Қуръони Карим маъноларининг таржимаси - Каннада тили таржимаси - Ҳамза Бетур

Бет рақами:close

external-link copy
79 : 10

وَقَالَ فِرْعَوْنُ ائْتُوْنِیْ بِكُلِّ سٰحِرٍ عَلِیْمٍ ۟

ಫರೋಹ ಹೇಳಿದನು: “ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ನನ್ನ ಬಳಿಗೆ ಕರೆತನ್ನಿ.” info
التفاسير:

external-link copy
80 : 10

فَلَمَّا جَآءَ السَّحَرَةُ قَالَ لَهُمْ مُّوْسٰۤی اَلْقُوْا مَاۤ اَنْتُمْ مُّلْقُوْنَ ۟

ಮಾಟಗಾರರು ಬಂದಾಗ ಮೂಸಾ ಅವರೊಡನೆ ಹೇಳಿದರು: “ನೀವು ಎಸೆಯುವುದನ್ನೆಲ್ಲಾ ಎಸೆಯಿರಿ.” info
التفاسير:

external-link copy
81 : 10

فَلَمَّاۤ اَلْقَوْا قَالَ مُوْسٰی مَا جِئْتُمْ بِهِ ۙ— السِّحْرُ ؕ— اِنَّ اللّٰهَ سَیُبْطِلُهٗ ؕ— اِنَّ اللّٰهَ لَا یُصْلِحُ عَمَلَ الْمُفْسِدِیْنَ ۟

ಅವರು ಎಸೆದಾಗ ಮೂಸಾ ಹೇಳಿದರು: “ನೀವು ತಂದಿರುವುದೆಲ್ಲವೂ ಮಾಟಗಳಾಗಿವೆ. ನಿಶ್ಚಯವಾಗಿಯೂ ಅಲ್ಲಾಹು ಅವೆಲ್ಲವನ್ನೂ ವಿಫಲಗೊಳಿಸುವನು. ನಿಶ್ಚಯವಾಗಿಯೂ ಕಿಡಿಗೇಡಿಗಳ ಕೃತ್ಯವನ್ನು ಅಲ್ಲಾಹು ಯಶಸ್ವಿಗೊಳಿಸುವುದಿಲ್ಲ. info
التفاسير:

external-link copy
82 : 10

وَیُحِقُّ اللّٰهُ الْحَقَّ بِكَلِمٰتِهٖ وَلَوْ كَرِهَ الْمُجْرِمُوْنَ ۟۠

ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸಾಬೀತುಪಡಿಸುವನು. ಅಪರಾಧಿಗಳು ಎಷ್ಟು ಅಸಹ್ಯಪಟ್ಟರೂ ಸಹ.” info
التفاسير:

external-link copy
83 : 10

فَمَاۤ اٰمَنَ لِمُوْسٰۤی اِلَّا ذُرِّیَّةٌ مِّنْ قَوْمِهٖ عَلٰی خَوْفٍ مِّنْ فِرْعَوْنَ وَمَلَاۡىِٕهِمْ اَنْ یَّفْتِنَهُمْ ؕ— وَاِنَّ فِرْعَوْنَ لَعَالٍ فِی الْاَرْضِ ۚ— وَاِنَّهٗ لَمِنَ الْمُسْرِفِیْنَ ۟

ಮೂಸಾರ ಜನರಲ್ಲಿ ಸೇರಿದ ಕೆಲವು ಯುವಕರ ಹೊರತು ಬೇರೆ ಯಾರೂ ಅವರಲ್ಲಿ ವಿಶ್ವಾಸವಿಡಲಿಲ್ಲ. ಅದೂ ಸಹ ಫರೋಹ ಮತ್ತು ಅವರ ಮುಖಂಡರು ಅವರನ್ನು ಹಿಂಸೆಗೆ ಗುರಿಯಾಗಿಸುವರೋ ಎಂಬ ಭಯದಿಂದ. ನಿಶ್ಚಯವಾಗಿಯೂ ಫರೋಹ‍ ಭೂಮಿಯಲ್ಲಿ ದರ್ಪ ತೋರುತ್ತಿದ್ದನು. ನಿಶ್ಚಯವಾಗಿಯೂ ಅವನು ಹದ್ದು ಮೀರಿದವನಾಗಿದ್ದನು. info
التفاسير:

external-link copy
84 : 10

وَقَالَ مُوْسٰی یٰقَوْمِ اِنْ كُنْتُمْ اٰمَنْتُمْ بِاللّٰهِ فَعَلَیْهِ تَوَكَّلُوْۤا اِنْ كُنْتُمْ مُّسْلِمِیْنَ ۟

ಮೂಸಾ ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರೆ ಅವನಲ್ಲಿ ಭರವಸೆಯಿಡಿ. ನೀವು ಮುಸಲ್ಮಾನರಾಗಿದ್ದರೆ.” info
التفاسير:

external-link copy
85 : 10

فَقَالُوْا عَلَی اللّٰهِ تَوَكَّلْنَا ۚ— رَبَّنَا لَا تَجْعَلْنَا فِتْنَةً لِّلْقَوْمِ الظّٰلِمِیْنَ ۟ۙ

ಆಗ ಅವರು ಹೇಳಿದರು: “ನಾವು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪರಿಪಾಲಕನೇ! ಈ ಅಕ್ರಮಿಗಳಾದ ಜನರಿಗೆ ನಮ್ಮನ್ನು ಪರೀಕ್ಷೆಯ ವಸ್ತುವಾಗಿ ಮಾಡಬೇಡ. info
التفاسير:

external-link copy
86 : 10

وَنَجِّنَا بِرَحْمَتِكَ مِنَ الْقَوْمِ الْكٰفِرِیْنَ ۟

ನಿನ್ನ ದಯೆಯಿಂದ ನಮ್ಮನ್ನು ಸತ್ಯನಿಷೇಧಿಗಳಾದ ಜನರಿಂದ ರಕ್ಷಿಸು.” info
التفاسير:

external-link copy
87 : 10

وَاَوْحَیْنَاۤ اِلٰی مُوْسٰی وَاَخِیْهِ اَنْ تَبَوَّاٰ لِقَوْمِكُمَا بِمِصْرَ بُیُوْتًا وَّاجْعَلُوْا بُیُوْتَكُمْ قِبْلَةً وَّاَقِیْمُوا الصَّلٰوةَ ؕ— وَبَشِّرِ الْمُؤْمِنِیْنَ ۟

ಮೂಸಾ ಮತ್ತು ಅವರ ಸಹೋದರನಿಗೆ ನಾವು ದೇವವಾಣಿಯನ್ನು ನೀಡಿದೆವು: “ನೀವು ನಿಮ್ಮ ಜನರಿಗೆ ಈಜಿಪ್ಟಿನಲ್ಲಿ ವಾಸ್ತವ್ಯಗಳನ್ನು ಮಾಡಿಕೊಡಿ, ಮತ್ತು ನಿಮ್ಮ ಮನೆಗಳನ್ನು ಆರಾಧನಾಲಯಗಳಾಗಿ ಮಾಡಿ ನಮಾಝನ್ನು ಸಂಸ್ಥಾಪಿಸಿರಿ. ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿ.”[1] info

[1] ನಿಮ್ಮ ಮನೆಗಳನ್ನು ನಮಾಝ್ ಮಾಡುವ ಸ್ಥಳಗಳನ್ನಾಗಿ ಮಾಡಿ ಮತ್ತು ಅವುಗಳನ್ನು ಬೈತುಲ್ ಮುಕದ್ದಸ್‌ನ ದಿಕ್ಕಿಗೆ ತಿರುಗಿಸಿ. ಹೀಗೆ ಮಾಡುವುದರಿಂದ ನಿಮಗೆ ಹೊರಗಿನ ಆರಾಧನಾಲಯಗಳಿಗೆ ಹೋಗಿ ನಮಾಝ್ ಮಾಡಬೇಕಾದ ಅಗತ್ಯ ಬರುವುದಿಲ್ಲ. ಹೊರಗೆ ಹೋದರೆ ಅಲ್ಲಿ ಫರೋಹನ ಜನರು ನಿಮ್ಮನ್ನು ಹಿಂಸಿಸುವ ಸಾಧ್ಯತೆಯಿದೆ.

التفاسير:

external-link copy
88 : 10

وَقَالَ مُوْسٰی رَبَّنَاۤ اِنَّكَ اٰتَیْتَ فِرْعَوْنَ وَمَلَاَهٗ زِیْنَةً وَّاَمْوَالًا فِی الْحَیٰوةِ الدُّنْیَا ۙ— رَبَّنَا لِیُضِلُّوْا عَنْ سَبِیْلِكَ ۚ— رَبَّنَا اطْمِسْ عَلٰۤی اَمْوَالِهِمْ وَاشْدُدْ عَلٰی قُلُوْبِهِمْ فَلَا یُؤْمِنُوْا حَتّٰی یَرَوُا الْعَذَابَ الْاَلِیْمَ ۟

ಮೂಸಾ ಹೇಳಿದರು: “ಓ ನಮ್ಮ ಪರಿಪಾಲಕನೇ! ನಿಶ್ಚಯವಾಗಿಯೂ ನೀನು ಫರೋಹ ಮತ್ತು ಅವನ ಜನರ ಮುಖಂಡರಿಗೆ ಇಹಲೋಕದಲ್ಲಿ ವೈಭವ ಮತ್ತು ಐಶ್ವರ್ಯವನ್ನು ನೀಡಿರುವೆ. ಓ ನಮ್ಮ ಪರಿಪಾಲಕನೇ! ಜನರನ್ನು ನಿನ್ನ ಮಾರ್ಗದಿಂದ ತಪ್ಪಿಸುವುದಕ್ಕಾಗಿ (ಅವರು ಅದನ್ನು ಬಳಸುತ್ತಾರೆ). ಓ ನಮ್ಮ ಪರಿಪಾಲಕನೇ! ಅವರ ಐಶ್ವರ್ಯವನ್ನು ನಾಶ ಮಾಡು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸು. ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ವಿಶ್ವಾಸವಿಡದಿರಲಿ.” info
التفاسير: