قرآن کریم کے معانی کا ترجمہ - کنڑ ترجمہ - حمزہ بتور

external-link copy
81 : 6

وَكَیْفَ اَخَافُ مَاۤ اَشْرَكْتُمْ وَلَا تَخَافُوْنَ اَنَّكُمْ اَشْرَكْتُمْ بِاللّٰهِ مَا لَمْ یُنَزِّلْ بِهٖ عَلَیْكُمْ سُلْطٰنًا ؕ— فَاَیُّ الْفَرِیْقَیْنِ اَحَقُّ بِالْاَمْنِ ۚ— اِنْ كُنْتُمْ تَعْلَمُوْنَ ۟ۘ

ನೀವು (ಅಲ್ಲಾಹನೊಡನೆ) ಸಹಭಾಗಿಯಾಗಿ ಮಾಡಿದವರನ್ನು ನಾನು ಹೇಗೆ ಭಯಪಡಲಿ? ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಅವತೀರ್ಣಗೊಳಿಸದ ವಸ್ತುಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಲು ನೀವು (ಸ್ವಲ್ಪವೂ) ಭಯಪಡುವುದಿಲ್ಲ. ಹೀಗಿರುವಾಗ ಈ ಎರಡು ಪಕ್ಷಗಳಲ್ಲಿ ನಿರ್ಭಯಕ್ಕೆ ಹೆಚ್ಚು ಅರ್ಹರು ಯಾರು? ನಿಮಗೆ ತಿಳಿದಿದ್ದರೆ ಹೇಳಿರಿ.”[1] info

[1] ಅಲ್ಲಾಹನ ಸೃಷ್ಟಿಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಿ ನೀವು ಅವರನ್ನು ದೇವರೆಂದು ಕರೆದು ಆರಾಧಿಸುತ್ತೀರಿ. ಅವರು ದೇವರು ಎನ್ನುವುದಕ್ಕೆ ಅಲ್ಲಾಹು ಯಾವುದೇ ಪುರಾವೆಯನ್ನೂ ಇಳಿಸಿಲ್ಲ. ಅಲ್ಲಾಹನ ಆಜ್ಞೆಗೆ ವಿರುದ್ಧವಾಗಿ ಅವರನ್ನು ದೇವರನ್ನಾಗಿ ಮಾಡಿ ಪ್ರಾರ್ಥಿಸಲು ನೀವು ಸ್ವಲ್ಪವೂ ಭಯಪಡುವುದಿಲ್ಲ. ನಾನು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಅವನನ್ನು ಮಾತ್ರ ಭಯಪಡುತ್ತೇನೆ. ಹೀಗಿರುವಾಗ, ಹೆಚ್ಚು ನಿರ್ಭಯರಾಗಿರುವವರು ಯಾರು? ನಾನೋ ಅಥವಾ ನೀವೋ? ಸರಿಯಾಗಿ ಆಲೋಚನೆ ಮಾಡಿ ಹೇಳಿ.

التفاسير: