[1] ಪರಲೋಕಕ್ಕೆ ಹೋಲಿಸಿದಾಗ ಇಹಲೋಕವು ಅವರಿಗೆ ಬಹಳ ಕಡಿಮೆ ಅವಧಿಯದ್ದಾಗಿ ಭಾಸವಾಗುವುದು.
[1] ಭೂಮಿಯಲ್ಲಿರುವ ಪರ್ವತಗಳು, ನದಿಗಳು, ಸಮುದ್ರಗಳೆಲ್ಲವೂ ನಾಶವಾಗಿ ಭೂಮಿ ಯಾವುದೇ ಉಬ್ಬುತಗ್ಗುಗಳಿಲ್ಲದೆ ಸಮತಟ್ಟು ಮೈದಾನವಾಗಿ ಮಾರ್ಪಡುತ್ತದೆ. ನಂತರ ಒಂದು ಧ್ವನಿ ಕೇಳುತ್ತದೆ. ಜನರೆಲ್ಲರೂ ಆ ಧ್ವನಿಯನ್ನು ಹಿಂಬಾಲಿಸುತ್ತಾ ಹೋಗುತ್ತಾರೆ. ಆ ಧ್ವನಿ ಕರೆಯುವ ಕಡೆಗಲ್ಲದೆ ಅವರು ಒಂದು ಚೂರು ಕೂಡ ಅತ್ತಿತ್ತ ಚಲಿಸುವುದಿಲ್ಲ. ಅಲ್ಲಿನ ವಾತಾವರಣ ಸಂಪೂರ್ಣ ನಿಶ್ಶಬ್ದವಾಗಿರುತ್ತದೆ. ಪಿಸುಮಾತುಗಳಲ್ಲದೆ ಬೇರೇನೂ ಕೇಳುವುದಿಲ್ಲ.