قرآن کریم کے معانی کا ترجمہ - کنڑ ترجمہ - حمزہ بتور

صفحہ نمبر:close

external-link copy
179 : 7

وَلَقَدْ ذَرَاْنَا لِجَهَنَّمَ كَثِیْرًا مِّنَ الْجِنِّ وَالْاِنْسِ ۖؗ— لَهُمْ قُلُوْبٌ لَّا یَفْقَهُوْنَ بِهَا ؗ— وَلَهُمْ اَعْیُنٌ لَّا یُبْصِرُوْنَ بِهَا ؗ— وَلَهُمْ اٰذَانٌ لَّا یَسْمَعُوْنَ بِهَا ؕ— اُولٰٓىِٕكَ كَالْاَنْعَامِ بَلْ هُمْ اَضَلُّ ؕ— اُولٰٓىِٕكَ هُمُ الْغٰفِلُوْنَ ۟

ಜಿನ್ನ್ ಮತ್ತು ಮನುಷ್ಯರಲ್ಲಿ ಸೇರಿದ ಬಹುಪಾಲನ್ನು ನಾವು ನರಕಕ್ಕಾಗಿ ಸೃಷ್ಟಿಸಿದ್ದೇವೆ. ಅವರಿಗೆ ಹೃದಯಗಳಿವೆ; ಆದರೆ ಅವರು ಅವುಗಳ ಮೂಲಕ ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ಕಣ್ಣುಗಳಿವೆ; ಆದರೆ ಅವರು ಅವುಗಳ ಮೂಲಕ ನೋಡುವುದಿಲ್ಲ. ಅವರಿಗೆ ಕಿವಿಗಳಿವೆ; ಆದರೆ ಅವರು ಅವುಗಳ ಮೂಲಕ ಕೇಳುವುದಿಲ್ಲ. ಅವರು ಜಾನುವಾರುಗಳಂತೆ. ಅಲ್ಲ, ಅವರು ಅತ್ಯಧಿಕ ದಾರಿತಪ್ಪಿದವರು. ಅವರೇ ನಿರ್ಲಕ್ಷ್ಯದಲ್ಲಿರುವವರು. info
التفاسير:

external-link copy
180 : 7

وَلِلّٰهِ الْاَسْمَآءُ الْحُسْنٰی فَادْعُوْهُ بِهَا ۪— وَذَرُوا الَّذِیْنَ یُلْحِدُوْنَ فِیْۤ اَسْمَآىِٕهٖ ؕ— سَیُجْزَوْنَ مَا كَانُوْا یَعْمَلُوْنَ ۟

ಅಲ್ಲಾಹನಿಗೆ ಅತಿಸುಂದರವಾದ ಹೆಸರುಗಳಿವೆ. ಆದ್ದರಿಂದ ಅವುಗಳ ಮೂಲಕ ಅವನನ್ನು ಕರೆದು ಪ್ರಾರ್ಥಿಸಿರಿ. ಅವನ ಹೆಸರುಗಳ ವಿಷಯದಲ್ಲಿ ವಾಮಮಾರ್ಗವನ್ನು ತುಳಿಯುವವರನ್ನು ಬಿಟ್ಟುಬಿಡಿ. ಅವರು ಮಾಡಿದ ಕೃತ್ಯಗಳ ಪ್ರತಿಫಲವನ್ನು ಅವರಿಗೆ ಸದ್ಯವೇ ನೀಡಲಾಗುವುದು. info
التفاسير:

external-link copy
181 : 7

وَمِمَّنْ خَلَقْنَاۤ اُمَّةٌ یَّهْدُوْنَ بِالْحَقِّ وَبِهٖ یَعْدِلُوْنَ ۟۠

ನಾವು ಸೃಷ್ಟಿಸಿದ ಸೃಷ್ಟಿಗಳಲ್ಲಿ ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುವ ಮತ್ತು ಅದರ ಆಧಾರದಲ್ಲಿ ನ್ಯಾಯ ಸ್ಥಾಪಿಸುವ ಒಂದು ಸಮುದಾಯವಿದೆ. info
التفاسير:

external-link copy
182 : 7

وَالَّذِیْنَ كَذَّبُوْا بِاٰیٰتِنَا سَنَسْتَدْرِجُهُمْ مِّنْ حَیْثُ لَا یَعْلَمُوْنَ ۟ۚ

ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ತಿಳಿಯದ ರೀತಿಯಲ್ಲಿ ನಾವು ಅವರನ್ನು ಹಂತ ಹಂತವಾಗಿ ಆವರಿಸಿಕೊಳ್ಳುವೆವು. info
التفاسير:

external-link copy
183 : 7

وَاُمْلِیْ لَهُمْ ؕ— اِنَّ كَیْدِیْ مَتِیْنٌ ۟

ನಾನು ಅವರಿಗೆ ಕಾಲಾವಕಾಶ ನೀಡುವೆನು. ನಿಶ್ಚಯವಾಗಿಯೂ ನನ್ನ ತಂತ್ರಗಾರಿಕೆಯು ಬಲಿಷ್ಠವಾಗಿದೆ. info
التفاسير:

external-link copy
184 : 7

اَوَلَمْ یَتَفَكَّرُوْا ٚ— مَا بِصَاحِبِهِمْ مِّنْ جِنَّةٍ ؕ— اِنْ هُوَ اِلَّا نَذِیْرٌ مُّبِیْنٌ ۟

ಅವರು ಆಲೋಚಿಸುವುದಿಲ್ಲವೇ? ಅವರ ಸಂಗಡಿಗನಿಗೆ (ಮುಹಮ್ಮದರಿಗೆ) ಯಾವುದೇ ರೀತಿಯ ಬುದ್ಧಿಭ್ರಮಣೆಯಿಲ್ಲ. ಅವರೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರವಾಗಿದ್ದಾರೆ. info
التفاسير:

external-link copy
185 : 7

اَوَلَمْ یَنْظُرُوْا فِیْ مَلَكُوْتِ السَّمٰوٰتِ وَالْاَرْضِ وَمَا خَلَقَ اللّٰهُ مِنْ شَیْءٍ ۙ— وَّاَنْ عَسٰۤی اَنْ یَّكُوْنَ قَدِ اقْتَرَبَ اَجَلُهُمْ ۚ— فَبِاَیِّ حَدِیْثٍ بَعْدَهٗ یُؤْمِنُوْنَ ۟

ಭೂಮ್ಯಾಕಾಶಗಳ ಸಾಮ್ರಾಜ್ಯಗಳನ್ನು ಮತ್ತು ಅಲ್ಲಾಹು ಸೃಷ್ಟಿಸಿದ ಎಲ್ಲಾ ವಸ್ತುಗಳನ್ನು ಹಾಗೂ ಅವರ ಜೀವಿತಾವಧಿ ಸಮೀಪಿಸಿರಬಹುದೆಂದು ಅವರು ಆಲೋಚಿಸಿ ನೋಡುವುದಿಲ್ಲವೇ? ಇದರ (ಕುರ್‌ಆನಿನ) ಬಳಿಕ ಅವರು ಯಾವ ಸಮಾಚಾರದಲ್ಲಿ ವಿಶ್ವಾಸವಿಡುವರು? info
التفاسير:

external-link copy
186 : 7

مَنْ یُّضْلِلِ اللّٰهُ فَلَا هَادِیَ لَهٗ ؕ— وَیَذَرُهُمْ فِیْ طُغْیَانِهِمْ یَعْمَهُوْنَ ۟

ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಸನ್ಮಾರ್ಗ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಅವರು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ಅವನು ಅವರನ್ನು ಬಿಟ್ಟುಬಿಡುವನು. info
التفاسير:

external-link copy
187 : 7

یَسْـَٔلُوْنَكَ عَنِ السَّاعَةِ اَیَّانَ مُرْسٰىهَا ؕ— قُلْ اِنَّمَا عِلْمُهَا عِنْدَ رَبِّیْ ۚ— لَا یُجَلِّیْهَا لِوَقْتِهَاۤ اِلَّا هُوَ ؔؕۘ— ثَقُلَتْ فِی السَّمٰوٰتِ وَالْاَرْضِ ؕ— لَا تَاْتِیْكُمْ اِلَّا بَغْتَةً ؕ— یَسْـَٔلُوْنَكَ كَاَنَّكَ حَفِیٌّ عَنْهَا ؕ— قُلْ اِنَّمَا عِلْمُهَا عِنْدَ اللّٰهِ وَلٰكِنَّ اَكْثَرَ النَّاسِ لَا یَعْلَمُوْنَ ۟

ಅವರು ಅಂತಿಮದಿನದ ಬಗ್ಗೆ—“ಅದು ಯಾವಾಗ ಸಂಭವಿಸುತ್ತದೆ” ಎಂದು ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ. ಅದರ ಸಮಯದಲ್ಲಿ ಅವನಲ್ಲದೆ ಯಾರೂ ಅದನ್ನು ಪ್ರಕಟಗೊಳಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿ ಅದು ಅತ್ಯಂತ ಭಾರವಿರುವ (ಭಯಾನಕ) ಸಂಗತಿಯಾಗಿದೆ. ಅದು ಅನಿರೀಕ್ಷಿತವಾಗಿಯೇ ನಿಮ್ಮ ಬಳಿಗೆ ಬರುತ್ತದೆ.” ನಿಮಗೆ ಅದರ ಬಗ್ಗೆ ಜ್ಞಾನವಿದೆಯೆಂಬ ಭಾವನೆಯಿಂದ ಅವರು ನಿಮ್ಮಲ್ಲಿ ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ.” ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. info
التفاسير: