Қуръони Карим маъноларининг таржимаси - Каннада тили таржимаси - Ҳамза Бетур

Бет рақами:close

external-link copy
104 : 5

وَاِذَا قِیْلَ لَهُمْ تَعَالَوْا اِلٰی مَاۤ اَنْزَلَ اللّٰهُ وَاِلَی الرَّسُوْلِ قَالُوْا حَسْبُنَا مَا وَجَدْنَا عَلَیْهِ اٰبَآءَنَا ؕ— اَوَلَوْ كَانَ اٰبَآؤُهُمْ لَا یَعْلَمُوْنَ شَیْـًٔا وَّلَا یَهْتَدُوْنَ ۟

“ಅಲ್ಲಾಹು ಅವತೀರ್ಣಗೊಳಿಸಿದ ಸಂದೇಶಕ್ಕೆ ಮತ್ತು ಸಂದೇಶವಾಹಕರ ಬಳಿಗೆ ಬನ್ನಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಮ್ಮ ಪೂರ್ವಜರು ಏನು ಮಾಡುವುದಾಗಿ ನಾವು ಕಂಡೆವೋ ಅದು ನಮಗೆ ಸಾಕು.” ಆದರೆ ಅವರ ಪೂರ್ವಜರು ಏನೂ ತಿಳಿಯದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಸಹ (ಅವರಿಗೆ ಅದು ಸಾಕೇ?) info
التفاسير:

external-link copy
105 : 5

یٰۤاَیُّهَا الَّذِیْنَ اٰمَنُوْا عَلَیْكُمْ اَنْفُسَكُمْ ۚ— لَا یَضُرُّكُمْ مَّنْ ضَلَّ اِذَا اهْتَدَیْتُمْ ؕ— اِلَی اللّٰهِ مَرْجِعُكُمْ جَمِیْعًا فَیُنَبِّئُكُمْ بِمَا كُنْتُمْ تَعْمَلُوْنَ ۟

ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಿ. ನೀವು ಸನ್ಮಾರ್ಗಿಗಳಾದರೆ, ದುರ್ಮಾರ್ಗದಲ್ಲಿರುವವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ನೀವೆಲ್ಲರೂ ಅಲ್ಲಾಹನ ಬಳಿಗೆ ಮರಳಿಹೋಗುವಿರಿ. ಆಗ ಅವನು ನೀವು ಮಾಡಿದ ಕರ್ಮಗಳನ್ನು ನಿಮಗೆ ತಿಳಿಸಿಕೊಡುವನು. info
التفاسير:

external-link copy
106 : 5

یٰۤاَیُّهَا الَّذِیْنَ اٰمَنُوْا شَهَادَةُ بَیْنِكُمْ اِذَا حَضَرَ اَحَدَكُمُ الْمَوْتُ حِیْنَ الْوَصِیَّةِ اثْنٰنِ ذَوَا عَدْلٍ مِّنْكُمْ اَوْ اٰخَرٰنِ مِنْ غَیْرِكُمْ اِنْ اَنْتُمْ ضَرَبْتُمْ فِی الْاَرْضِ فَاَصَابَتْكُمْ مُّصِیْبَةُ الْمَوْتِ ؕ— تَحْبِسُوْنَهُمَا مِنْ بَعْدِ الصَّلٰوةِ فَیُقْسِمٰنِ بِاللّٰهِ اِنِ ارْتَبْتُمْ لَا نَشْتَرِیْ بِهٖ ثَمَنًا وَّلَوْ كَانَ ذَا قُرْبٰی ۙ— وَلَا نَكْتُمُ شَهَادَةَ ۙ— اللّٰهِ اِنَّاۤ اِذًا لَّمِنَ الْاٰثِمِیْنَ ۟

ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲೊಬ್ಬನು ಮರಣಶಯ್ಯೆಯಲ್ಲಿದ್ದು ಉಯಿಲು ಮಾಡುವಾಗ, ನಿಮ್ಮಲ್ಲಿನ ಇಬ್ಬರು ನ್ಯಾಯವಂತರು ಅಥವಾ ನಿಮ್ಮವರಲ್ಲದ ಇಬ್ಬರು ಸಾಕ್ಷಿ ನಿಲ್ಲಲಿ—ನೀವು ಭೂಮಿಯಲ್ಲಿ ಪ್ರಯಾಣ ಮಾಡುತ್ತಿರುವಾಗ ನಿಮಗೆ ಮರಣವು ಸನ್ನಿಹಿತವಾದರೆ. ಇನ್ನು ನಿಮಗೆ (ಅವರ ಸಾಕ್ಷಿಯಲ್ಲಿ) ಸಂಶಯವಾದರೆ ನಮಾಝ್ ನಿರ್ವಹಿಸಿದ ನಂತರ ಅವರಿಬ್ಬರನ್ನು ತಡೆದು ನಿಲ್ಲಿಸಿರಿ; ಆಗ ಅವರು ಅಲ್ಲಾಹನ ಮೇಲೆ ಆಣೆ ಮಾಡಿ ಹೀಗೆ ಹೇಳಲಿ: “ನಾವು ಈ ಸಾಕ್ಷಿಗೆ ಬದಲಿಯಾಗಿ ಯಾವುದೇ ಬೆಲೆಯನ್ನು ಪಡೆಯುವುದಿಲ್ಲ, ಅವನು ಹತ್ತಿರದ ಸಂಬಂಧಿಕನಾದರೂ ಸಹ. ಅಲ್ಲಾಹನಿಗಾಗಿರುವ ಸಾಕ್ಷ್ಯವನ್ನು ನಾವು ಅಡಗಿಸುವುದಿಲ್ಲ. ನಾವೇನಾದರೂ ಹಾಗೆ ಮಾಡಿದರೆ ನಿಶ್ಚಯವಾಗಿಯೂ ನಾವು ಪಾಪಿಗಳಲ್ಲಿ ಸೇರುವೆವು.” info
التفاسير:

external-link copy
107 : 5

فَاِنْ عُثِرَ عَلٰۤی اَنَّهُمَا اسْتَحَقَّاۤ اِثْمًا فَاٰخَرٰنِ یَقُوْمٰنِ مَقَامَهُمَا مِنَ الَّذِیْنَ اسْتَحَقَّ عَلَیْهِمُ الْاَوْلَیٰنِ فَیُقْسِمٰنِ بِاللّٰهِ لَشَهَادَتُنَاۤ اَحَقُّ مِنْ شَهَادَتِهِمَا وَمَا اعْتَدَیْنَاۤ ۖؗ— اِنَّاۤ اِذًا لَّمِنَ الظّٰلِمِیْنَ ۟

ಅವರಿಬ್ಬರು ದೋಷಿಗಳೆಂದು ಸಾಬೀತಾದರೆ, ಅವರು ಯಾರಿಗೆ ಅನ್ಯಾಯ ಮಾಡಿದರೋ ಅವರ ಪೈಕಿ ಮೃತ ವ್ಯಕ್ತಿಗೆ ಹೆಚ್ಚು ಆಪ್ತರಾಗಿರುವ ಇಬ್ಬರು ಅವರ ಸ್ಥಾನದಲ್ಲಿ ನಿಂತು, ಅಲ್ಲಾಹನ ಮೇಲೆ ಆಣೆ ಮಾಡಿ, “ಅವರ ಸಾಕ್ಷಿಗಿಂತ ನಮ್ಮ ಸಾಕ್ಷಿಯೇ ಹೆಚ್ಚು ಸತ್ಯವಾಗಿದೆ, ನಾವು ಯಾವುದೇ ಅತಿರೇಕವನ್ನೆಸಗಿಲ್ಲ; ನಾವೇನಾದರೂ ಹಾಗೆ ಮಾಡಿದರೆ ನಾವು ಅಕ್ರಮವೆಸಗಿದವರಲ್ಲಿ ಸೇರುವೆವು” ಎಂದು ಸಾಕ್ಷಿ ಹೇಳಲಿ. info
التفاسير:

external-link copy
108 : 5

ذٰلِكَ اَدْنٰۤی اَنْ یَّاْتُوْا بِالشَّهَادَةِ عَلٰی وَجْهِهَاۤ اَوْ یَخَافُوْۤا اَنْ تُرَدَّ اَیْمَانٌ بَعْدَ اَیْمَانِهِمْ ؕ— وَاتَّقُوا اللّٰهَ وَاسْمَعُوْا ؕ— وَاللّٰهُ لَا یَهْدِی الْقَوْمَ الْفٰسِقِیْنَ ۟۠

ಅವರು ಸರಿಯಾದ ವಿಧದಲ್ಲಿ ಸಾಕ್ಷಿ ನುಡಿಯಲು, ಅಥವಾ ಅವರು ಆಣೆ ಮಾಡಿದ ಬಳಿಕ (ವಾರಸುದಾರರಿಗೆ) ಆಣೆ ಮಾಡಲು ಅವಕಾಶ ನೀಡಲಾಗುವುದೆಂಬ ಭಯವು ಅವರಲ್ಲುಂಟಾಗಲು ಇದು ಹೆಚ್ಚು ಸೂಕ್ತವಾಗಿದೆ. ನೀವು ಅಲ್ಲಾಹನನ್ನು ಭಯಪಡಿರಿ ಮತ್ತು (ಅವನ ಆದೇಶಗಳಿಗೆ) ಕಿವಿಗೊಡಿರಿ. ವಿಧೇಯತೆಯಿಲ್ಲದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. info
التفاسير: