Қуръони Карим маъноларининг таржимаси - Каннадача таржима - Башир Майсури

external-link copy
49 : 3

وَرَسُوْلًا اِلٰی بَنِیْۤ اِسْرَآءِیْلَ ۙ۬— اَنِّیْ قَدْ جِئْتُكُمْ بِاٰیَةٍ مِّنْ رَّبِّكُمْ ۙۚ— اَنِّیْۤ اَخْلُقُ لَكُمْ مِّنَ الطِّیْنِ كَهَیْـَٔةِ الطَّیْرِ فَاَنْفُخُ فِیْهِ فَیَكُوْنُ طَیْرًا بِاِذْنِ اللّٰهِ ۚ— وَاُبْرِئُ الْاَكْمَهَ وَالْاَبْرَصَ وَاُحْیِ الْمَوْتٰی بِاِذْنِ اللّٰهِ ۚ— وَاُنَبِّئُكُمْ بِمَا تَاْكُلُوْنَ وَمَا تَدَّخِرُوْنَ ۙ— فِیْ بُیُوْتِكُمْ ؕ— اِنَّ فِیْ ذٰلِكَ لَاٰیَةً لَّكُمْ اِنْ كُنْتُمْ مُّؤْمِنِیْنَ ۟ۚ

ಮತ್ತು ಅವರನ್ನು ಇಸ್ರಾಯೀಲ್ ಸಂತತಿಯೆಡೆಗೆ ಸಂದೇಶವಾಹಕರನ್ನಾಗಿ ನೇಮಿಸುವನು (ಅವರು ಹೇಳುವರು:) 'ನಾನು ನಿಮ್ಮ ಬಳಿ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ನಾನು ನಿಮಗಾಗಿ ಆವೆ ಮಣ್ಣಿನ ಪಕ್ಷಿಯ ಆಕೃತಿಯಂತೆ ಮಾಡಿ, ನಾನದರಲ್ಲಿ ಊದಿದಾಗ ಅದು ಅಲ್ಲಾಹನ ಅಪ್ಪಣೆಯಿಂದ ಪಕ್ಷಿಯಾಗಿಬಿಡುವುದು ಮತ್ತು ಅಲ್ಲಾಹನ ಅಪ್ಪಣೆಯಿಂದ ನಾನು ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುವೆನು ಮತು ಮೃತರನ್ನು ಜೀವಂತಗೊಳಿಸುವೆನು. ನೀವು ತಿನ್ನುವುದನ್ನು ಮತ್ತು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಿಮಗೆ ತಿಳಿಸಿಕೊಡುವೆನು. ನೀವು ವಿಶ್ವಾಸವಿರಿಸುವವರಾಗಿದ್ದರೆ ನಿಸ್ಸಂಶಯವಾಗಿಯು ಇದರಲ್ಲಿ ನಿಮಗೆ ದೃಷ್ಟಾಂತವಿದೆ. info
التفاسير: