಲಿ ಸಸ್ಯಗಳು ನಿಷ್ಪçಯೋಜಕವಾಗಿ ಬೆಳೆಯುತ್ತವೆ. ಕೃತಜ್ಞತೆ ತೋರುವ ಜನರಿಗಾಗಿ ನಾವು ವಿವಿಧ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸಿ ಕೊಡುತ್ತೇವೆ. info
التفاسير:

external-link copy
59 : 7

لَقَدْ اَرْسَلْنَا نُوْحًا اِلٰی قَوْمِهٖ فَقَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اِنِّیْۤ اَخَافُ عَلَیْكُمْ عَذَابَ یَوْمٍ عَظِیْمٍ ۟

ನಾವು ನೂಹ್‌ರನ್ನು ಅವರ ಜನತೆಯೆಡೆಗೆ ನಿಯೋಗಿಸಿದಾಗ ಅವರು ಹೇಳಿದರು: ಓ ನನ್ನ ಜನತೆಯೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯನಿಲ್ಲ. ನಾನು ನಿಮ್ಮ ಕುರಿತು ಒಂದು ಮಹಾ ದಿನದ ಯಾತನೆಯ ಭಯ ಪಡುತ್ತೇನೆ. info
التفاسير:

external-link copy
60 : 7

قَالَ الْمَلَاُ مِنْ قَوْمِهٖۤ اِنَّا لَنَرٰىكَ فِیْ ضَلٰلٍ مُّبِیْنٍ ۟

ಅವರ ಜನತೆಯ ಪ್ರಮುಖರು ಹೇಳಿದರು: ನಾವು ನಿಮ್ಮನ್ನು ಸ್ಪಷ್ಟ ಮಾರ್ಗ ಭ್ರಷ್ಟತೆಯಲ್ಲಿರುವುದಾಗಿ ಕಾಣುತ್ತಿದ್ದೇವೆ. info
التفاسير:

external-link copy
61 : 7

قَالَ یٰقَوْمِ لَیْسَ بِیْ ضَلٰلَةٌ وَّلٰكِنِّیْ رَسُوْلٌ مِّنْ رَّبِّ الْعٰلَمِیْنَ ۟

ನೂಹ್‌ರು ಹೇಳಿದರು: ಓ ನನ್ನ ಜನತೆಯೇ, ನನ್ನಲ್ಲಿ ಯಾವುದೇ ಪಥ ಭ್ರಷ್ಟತೆಯಿಲ್ಲ. ಆದರೆ ನಾನು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕನಾಗಿದ್ದೇನೆ. info
التفاسير:

external-link copy
62 : 7

اُبَلِّغُكُمْ رِسٰلٰتِ رَبِّیْ وَاَنْصَحُ لَكُمْ وَاَعْلَمُ مِنَ اللّٰهِ مَا لَا تَعْلَمُوْنَ ۟

ನನ್ನ ಪ್ರಭುವಿನ ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತೇನೆ ಮತ್ತು ನಾನು ನಿಮ್ಮ ಹಿತ ಚಿಂತನೆ ಮಾಡುತ್ತೇನೆ ಮತ್ತು ನಿಮಗೆ ತಿಳಿಯದಿರುವಂತಹ ಅನೇಕ ವಿಚಾರಗಳನ್ನು ನಾನು ಅಲ್ಲಾಹನಿಂದ ತಿಳಿದು ಕೊಂಡಿದ್ದೇನೆ. info
التفاسير:

external-link copy
63 : 7

اَوَعَجِبْتُمْ اَنْ جَآءَكُمْ ذِكْرٌ مِّنْ رَّبِّكُمْ عَلٰی رَجُلٍ مِّنْكُمْ لِیُنْذِرَكُمْ وَلِتَتَّقُوْا وَلَعَلَّكُمْ تُرْحَمُوْنَ ۟

ನಿಮಗೆ ಎಚ್ಚರಿಕೆ ನೀಡಲಿಕ್ಕೂ, ನೀವು ಭಯಪಡಲಿಕ್ಕೂ ಹಾಗೂ ನಿಮ್ಮ ಮೇಲೆ ಕರುಣೆ ತೋರಲಿಕ್ಕೂ ನಿಮ್ಮಲ್ಲೊಬ್ಬ ವ್ಯಕ್ತಿಯ ಮೇಲೆ ನಿಮ್ಮ ಪ್ರಭುವಿನ ವತಿಯಿಂದ ಒಂದು ಉಪದೇಶವು ಬಂದಿರುವುದರ ಕುರಿತು ನೀವು ಆಶ್ಚರ್ಯ ಪಡುತ್ತಿದ್ದೀರಾ? info
التفاسير:

external-link copy
64 : 7

فَكَذَّبُوْهُ فَاَنْجَیْنٰهُ وَالَّذِیْنَ مَعَهٗ فِی الْفُلْكِ وَاَغْرَقْنَا الَّذِیْنَ كَذَّبُوْا بِاٰیٰتِنَا ؕ— اِنَّهُمْ كَانُوْا قَوْمًا عَمِیْنَ ۟۠

ಆದರೆ ಅವರು ಅವರನ್ನು (ನೂಹ್‌ರನ್ನು) ಸುಳ್ಳಾಗಿಸುತ್ತಲೇ ಇದ್ದರು. ಆಗ ನಾವು ಅವರನ್ನು, ಅವರ ಜೊತೆ ಹಡಗಿನಲ್ಲಿದ್ದವರನ್ನೂ ರಕ್ಷಿಸಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸುತ್ತಿದ್ದವರನ್ನು ಮುಳುಗಿಸಿ ಬಿಟ್ಟೆವು. ನಿಸ್ಸಂಶಯವಾಗಿಯು ಅವರು ಅಂಧರಾದ ಜನರಾಗಿದ್ದರು. info
التفاسير:

external-link copy
65 : 7

وَاِلٰی عَادٍ اَخَاهُمْ هُوْدًا ؕ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اَفَلَا تَتَّقُوْنَ ۟

ಮತ್ತು ಆದ್ ಜನಾಂಗದೆಡೆಗೆ ನಾವು ಅವರ ಸಹೋದರ ಹೂದ್‌ರನ್ನು ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯನಿಲ್ಲ. ನೀವು ಭಯಭಕ್ತಿ ಪಾಲಿಸುವುದಿಲ್ಲವೇ? info
التفاسير:

external-link copy
66 : 7

قَالَ الْمَلَاُ الَّذِیْنَ كَفَرُوْا مِنْ قَوْمِهٖۤ اِنَّا لَنَرٰىكَ فِیْ سَفَاهَةٍ وَّاِنَّا لَنَظُنُّكَ مِنَ الْكٰذِبِیْنَ ۟

ಅವರ ಜನಾಂಗದ ಸತ್ಯನಿಷೇಧಿಗಳಾದ ಪ್ರಮುಖರು ಹೇಳಿದರು: ನಾವು ನಿಮ್ಮನ್ನು ಮೂರ್ಖತನದಲ್ಲಿ ಕಾಣುತ್ತಿದ್ದೇವೆ ಮತ್ತು ನಿಸ್ಸಂಶಯವಾಗಿಯು ನಾವು ನಿಮ್ಮನ್ನು ಸುಳ್ಳರಲ್ಲಿ ಸೇರಿದವರೆಂದು ಭಾವಿಸುತ್ತಿದ್ದೇವೆ. info
التفاسير:

external-link copy
67 : 7

قَالَ یٰقَوْمِ لَیْسَ بِیْ سَفَاهَةٌ وَّلٰكِنِّیْ رَسُوْلٌ مِّنْ رَّبِّ الْعٰلَمِیْنَ ۟

ಹೂದ್‌ರವರು ಹೇಳಿದರು: ನನ್ನ ಜನಾಂಗದವರೇ, ನನ್ನಲ್ಲಿ ಯಾವುದೇ ಮೂರ್ಖತನವಿಲ್ಲ. ಆದರೆ ನಾನು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕನಾಗಿದ್ದೇನೆ. info
التفاسير: