قرآن کریم کے معانی کا ترجمہ - کنڑ ترجمہ - حمزہ بتور

external-link copy
93 : 5

لَیْسَ عَلَی الَّذِیْنَ اٰمَنُوْا وَعَمِلُوا الصّٰلِحٰتِ جُنَاحٌ فِیْمَا طَعِمُوْۤا اِذَا مَا اتَّقَوْا وَّاٰمَنُوْا وَعَمِلُوا الصّٰلِحٰتِ ثُمَّ اتَّقَوْا وَّاٰمَنُوْا ثُمَّ اتَّقَوْا وَّاَحْسَنُوْا ؕ— وَاللّٰهُ یُحِبُّ الْمُحْسِنِیْنَ ۟۠

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಈ ಹಿಂದೆ ಏನು ಸೇವಿಸಿದ್ದಾರೋ ಅದರಲ್ಲಿ ಅವರಿಗೆ ದೋಷವಿಲ್ಲ—ಅವರು ಅಲ್ಲಾಹನನ್ನು ಭಯಪಟ್ಟು, ವಿಶ್ವಾಸವಿಟ್ಟು, ಸತ್ಕರ್ಮವೆಸಗಿದರೆ, ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ವಿಶ್ವಾಸವಿಟ್ಟರೆ ಮತ್ತು ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ಒಳಿತು ಮಾಡಿದರೆ. ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.[1] info

[1] ಇಸ್ಲಾಮ್ ಮದ್ಯಪಾನವನ್ನು ಹಂತ ಹಂತವಾಗಿ ನಿಷೇಧಿಸಿತು. ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಮೊದಲು ಅದರ ಹಾನಿಗಳ ಬಗ್ಗೆ ಎಚ್ಚರಿಸಲಾಯಿತು. ಪಾನಮತ್ತರಾದ ಸ್ಥಿತಿಯಲ್ಲಿ ನಮಾಝ್ ಮಾಡುವುದನ್ನು ವಿರೋಧಿಸಲಾಯಿತು. ಇನ್ನಾದರೂ ನೀವು ಅದನ್ನು ನಿಲ್ಲಿಸುವಿರಾ ಎಂಬ ವಚನದ (91) ಮೂಲಕ ಸಂಪೂರ್ಣ ಪಾನನಿಷೇಧ ಜಾರಿಗೆ ಬಂತು. ಪಾನನಿಷೇಧ ಸಂಪೂರ್ಣ ಜಾರಿಯಾಗುವ ಮೊದಲು ಮದ್ಯಪಾನ ಮಾಡಿದವರಿಗೆ ಶಿಕ್ಷೆಯಿಲ್ಲ ಎಂದು ಈ ವಚನವು ಸ್ಪಷ್ಟಪಡಿಸುತ್ತದೆ.

التفاسير: