Қуръони Карим маъноларининг таржимаси - Каннада тили таржимаси - Ҳамза Бетур

ಅಲ್ -ಅಅ್ ಲಾ

external-link copy
1 : 87

سَبِّحِ اسْمَ رَبِّكَ الْاَعْلَی ۟ۙ

ಅತ್ಯುನ್ನತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನ ಪರಿಶುದ್ಧಿಯನ್ನು ಕೊಂಡಾಡಿರಿ. info
التفاسير:

external-link copy
2 : 87

الَّذِیْ خَلَقَ فَسَوّٰی ۟

ಅವನು ಯಾರೆಂದರೆ ಸೃಷ್ಟಿಸಿದವನು ಮತ್ತು ಸರಿಪಡಿಸಿದವನು, info
التفاسير:

external-link copy
3 : 87

وَالَّذِیْ قَدَّرَ فَهَدٰی ۟

(ಸರಿಯಾಗಿ) ನಿರ್ಣಯಿಸಿದವನು ಮತ್ತು ಮಾರ್ಗದರ್ಶನ ಮಾಡಿದವನು, info
التفاسير:

external-link copy
4 : 87

وَالَّذِیْۤ اَخْرَجَ الْمَرْعٰی ۟

ಹಸಿರು ಹಲ್ಲುಗಾವಲನ್ನು ಉಂಟು ಮಾಡಿದವನು, info
التفاسير:

external-link copy
5 : 87

فَجَعَلَهٗ غُثَآءً اَحْوٰی ۟ؕ

ನಂತರ ಅವನು ಅದನ್ನು (ಒಣಗುವಂತೆ ಮಾಡಿ) ಕಪ್ಪು ಕಸಕಡ್ಡಿಗಳಾಗಿ ಪರಿವರ್ತಿಸಿದನು. info
التفاسير:

external-link copy
6 : 87

سَنُقْرِئُكَ فَلَا تَنْسٰۤی ۟ۙ

ನಾವು ನಿಮಗೆ ಓದಿಕೊಡುವೆವು. ನಂತರ ನೀವು ಮರೆಯಲಾರಿರಿ. info
التفاسير:

external-link copy
7 : 87

اِلَّا مَا شَآءَ اللّٰهُ ؕ— اِنَّهٗ یَعْلَمُ الْجَهْرَ وَمَا یَخْفٰی ۟ؕ

ಅಲ್ಲಾಹು ಇಚ್ಛಿಸುವುದರ ಹೊರತಾಗಿ. ಅವನು ಬಹಿರಂಗವಾಗಿರುವುದನ್ನು ಮತ್ತು ರಹಸ್ಯವಾಗಿರುವುದನ್ನು ತಿಳಿಯುತ್ತಾನೆ. info
التفاسير:

external-link copy
8 : 87

وَنُیَسِّرُكَ لِلْیُسْرٰی ۟ۚۖ

ನಾವು ನಿಮಗೆ ಸುಲಭ ಮಾಡಿಕೊಡುವೆವು. info
التفاسير:

external-link copy
9 : 87

فَذَكِّرْ اِنْ نَّفَعَتِ الذِّكْرٰی ۟ؕ

ಆದ್ದರಿಂದ ನೀವು ಉಪದೇಶ ನೀಡಿರಿ. ಉಪದೇಶವು ಪ್ರಯೋಜನ ನೀಡುವುದಾದರೆ. info
التفاسير:

external-link copy
10 : 87

سَیَذَّكَّرُ مَنْ یَّخْشٰی ۟ۙ

ಭಯಪಡುವವನು ಉಪದೇಶವನ್ನು ಸ್ವೀಕರಿಸುವನು. info
التفاسير:

external-link copy
11 : 87

وَیَتَجَنَّبُهَا الْاَشْقَی ۟ۙ

ನತದೃಷ್ಟನು ಆ ಉಪದೇಶದಿಂದ ದೂರ ಸರಿಯುವನು. info
التفاسير:

external-link copy
12 : 87

الَّذِیْ یَصْلَی النَّارَ الْكُبْرٰی ۟ۚ

ಅವನು ಯಾರೆಂದರೆ ಅತಿದೊಡ್ಡ ಅಗ್ನಿಯನ್ನು ಪ್ರವೇಶಿಸುವವನು. info
التفاسير:

external-link copy
13 : 87

ثُمَّ لَا یَمُوْتُ فِیْهَا وَلَا یَحْیٰی ۟ؕ

ನಂತರ ಅವನು ಅಲ್ಲಿ ಸಾಯುವುದಿಲ್ಲ, ಬದುಕುವುದೂ ಇಲ್ಲ. info
التفاسير:

external-link copy
14 : 87

قَدْ اَفْلَحَ مَنْ تَزَكّٰی ۟ۙ

ನಿಶ್ಚಯವಾಗಿಯೂ ಪರಿಶುದ್ಧತೆ ಪಡೆದವನು ಯಶಸ್ವಿಯಾದನು. info
التفاسير:

external-link copy
15 : 87

وَذَكَرَ اسْمَ رَبِّهٖ فَصَلّٰی ۟ؕ

ತನ್ನ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿದವನು ಮತ್ತು ನಮಾಝ್ ಮಾಡಿದವನು. info
التفاسير:

external-link copy
16 : 87

بَلْ تُؤْثِرُوْنَ الْحَیٰوةَ الدُّنْیَا ۟ۚۖ

ಆದರೆ ನೀವು ಇಹಲೋಕ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ. info
التفاسير:

external-link copy
17 : 87

وَالْاٰخِرَةُ خَیْرٌ وَّاَبْقٰی ۟ؕ

ಪರಲೋಕವು ಅತಿಶ್ರೇಷ್ಠ ಮತ್ತು ಶಾಶ್ವತವಾಗಿದೆ. info
التفاسير:

external-link copy
18 : 87

اِنَّ هٰذَا لَفِی الصُّحُفِ الْاُوْلٰی ۟ۙ

ಈ ಮಾತುಗಳು ಹಿಂದಿನ ಗ್ರಂಥಗಳಲ್ಲಿವೆ. info
التفاسير:

external-link copy
19 : 87

صُحُفِ اِبْرٰهِیْمَ وَمُوْسٰی ۟۠

ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ. info
التفاسير: