Қуръони Карим маъноларининг таржимаси - Каннадача таржима - Башир Майсури

external-link copy
34 : 4

اَلرِّجَالُ قَوّٰمُوْنَ عَلَی النِّسَآءِ بِمَا فَضَّلَ اللّٰهُ بَعْضَهُمْ عَلٰی بَعْضٍ وَّبِمَاۤ اَنْفَقُوْا مِنْ اَمْوَالِهِمْ ؕ— فَالصّٰلِحٰتُ قٰنِتٰتٌ حٰفِظٰتٌ لِّلْغَیْبِ بِمَا حَفِظَ اللّٰهُ ؕ— وَالّٰتِیْ تَخَافُوْنَ نُشُوْزَهُنَّ فَعِظُوْهُنَّ وَاهْجُرُوْهُنَّ فِی الْمَضَاجِعِ وَاضْرِبُوْهُنَّ ۚ— فَاِنْ اَطَعْنَكُمْ فَلَا تَبْغُوْا عَلَیْهِنَّ سَبِیْلًا ؕ— اِنَّ اللّٰهَ كَانَ عَلِیًّا كَبِیْرًا ۟

ಪುರಷರು ಸ್ತಿçÃಯರ ಮೇಲ್ವಿಚಾರಕರಾಗಿದ್ದಾರೆ. ಇದೇಕೆಂದರೆ ಅಲ್ಲಾಹನು ಅವರಲ್ಲಿ ಒಬ್ಬರನ್ನು ಇನ್ನೊಬ್ಬರ ಮೇಲೆ ಶ್ರೇಷ್ಠತೆ ನೀಡಿರುವುದರಿಂದಲೂ, ಪುರಷರು ತಮ್ಮ ಧನವನ್ನು ವ್ಯಯಿಸುವುದರಿಂದಲೂ ಆಗಿದೆ. ಇನ್ನು ಸುಖಿಲೆಯರು ಅನುಸರಣಾ ಮನೋಭಾವವುಳ್ಳವರಾದ ಸ್ತಿçÃಯರು, ಪತಿಯ ಅನುಪಸ್ಥಿತಿಯಲ್ಲಿ ಅಲ್ಲಾಹನ ರಕ್ಷಣೆಯಲ್ಲಿದ್ದು, ಪತಿಯ ಸಂಪತ್ತು ಮತ್ತು ಶೀಲವನ್ನು ಸಂರಕ್ಷಿಸುವವರಾಗಿದ್ದಾರೆ. ಮತ್ತು ಸ್ತಿçÃಯರ ಅವಿಧೇಯತೆಯಿಂದ ನೀವು ಭಯಪಟ್ಟರೆ ಅವರನ್ನು ನೀವು ಉಪದೇಶಿಸಿರಿ. (ಅದು ಫಲಕಾರಿಯಾಗದಿದ್ದರೆ) ಅವರನ್ನು ಪ್ರತ್ಯೇಕ ಹಾಸಿಗೆಯಲ್ಲಿ ಬಿಟ್ಟುಬಿಡಿರಿ. (ಅದೂ ಫಲಕಾರಿಯಾಗದಿದ್ದರೆ) ಅವರಿಗೆ ಹೊಡೆಯಿರಿ. (ಸಭ್ಯತೆಯನ್ನು ಕಲಿಸಲು) ಅನಂತರ ಅವರು ನಿಮಗೆ ವಿಧೇಯತೆ ತೋರಿದರೆ ಅವರ ವಿರುದ್ಧ ಬೇರೆ ಮಾರ್ಗವನ್ನು ಹುಡುಕಬೇಡಿರಿ. ನಿಸ್ಸಂದೇಹವಾಗಿಯೂ ಅಲ್ಲಾಹನು ಮಹೋನ್ನತನೂ, ಮಹಾನನೂ ಆಗಿದ್ದಾನೆ. info
التفاسير: