قرآن کریم کے معانی کا ترجمہ - کنڑ ترجمہ - حمزہ بتور

external-link copy
169 : 7

فَخَلَفَ مِنْ بَعْدِهِمْ خَلْفٌ وَّرِثُوا الْكِتٰبَ یَاْخُذُوْنَ عَرَضَ هٰذَا الْاَدْنٰی وَیَقُوْلُوْنَ سَیُغْفَرُ لَنَا ۚ— وَاِنْ یَّاْتِهِمْ عَرَضٌ مِّثْلُهٗ یَاْخُذُوْهُ ؕ— اَلَمْ یُؤْخَذْ عَلَیْهِمْ مِّیْثَاقُ الْكِتٰبِ اَنْ لَّا یَقُوْلُوْا عَلَی اللّٰهِ اِلَّا الْحَقَّ وَدَرَسُوْا مَا فِیْهِ ؕ— وَالدَّارُ الْاٰخِرَةُ خَیْرٌ لِّلَّذِیْنَ یَتَّقُوْنَ ؕ— اَفَلَا تَعْقِلُوْنَ ۟

ನಂತರ ಅವರ ಹಿಂದೆಯೇ ಅವರ ನಂತರದವರು ಬಂದರು. ಅವರು ಗ್ರಂಥದ ಉತ್ತರಾಧಿಕಾರವನ್ನು ವಹಿಸಿಕೊಂಡರು. ಅವರು ಇಹಲೋಕ ಜೀವನದ ಕೀಳು ವಸ್ತುಗಳನ್ನು ಪಡೆಯುತ್ತಾರೆ. ಅವರು ಹೇಳುತ್ತಾರೆ: “ನಮ್ಮನ್ನು ಕ್ಷಮಿಸಲಾಗುತ್ತದೆ.”[1] ಅದರಂತಹ ಬೇರೆ ವಸ್ತುಗಳು ದೊರಕಿದರೂ ಅವರು ಅದನ್ನು ಪಡೆಯುತ್ತಾರೆ. ಅಲ್ಲಾಹನ ಮೇಲೆ ಸತ್ಯವಲ್ಲದೆ ಬೇರೇನೂ ಹೇಳುವುದಿಲ್ಲ ಮತ್ತು ಗ್ರಂಥವನ್ನು ಅಧ್ಯಯನ ಮಾಡಿ (ಅದರಂತೆ ನಡೆಯುತ್ತೇವೆ) ಎಂದು ಅವರಿಂದ ಗ್ರಂಥದ ಮೂಲಕ ಕರಾರು ಪಡೆಯಲಾಗಿಲ್ಲವೇ? ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮ. ನೀವು ಅರ್ಥಮಾಡಿಕೊಳ್ಳುವುದಿಲ್ಲವೇ? info

[1] ಯಹೂದಿಗಳು ಸ್ವಯಂ ಅವರನ್ನು ದೇವರ ಮಕ್ಕಳು ಮತ್ತು ಶ್ರೇಷ್ಠ ಜನರೆಂದು ನಂಬುತ್ತಾರೆ. ಆದ್ದರಿಂದ ಅವರು ಏನೇ ತಪ್ಪು ಮಾಡಿದರೂ ಅಲ್ಲಾಹು ಅವರನ್ನು ಕ್ಷಮಿಸುತ್ತಾನೆಂಬ ಭಾವನೆ ಅವರಲ್ಲಿದೆ.

التفاسير: