Қуръони Карим маъноларининг таржимаси - Каннада тили таржимаси - Ҳамза Бетур

external-link copy
161 : 3

وَمَا كَانَ لِنَبِیٍّ اَنْ یَّغُلَّ ؕ— وَمَنْ یَّغْلُلْ یَاْتِ بِمَا غَلَّ یَوْمَ الْقِیٰمَةِ ۚ— ثُمَّ تُوَفّٰی كُلُّ نَفْسٍ مَّا كَسَبَتْ وَهُمْ لَا یُظْلَمُوْنَ ۟

ಪ್ರವಾದಿಯು ಮೋಸ ಮಾಡುವುದು ಅಸಂಭವ.[1] ಯಾರು ಮೋಸ ಮಾಡುತ್ತಾನೋ ಅವನು ಪುನರುತ್ಥಾನ ದಿನದಂದು ತಾನು ಮಾಡಿದ ಮೋಸದೊಂದಿಗೆ ಬರುತ್ತಾನೆ. ನಂತರ ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮದ ಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. info

[1] ಉಹುದ್ ಯುದ್ಧದ ಆರಂಭದಲ್ಲಿ ವೈರಿಗಳು ದಿಕ್ಕಾಪಾಲಾಗಿ ಓಡಿ ಮುಸಲ್ಮಾನರಿಗೆ ಗೆಲುವು ಸಿಕ್ಕಿದಾಗ ಅವರು ವೈರಿಗಳು ಬಿಟ್ಟುಹೋದ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸತೊಡಗಿದರು. ಆಗ ಗುಡ್ಡ ಮೇಲಿದ್ದ ಮುಸ್ಲಿಮರಿಗೆ ನಾವು ಹೋಗಿ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸದಿದ್ದರೆ ಅವೆಲ್ಲವೂ ಅವರ ಪಾಲಾಗಿ ನಮಗೆ ಏನೂ ದೊರೆಯುವುದಿಲ್ಲ ಎಂದು ಭಾವಿಸಿ ಗುಡ್ಡದ ಮೇಲಿಂದ ಇಳಿದು ಬಂದು ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸತೊಡಗಿದರು. ಇವರ ಈ ಭಾವನೆಯನ್ನು ಈ ವಚನದಲ್ಲಿ ತಿದ್ದಲಾಗಿದೆ. ಅಂದರೆ ಈ ಯುದ್ಧವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಯಕತ್ವದಲ್ಲಿ ನಡೆಯುತ್ತಿದೆ. ಯುದ್ಧದಲ್ಲಿ ದೊರೆತ ಸಾಮಗ್ರಿಗಳನ್ನು ಅವರು ಯೋಧರ ನಡುವೆ ನ್ಯಾಯಯುತವಾಗಿ ಪಾಲು ಮಾಡುವುದಿಲ್ಲ ಎಂದು ನೀವು ಭಾವಿಸುತ್ತೀರಾ? ನಿಮ್ಮ ಭಾವನೆ ತಪ್ಪು. ಒಬ್ಬ ಪ್ರವಾದಿ ಯಾವತ್ತೂ ಮೋಸ ಮಾಡುವುದು ಸಾಧ್ಯವಿಲ್ಲ.

التفاسير: