قرآن کریم کے معانی کا ترجمہ - کنڑ ترجمہ - حمزہ بتور

صفحہ نمبر:close

external-link copy
39 : 29

وَقَارُوْنَ وَفِرْعَوْنَ وَهَامٰنَ ۫— وَلَقَدْ جَآءَهُمْ مُّوْسٰی بِالْبَیِّنٰتِ فَاسْتَكْبَرُوْا فِی الْاَرْضِ وَمَا كَانُوْا سٰبِقِیْنَ ۟ۚ

ನಾವು ಕಾರೂನ್, ಫರೋಹ‍ ಮತ್ತು ಹಾಮಾನನನ್ನು ಕೂಡ ನಾಶ ಮಾಡಿದೆವು. ಮೂಸಾ ಅವರ ಬಳಿಗೆ ಸ್ಪಷ್ಟವಾದ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಆಗ ಅವರು ಭೂಮಿಯಲ್ಲಿ ಅಹಂಕಾರದಿಂದ ಮೆರೆದರು. ಆದರೆ ಅವರಿಗೆ ನಮ್ಮನ್ನು ಮೀರಿ ಹೋಗಲು ಸಾಧ್ಯವಾಗಲಿಲ್ಲ. info
التفاسير:

external-link copy
40 : 29

فَكُلًّا اَخَذْنَا بِذَنْۢبِهٖ ۚ— فَمِنْهُمْ مَّنْ اَرْسَلْنَا عَلَیْهِ حَاصِبًا ۚ— وَمِنْهُمْ مَّنْ اَخَذَتْهُ الصَّیْحَةُ ۚ— وَمِنْهُمْ مَّنْ خَسَفْنَا بِهِ الْاَرْضَ ۚ— وَمِنْهُمْ مَّنْ اَغْرَقْنَا ۚ— وَمَا كَانَ اللّٰهُ لِیَظْلِمَهُمْ وَلٰكِنْ كَانُوْۤا اَنْفُسَهُمْ یَظْلِمُوْنَ ۟

ಹೀಗೆ ನಾವು ಪ್ರತಿಯೊಬ್ಬರನ್ನೂ ಅವರು ಮಾಡಿದ ಪಾಪಗಳಿಗಾಗಿ ಹಿಡಿದು ಶಿಕ್ಷಿಸಿದೆವು. ಅವರಲ್ಲಿ ಕೆಲವರ ವಿರುದ್ಧ ನಾವು ಕಲ್ಲುಗಳ ಬಿರುಗಾಳಿಯನ್ನು ಕಳುಹಿಸಿದೆವು, ಅವರಲ್ಲಿ ಕೆಲವರನ್ನು ಚೀತ್ಕಾರವು ಹಿಡಿದು ಬಿಟ್ಟಿತು, ಅವರಲ್ಲಿ ಕೆಲವರನ್ನು ನಾವು ಭೂಮಿಯಲ್ಲಿ ಹುದುಗಿಸಿದೆವು ಮತ್ತು ಅವರಲ್ಲಿ ಕೆಲವರನ್ನು ನೀರಿನಲ್ಲಿ ಮುಳುಗಿಸಿ ಕೊಂದೆವು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ಸ್ವತಃ ಅವರೇ ಅವರೊಡನೆ ಅನ್ಯಾಯವೆಸಗಿದರು. info
التفاسير:

external-link copy
41 : 29

مَثَلُ الَّذِیْنَ اتَّخَذُوْا مِنْ دُوْنِ اللّٰهِ اَوْلِیَآءَ كَمَثَلِ الْعَنْكَبُوْتِ ۚ— اِتَّخَذَتْ بَیْتًا ؕ— وَاِنَّ اَوْهَنَ الْبُیُوْتِ لَبَیْتُ الْعَنْكَبُوْتِ ۘ— لَوْ كَانُوْا یَعْلَمُوْنَ ۟

ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ರಕ್ಷಕರನ್ನಾಗಿ ಸ್ವೀಕರಿಸಿದವರ ಉದಾಹರಣೆಯು ಒಂದು ಜೇಡದಂತೆ. ಅದು ಒಂದು ಮನೆಯನ್ನು ಕಟ್ಟಿತು. ಮನೆಗಳಲ್ಲೇ ಅತ್ಯಂತ ದುರ್ಬಲ ಮನೆಯು ಜೇಡನ ಮನೆಯಾಗಿದೆ. ಅವರು ತಿಳಿಯುವವರಾಗಿದ್ದರೆ! info
التفاسير:

external-link copy
42 : 29

اِنَّ اللّٰهَ یَعْلَمُ مَا یَدْعُوْنَ مِنْ دُوْنِهٖ مِنْ شَیْءٍ ؕ— وَهُوَ الْعَزِیْزُ الْحَكِیْمُ ۟

ಅವರು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುವ ಎಲ್ಲಾ ವಸ್ತುಗಳ ಬಗ್ಗೆಯೂ ಅಲ್ಲಾಹನಿಗೆ ಸ್ಪಷ್ಟ ಜ್ಞಾನವಿದೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
43 : 29

وَتِلْكَ الْاَمْثَالُ نَضْرِبُهَا لِلنَّاسِ ۚ— وَمَا یَعْقِلُهَاۤ اِلَّا الْعٰلِمُوْنَ ۟

ನಾವು ಈ ಉದಾಹರಣೆಗಳನ್ನು ಜನರಿಗೆ ವಿವರಿಸಿಕೊಡುತ್ತೇವೆ. ಜ್ಞಾನವಿರುವವರು ಮಾತ್ರ ಅವುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. info
التفاسير:

external-link copy
44 : 29

خَلَقَ اللّٰهُ السَّمٰوٰتِ وَالْاَرْضَ بِالْحَقِّ ؕ— اِنَّ فِیْ ذٰلِكَ لَاٰیَةً لِّلْمُؤْمِنِیْنَ ۟۠

ಅಲ್ಲಾಹು ಭೂಮ್ಯಾಕಾಶಗಳನ್ನು ಸತ್ಯ ಸಮೇತ ಸೃಷ್ಟಿಸಿದ್ದಾನೆ. ನಿಶ್ಚಯವಾಗಿಯೂ ಅದರಲ್ಲಿ ಸತ್ಯವಿಶ್ವಾಸಿಗಳಿಗೆ ದೃಷ್ಟಾಂತವಿದೆ. info
التفاسير:

external-link copy
45 : 29

اُتْلُ مَاۤ اُوْحِیَ اِلَیْكَ مِنَ الْكِتٰبِ وَاَقِمِ الصَّلٰوةَ ؕ— اِنَّ الصَّلٰوةَ تَنْهٰی عَنِ الْفَحْشَآءِ وَالْمُنْكَرِ ؕ— وَلَذِكْرُ اللّٰهِ اَكْبَرُ ؕ— وَاللّٰهُ یَعْلَمُ مَا تَصْنَعُوْنَ ۟

ನಿಮಗೆ ದೇವವಾಣಿಯ ಮೂಲಕ ನೀಡಲಾದ ಗ್ರಂಥವನ್ನು ಪಠಿಸಿರಿ ಮತ್ತು ನಮಾಝನ್ನು ಸಂಸ್ಥಾಪಿಸಿರಿ. ನಿಶ್ಚಯವಾಗಿಯೂ ನಮಾಝ್ ಅಶ್ಲೀಲ ಕೃತ್ಯಗಳಿಂದ ಮತ್ತು ದುಷ್ಕರ್ಮಗಳಿಂದ ತಡೆಯುತ್ತದೆ. ಅಲ್ಲಾಹನ ಸ್ಮರಣೆಯು ಅತಿಶ್ರೇಷ್ಠವಾಗಿದೆ. ನೀವು ಮಾಡುತ್ತಿರುವ ಕರ್ಮಗಳನ್ನು ಅಲ್ಲಾಹು ತಿಳಿಯುತ್ತಾನೆ. info
التفاسير: