Қуръони Карим маъноларининг таржимаси - Каннада тили таржимаси - Ҳамза Бетур

ಸಬಅ್

external-link copy
1 : 34

اَلْحَمْدُ لِلّٰهِ الَّذِیْ لَهٗ مَا فِی السَّمٰوٰتِ وَمَا فِی الْاَرْضِ وَلَهُ الْحَمْدُ فِی الْاٰخِرَةِ ؕ— وَهُوَ الْحَكِیْمُ الْخَبِیْرُ ۟

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಯಾರಿಗೆ ಸೇರಿದೆಯೋ ಆ ಅಲ್ಲಾಹನಿಗೆ ಸರ್ವಸ್ತುತಿ. ಪರಲೋಕದಲ್ಲೂ ಅವನಿಗೇ ಸರ್ವಸ್ತುತಿ. ಅವನು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ. info
التفاسير:

external-link copy
2 : 34

یَعْلَمُ مَا یَلِجُ فِی الْاَرْضِ وَمَا یَخْرُجُ مِنْهَا وَمَا یَنْزِلُ مِنَ السَّمَآءِ وَمَا یَعْرُجُ فِیْهَا ؕ— وَهُوَ الرَّحِیْمُ الْغَفُوْرُ ۟

ಭೂಮಿಗೆ ಏನೆಲ್ಲಾ ಪ್ರವೇಶಿಸುತ್ತವೆ, ಭೂಮಿಯಿಂದ ಏನೆಲ್ಲಾ ಹೊರಬರುತ್ತವೆ, ಆಕಾಶದಿಂದ ಏನೆಲ್ಲಾ ಇಳಿಯುತ್ತವೆ ಮತ್ತು ಏನೆಲ್ಲಾ ಆಕಾಶಕ್ಕೇರುತ್ತವೆಯೆಂದು ಅವನು ತಿಳಿಯುತ್ತಾನೆ. ಅವನು ದಯೆ ತೋರುವವನು ಮತ್ತು ಕ್ಷಮಿಸುವವನಾಗಿದ್ದಾನೆ. info
التفاسير:

external-link copy
3 : 34

وَقَالَ الَّذِیْنَ كَفَرُوْا لَا تَاْتِیْنَا السَّاعَةُ ؕ— قُلْ بَلٰی وَرَبِّیْ لَتَاْتِیَنَّكُمْ ۙ— عٰلِمِ الْغَیْبِ ۚ— لَا یَعْزُبُ عَنْهُ مِثْقَالُ ذَرَّةٍ فِی السَّمٰوٰتِ وَلَا فِی الْاَرْضِ وَلَاۤ اَصْغَرُ مِنْ ذٰلِكَ وَلَاۤ اَكْبَرُ اِلَّا فِیْ كِتٰبٍ مُّبِیْنٍ ۟ۙ

ಸತ್ಯನಿಷೇಧಿಗಳು ಹೇಳಿದರು: “ಅಂತ್ಯಸಮಯವು ನಮ್ಮ ಬಳಿಗೆ ಬರುವುದಿಲ್ಲ.” ಹೇಳಿರಿ: “ಹೌದು, ನನ್ನ ಪರಿಪಾಲಕನ (ಅಲ್ಲಾಹನ) ಮೇಲಾಣೆ! ಅವನು ಅದೃಶ್ಯಜ್ಞಾನಿಯಾಗಿದ್ದಾನೆ. ಅದು ನಿಮ್ಮ ಬಳಿಗೆ ಖಂಡಿತ ಬರುತ್ತದೆ. ಭೂಮ್ಯಾಕಾಶಗಳಲ್ಲಿ ಒಂದು ಅಣುವಿನ ಗಾತ್ರದ ಅಥವಾ ಅದಕ್ಕಿಂತ ಚಿಕ್ಕ ಅಥವಾ ದೊಡ್ಡದಾದ ಯಾವುದೇ ವಸ್ತುವೂ ಅಲ್ಲಾಹನಿಂದ ಮರೆಯಾಗಿಲ್ಲ. ಎಲ್ಲವನ್ನೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಲಾಗಿದೆ. info
التفاسير:

external-link copy
4 : 34

لِّیَجْزِیَ الَّذِیْنَ اٰمَنُوْا وَعَمِلُوا الصّٰلِحٰتِ ؕ— اُولٰٓىِٕكَ لَهُمْ مَّغْفِرَةٌ وَّرِزْقٌ كَرِیْمٌ ۟

ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ ಪ್ರತಿಫಲವನ್ನು ನೀಡುವುದಕ್ಕಾಗಿ. ಅವರಿಗೆ ಕ್ಷಮೆ ಮತ್ತು ಗಣ್ಯ ಉಪಜೀವನವಿದೆ. info
التفاسير:

external-link copy
5 : 34

وَالَّذِیْنَ سَعَوْ فِیْۤ اٰیٰتِنَا مُعٰجِزِیْنَ اُولٰٓىِٕكَ لَهُمْ عَذَابٌ مِّنْ رِّجْزٍ اَلِیْمٌ ۟

ನಮ್ಮ ವಚನಗಳನ್ನು ವಿರೂಪವಾಗಿ ತೋರಿಸಲು ಪ್ರಯತ್ನಿಸುವವರು ಯಾರೋ ಅವರಿಗೆ ಅತ್ಯಂತ ಕೆಟ್ಟ ರೀತಿಯ ಯಾತನಾಮಯ ಶಿಕ್ಷೆಯಿದೆ. info
التفاسير:

external-link copy
6 : 34

وَیَرَی الَّذِیْنَ اُوْتُوا الْعِلْمَ الَّذِیْۤ اُنْزِلَ اِلَیْكَ مِنْ رَّبِّكَ هُوَ الْحَقَّ ۙ— وَیَهْدِیْۤ اِلٰی صِرَاطِ الْعَزِیْزِ الْحَمِیْدِ ۟

ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಏನು ಅವತೀರ್ಣವಾಗಿದೆಯೋ ಅದು ಸತ್ಯವಾಗಿದೆ ಮತ್ತು ಅದು ಪ್ರಬಲನು ಹಾಗೂ ಸ್ತುತ್ಯರ್ಹನಾದ ಅಲ್ಲಾಹನ ಮಾರ್ಗಕ್ಕೆ ಒಯ್ಯುತ್ತದೆ ಎಂದು ಜ್ಞಾನ ನೀಡಲಾದವರು ತಿಳಿಯುತ್ತಾರೆ. info
التفاسير:

external-link copy
7 : 34

وَقَالَ الَّذِیْنَ كَفَرُوْا هَلْ نَدُلُّكُمْ عَلٰی رَجُلٍ یُّنَبِّئُكُمْ اِذَا مُزِّقْتُمْ كُلَّ مُمَزَّقٍ ۙ— اِنَّكُمْ لَفِیْ خَلْقٍ جَدِیْدٍ ۟ۚ

ಸತ್ಯನಿಷೇಧಿಗಳು ಹೇಳಿದರು: “ನೀವು (ನಿಧನರಾಗಿ) ಸಂಪೂರ್ಣ ಛಿದ್ರವಾದ ನಂತರ ನಿಮ್ಮನ್ನು ಪುನಃ ಹೊಸದಾಗಿ ಸೃಷ್ಟಿಸಲಾಗುವುದು ಎಂದು ನಿಮ್ಮೊಡನೆ ವಾದಿಸುವ ಒಬ್ಬ ವ್ಯಕ್ತಿಯನ್ನು ನಾವು ನಿಮಗೆ ತೋರಿಸಿಕೊಡಬೇಕೇ? info
التفاسير: