قرآن کریم کے معانی کا ترجمہ - کنڑ ترجمہ - حمزہ بتور

external-link copy
40 : 20

اِذْ تَمْشِیْۤ اُخْتُكَ فَتَقُوْلُ هَلْ اَدُلُّكُمْ عَلٰی مَنْ یَّكْفُلُهٗ ؕ— فَرَجَعْنٰكَ اِلٰۤی اُمِّكَ كَیْ تَقَرَّ عَیْنُهَا وَلَا تَحْزَنَ ؕ۬— وَقَتَلْتَ نَفْسًا فَنَجَّیْنٰكَ مِنَ الْغَمِّ وَفَتَنّٰكَ فُتُوْنًا ۫۬— فَلَبِثْتَ سِنِیْنَ فِیْۤ اَهْلِ مَدْیَنَ ۙ۬— ثُمَّ جِئْتَ عَلٰی قَدَرٍ یّٰمُوْسٰی ۟

ನಿಮ್ಮ ಸಹೋದರಿ ನಡೆಯುತ್ತಾ ಬಂದ ಸಂದರ್ಭ. ಅವಳು ಹೇಳಿದಳು: “ಈ ಮಗುವಿನ ಲಾಲನೆ-ಪಾಲನೆ ಮಾಡುವ ಒಬ್ಬರನ್ನು ನಾನು ನಿಮಗೆ ತೋರಿಸಿಕೊಡಲೇ?” ಹೀಗೆ ನಾವು ನಿಮ್ಮನ್ನು ನಿಮ್ಮ ತಾಯಿಗೆ ಹಿಂದಿರುಗಿಸಿದೆವು. ಆಕೆಯ ಕಣ್ಮನ ತಣಿಯುವುದಕ್ಕಾಗಿ ಮತ್ತು ಆಕೆ ದುಃಖಪಡದಿರುವುದಕ್ಕಾಗಿ. ನೀವು ಒಬ್ಬ ವ್ಯಕ್ತಿಯನ್ನು ಕೊಂದಿರಿ. ಆಗ ನಾವು ನಿಮ್ಮನ್ನು ಆ ಸಂಕಟದಿಂದ ಪಾರು ಮಾಡಿದೆವು. ನಾವು ನಿಮ್ಮನ್ನು ಅನೇಕ ವಿಧಗಳಿಂದ ಪರೀಕ್ಷಿಸಿದೆವು. ನಂತರ ನೀವು ಮದ್ಯನ್ ಗೋತ್ರದವರೊಡನೆ ಹಲವಾರು ವರ್ಷ ವಾಸಿಸಿದಿರಿ. ಓ ಮೂಸಾ! ನಂತರ ನನ್ನ ನಿರ್ಣಯದಂತೆ ನೀವು ಇಲ್ಲಿಗೆ ಬಂದಿದ್ದೀರಿ. info
التفاسير: